ಶೇ. 100ರಷ್ಟು ಇವಿಎಂ -ವಿವಿಪ್ಯಾಟ್‌ ವೆರಿಫಿಕೇಶನ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಶೇ. 100ರಷ್ಟು ಇವಿಎಂ -ವಿವಿಪ್ಯಾಟ್‌ ವೆರಿಫಿಕೇಶನ್‌ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

ಇವಿಎಂ ಮತಗಳನ್ನು ಪೂರ್ಣವಾಗಿ ವಿವಿಪ್ಯಾಟ್ ಚೀಟಿಗಳಿಂದ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಇದನ್ನೂ ಓದಿ: ಮತದಾರರಿಗೆ ಕನ್ನಡದಲ್ಲೇ ಪ್ರಧಾನಿ ಮೋದಿ ಸಂದೇಶ – ಹಕ್ಕು ಚಲಾಯಿಸಿದ ಮಾಜಿ ಪ್ರಧಾನಿ ಹೆಚ್‌ಡಿಡಿ, ಸಿಎಂ ಸಿದ್ದರಾಮಯ್ಯ

ಮುಂದುವರಿದ ದೇಶಗಳಲ್ಲಿ ಇವಿಎಂ ಬಳಕೆ ಇಲ್ಲ. ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲಾಗುತ್ತದೆ. ಹೀಗಾಗಿ ಭಾರತದಲ್ಲೂ ಕೂಟ ಬ್ಯಾಲೆಟ್‌  ಪೇಪರ್‌ನಲ್ಲಿ ಚುನಾವಣೆ ನಡೆಸಬೇಕು. ಇದರ ಜೊತೆ ವಿವಿಪ್ಯಾಟ್‌ನಲ್ಲಿ ಮುದ್ರಣವಾದ ಎಲ್ಲಾ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು . ಅಷ್ಟೇ ಅಲ್ಲದೇ ವಿವಿಪ್ಯಾಟ್‌ನಲ್ಲಿ ಮುದ್ರಣವಾದ ಸ್ಲಿಪ್‌ಗಳನ್ನು ಮತದಾರರ ಕೈಗೆ ನೀಡಿ ಆತ ಅದನ್ನು ಬಾಕ್ಸ್‌ ಹಾಕಬೇಕೆಂದು ಕೋರಿ ಎಂದು ಅರ್ಜಿ ಸಲ್ಲಿಕೆಯಾಗಿತ್ತು. ಈ ಎಲ್ಲಾ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿದ್ದ  ನ್ಯಾ. ಸಂಜೀವ್ ಖನ್ನಾ ಮತ್ತು ನ್ಯಾ. ದೀಪಂಕರ್ ದತ್ತಾ ಇದ್ದ ಪೀಠ ಇವಿಎಂನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ.  ಎಲ್ಲಾ ವಿವಿಪ್ಯಾಟ್‌ ಸ್ಲಿಪ್‌ ಎಣಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ  ಅರ್ಜಿಗಳನ್ನು ವಜಾಗೊಳಿಸಿದೆ.

ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಿದರೆ ಮತ ಎಣಿಕೆಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಇವಿಎಂನಲ್ಲಿ ಯಾವುದೇ ದೋಷ ಇಲ್ಲ. ಇವಿಎಂ ಮೊದಲೇ ಸಿದ್ಧವಾಗಿರುತ್ತದೆ. ಇವಿಎಂ ತಯಾರಿಸುವ ಕಂಪನಿಗೆ ಯಾವ ಜಾಗದಲ್ಲಿ ಯಾರು ಅಭ್ಯರ್ಥಿ ಇರುತ್ತಾರೆ ಎನ್ನುವುದು ತಿಳಿದಿರುವುದಿಲ್ಲ. ಹೀಗಾಗಿ ಇವಿಎಂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ವಾದ ಮಂಡಿಸಿತ್ತು.

Shwetha M