ಸೂಪರ್ ಮ್ಯಾನ್ ಗ್ಲೆನ್ ಫಿಲಿಪ್ಸ್.. ಹಕ್ಕಿಯಂತೆ ಹಾರಿ ಫೀಲ್ಡಿಂಗ್
ಕಾಯಿಲೆನೇ ಗ್ಲೆನ್ಗೆ ವರವಾಯ್ತಾ?

ಸೂಪರ್ ಮ್ಯಾನ್ ಗ್ಲೆನ್ ಫಿಲಿಪ್ಸ್..  ಹಕ್ಕಿಯಂತೆ ಹಾರಿ ಫೀಲ್ಡಿಂಗ್ಕಾಯಿಲೆನೇ ಗ್ಲೆನ್ಗೆ ವರವಾಯ್ತಾ?

2017ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಫುಲ್‌ಲೆಂಥ್ ಡೈವ್ ಮಾಡುವ ಮೂಲಕ ಕ್ರಿಕೆಟ್‌ ಜಗತ್ತನ್ನು ನಿಬ್ಬೆರಗಾಗಿಸಿದ್ದ ಫಿಲಿಪ್ಸ್, ಇದಾದ ಬಳಿಕ ಫೀಲ್ಡಿಂಗ್ ಎಂದರೆ ಫಿಲಿಪ್ಸ್ ಎನ್ನುವ ಮಟ್ಟಿಗೆ ಬೆಳೆದಿದ್ರು..  ಫಿಲಿಪ್ಸ್, 1996ರಲ್ಲಿ ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ಪ್ರಾಂತದಲ್ಲಿ ಜನಿಸಿದ.  ಫಿಲಿಪ್ಸ್ನ ಪೋಷಕರಿಬ್ಬರೂ ಹಾಕಿ ಆಟಗಾರರಾಗಿದ್ದರು. 2001ರಲ್ಲಿ ಅಂದರೆ ಫಿಲಿಪ್ಸ್ಗೆ 5 ವರ್ಷ ವಿದ್ದಾಗ ಈ ಕುಟುಂಬ ನ್ಯೂಜಿಲ್ಯಾಂಡ್‌ಗೆ ವಲಸೆ ಹೋಯಿತು. ಪ್ರತಿಷ್ಠಿತ ಗೃಹ ನಿರ್ಮಾಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗ್ಲೆನ್ ಅವರ ತಂದೆ  ಕೆಲಸದ ನಿಮಿತ್ತ ನ್ಯೂಜಿಲ್ಯಾಂಡ್‌ಗೆ ಬಂದಿದ್ದರು. ಹೀಗಾಗಿ ಫಿಲಿಪ್ಸ್ ವಿದ್ಯಾಭ್ಯಾಸ, ಬಾಲ್ಯ ಎಲ್ಲವೂ ನ್ಯೂಜಿಲ್ಯಾಂಡ್‌ನಲ್ಲೇ ಆರಂಭವಾಯಿತು.

 

ನ್ಯೂಜಿಲ್ಯಾಂಡ್‌ನಲ್ಲೇ ಕಾಲೇಜು ಶಿಕ್ಷಣ ಮುಗಿಸಿದ ಗ್ಲೆನ್, 2015ರಲ್ಲಿ ಕ್ರಿಕೆಟ್ ಬದುಕು ಆರಂಭಿಸಿದರು. ತಂದೆಯ ಜೊತೆ  ಕ್ರಿಕೆಟ್‌ ಕ್ಲಬ್‌ಗ ತೆರಳುತ್ತಿದ್ದ ಗ್ಲೆನ್ ಕ್ರಿಕೆಟ್ ಆಡಲು ನಿರ್ಧರಿಸಿದರು. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಅವರು, ದಕ್ಷಿಣ ಆಫ್ರಿಕಾದ ವಿರುದ್ಧವೇ ಮೊದಲ ಪಂದ್ಯ ಆಡಿದರು. 2020ರಲ್ಲಿ ಟೆಸ್ಟ್ ಹಾಗೂ 2022ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಹಾಗೂ ಏಕದಿನದಲ್ಲಿ ಐರೆಲಂಡ್ ವಿರುದ್ಧ ಮೊದಲ ಪಂದ್ಯ ಆಡಿದರು.

ಕ್ರಿಕೆಟ್ ಆರಂಭಿಸಿದ ದಿನಗಳಲ್ಲಿ ಫಿಲಿಪ್ಸ್ ಹೆಚ್ಚು ರನ್ ಗಳಿಸುತ್ತಿರಲಿಲ್ಲ. ಆದರೂ ತಮ್ಮ  ಫಿಲ್ಡಿಂಗ್‌ ಬಲ ದಿಂದ ತಂಡದಲ್ಲಿ ಸ್ಥಾನ ಉಳಿಸಿಕೊಂಡರು.  ಬಾಲ್‌ ಎಷ್ಟೇ ದೂರದಲ್ಲಿದ್ದರೂ ಧೈರ್ಯವಾಗಿ ಅದರತ್ತ ಹಾರುವ ಗ್ಲೆನ್ ತಮ್ಮ ಜಂಪಿನಿಂದಲೇ ಸಖತ್ ಫೇಮಸ್ಸ್ ಆಗಿದ್ದಾರೆ.

 ಫೀಲ್ಡರ್ ಮಾತ್ರವಲ್ಲ, ಭರ್ಜರಿ ಹಿಟ್ಟರ್

ಸೂಪರ್‌ಮ್ಯಾನ್ ಫೀಲ್ಡಿಂಗ್ ಮಾತ್ರವಲ್ಲದೆ ತನ್ನ ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲೂ ತಂಡಕ್ಕೆ ಗ್ಲೆನ್ ಫಿಲಿಪ್ಸ್ ಕೊಡುಗೆ ನೀಡುತ್ತಿದ್ದಾರೆ. 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವ ಫಿಲಿಪ್ಸ್ ಹಲವು ಪಂದ್ಯಗಳಲ್ಲಿ ನ್ಯೂಜಿಲ್ಯಾಂಡ್ ಅನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಸೂಪರ್ ಕ್ಯಾಚ್‌

  ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ  ಗ್ಲೆನ್ ಕ್ಯಾಚ್ ಸಖತ್ ಫೇಮಸ್ ಆಯ್ತು.. ಈ ಪಂದ್ಯಾವಳಿಯಲ್ಲಿ ಒಟ್ಟು 5 ಬಾರಿ ಬಾಲ್ ಕ್ಯಾಚ್ ಮಾಡಿರುವ ಇವರು, 3 ಸೂಪರ್‌ಮ್ಯಾನ್‌ ಕ್ಯಾಚ್‌ಗಳಿಂದ ಜಗತ್ತನ್ನು ನಿಬ್ಬೆರಗಾಗಿಸಿದ್ದಾರೆ.   ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್ ಹಾಗೂ ವಿರಾಟ್ ಕೊಹ್ಲಿ ಅವರ ಕ್ಯಾಚ್ ಮತ್ತು ಫೈನಲ್‌ನಲ್ಲಿ ಶುಭಮನ್ ಗಿಲ್‌ ಅವರ ಕ್ಯಾಚ್ ಅನ್ನು ಕ್ರಿಕೆಟ್ ಜಗತ್ತು ಎಂದಿಗೂ ಮರೆಯುವುದಿಲ್ಲ.

ಎಡಿಎಚ್‌ಡಿ ಕಾಯಿಲೆಯೇ ಫಿಲಿಪ್ಸ್‌ ಗೆ ವರ?

ಕ್ರಿಕೆಟ್ ಮೈದಾನದಲ್ಲಿ ಚಿರತೆಯಂತೆ ಓಡುವ ಗ್ಲೆನ್ ಫಿಲಿಪ್ಸ್  ಎಡಿಎಚ್‌ಡಿ ಅಂದ್ರೆ ಚಂಚಲತೆ ಮತ್ತು ಅತಿ ಚಟುವಟಿಕೆ ಕಾಯಿಲೆನಿಂದ ಬಳಲುತ್ತಿದ್ದಾರೆ. ಆದರೆ, ಈ ಅತಿ ಚಟುವಟಿಕೆಯೇ ಅವರಿಗೆ ಫೀಲ್ಡಿಂಗ್‌ನಲ್ಲಿ ಸಹಾಯ ಮಾಡುತ್ತಿದೆ ಎಂದು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಚಂಚಲತೆಗೆ ಸಂಬಂಧಿಸಿದಂತೆ ಪ್ರತೀ ಬಾರಿಯೂ ಪರೀಕ್ಷೆಗೆ ಒಳಗಾಗಬೇಕಿದ್ದು, ವೈದ್ಯರು ಒಪ್ಪಿಗೆ ನೀಡಿದ ಬಳಿಕವಷ್ಟೇ ಪಂದ್ಯಗಳಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ. ಇಷ್ಟಾದರೂ ಬ್ಯಾಟಿಂಗ್, ಬೌಲಿಂಗಷ್ಟೇ ಅಲ್ಲದೆ ತನ್ನ ಫೀಲ್ಡಿಂಗ್ ಮೂಲಕವೂ ಗ್ಲೆನ್ ಫಿಲಿಪ್ಸ್ ನ್ಯೂಜಿಲ್ಯಾಂಡ್ ತಂಡದ ಪ್ರಮುಖ ಆಸ್ತಿಯೆನಿಸಿಕೊಂಡಿದ್ದಾರೆ.

ಗ್ಲೇನ್‌ಗೆ ಇದೆ ಪೈಲಟ್ ಆಗುವ ಕನಸು

ಹಾಕಿ, ಫುಟ್‌ಬಾಲ್, ಆರ್ಚರಿ, ಕ್ರಿಕೆಟ್ ಆಟದ ಬಳಿಕ 28 ವರ್ಷದ ಗ್ಲೆನ್ ಫಿಲಿಪ್ಸ್ ತನ್ನ ಕ್ರಿಕೆಟ್ ಬದುಕು ಮುಕ್ತಾಯವಾದ ಬಳಿಕ ಕಮರ್ಷಿಯಲ್ ಪೈಲಟ್ ಆಗುವ ಕನಸು ಕಾಣುತ್ತಿದ್ದಾರೆ. ಇದಕ್ಕಾಗಿ ಇವರ ತರಬೇತಿ ಕೂಡ ಪಡೆಯುತ್ತಿದ್ದಾರೆ.  ಗೌಂಡ್‌ನಲ್ಲಿ ಹಾರುವ ಫಿಲಿಪ್ಸ್ ಆಗಸದಲ್ಲಿ ಹಾರುವ ತಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಫೈಟ್ ಸಿಮುಲೇಟರ್‌ನಲ್ಲಿ ಅಭ್ಯಾಸ ಮಾಡುತ್ತಿರುತ್ತಾರೆ. ವಿಮಾನ ಹಾರಿಸುವುದಕ್ಕೆ ಅತ್ಯಂತ ಚಾಕಚಕ್ಯತೆ ಬೇಕು. ಇದು ನನಗೆ ಹೆಚ್ಚು ಖುಷಿ ಕೊಡುತ್ತದೆ. ಹೀಗಾಗಿ ಮುಂದೊಂದು ದಿನ ನಾನು ಪೈಲಟ್ ಆಗಿಯೇ ತೀರುತ್ತೇನೆ’ ಎಂದು ಫಿಲಿಪ್ಸ್ ಹೇಳಿಕೊಂಡಿದ್ದಾರೆ.

Kishor KV