ಭಾರತಕ್ಕೆ ಸಂಡೇ ಡಬಲ್ ಧಮಾಕ – ವಿಶ್ವಕಪ್ ಗೆದ್ದು ಸಿಂಹಿಣಿಯರ ಚರಿತ್ರೆ
3ನೇ T-20Iನಲ್ಲಿ INDಗೆ ಸವಾಲ್!

ಭಾರತಕ್ಕೆ ಸಂಡೇ ಡಬಲ್ ಧಮಾಕ – ವಿಶ್ವಕಪ್ ಗೆದ್ದು ಸಿಂಹಿಣಿಯರ ಚರಿತ್ರೆ3ನೇ T-20Iನಲ್ಲಿ INDಗೆ ಸವಾಲ್!

ಟೀಂ ಇಂಡಿಯಾ ಫ್ಯಾನ್ಸ್ ಪಾಲಿಗೆ ಈ ಸಂಡೇ ಕೂಡ ಸೂಪರ್ ಸಂಡೇ ಆಗೋದು ಪಕ್ಕಾ. ಅದ್ರಲ್ಲೂ ಈ ಭಾನುವಾರ ಡಬಲ್ ಧಮಾಕ. ಒಂದ್ಕಡೆ ಮೆನ್ ಇನ್ ಬ್ಲ್ಯೂ ಟೀಂ ಆಸ್ಟ್ರೇಲಿಯಾ ವಿರುದ್ಧ ಟಿ-20ಐ ಸರಣಿಯ ಮೂರನೇ ಮ್ಯಾಚ್​ನಲ್ಲಿ ಕಣಕ್ಕಿಳಿದ್ರೆ ಮತ್ತೊಂದ್ಕಡೆ ವುಮೆನ್ಸ್ ಟೀಂ ಐಸಿಸಿ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಅಖಾಡಕ್ಕಿಳಿಯಲಿದೆ. ಈ ಎರಡೂ ಪಂದ್ಯಗಳೂ ಭಾರತಕ್ಕೆ ಮೋಸ್ಟ್ ಇಂಪಾರ್ಟೆಂಟ್. ವುಮೆನ್ಸ್ ವಿಶ್ವಕಪ್​ನ ಫೈನಲ್ ಪಂದ್ಯ ಒಂದ್ಕಡೆ.. ಆಸ್ಟ್ರೇಲಿಯಾ ವಿರುದ್ಧದ ಟಿ-20ಐ ಸರಣಿಯ ಮೂರನೇ ಪಂದ್ಯ ಇನ್ನೊಂದ್ಕಡೆ. ವುಮೆನ್ಸ್ ಟೀಂ ಚರಿತ್ರೆ ಸೃಷ್ಟಿಸೋ ಹೊಸ್ತಿಲಿನಲ್ಲಿದ್ರೆ ಬಾಯ್ಸ್ ಟೀಂ ಮಸ್ಟ್ ವಿನ್ ಸಿಚುಯೇಷನ್​ನಲ್ಲಿ ಇದ್ದಾರೆ. ಇಬ್ಬರಿಗೂ ಕೂಡ ಗೆಲ್ಲೋದೊಂದೇ ಮುಂದಿರೋ ದಾರಿ. ನೆವರ್ ಗಿವಪ್ ಅನ್ನೋ ಮೈಂಡ್​ಸೆಟ್​ನಲ್ಲೇ ಕಣಕ್ಕಿಳೀಬೇಕಾಗುತ್ತೆ.

ಇದನ್ನೂ ಓದಿ : ಚೇರಿಸಿಕೊಂಡ ಶ್ರೇಯಸ್ ಅಯ್ಯರ್ – ಸಿಡ್ನಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮಹಿಳಾ ವಿಶ್ವಕಪ್ ನಲ್ಲಿ ಚೊಚ್ಚಲ ಚಾಂಪಿಯನ್ ಆಗುತ್ತಾ ಭಾರತ?

ಯೆಸ್. ಮಹಿಳಾ ಕ್ರಿಕೆಟ್​ನಲ್ಲೂ ಭಾರತ ಬಲಿಷ್ಠ ತಂಡ. ಹೀಗಿದ್ರೂ ಇದುವರೆಗೂ ಒಂದೇ ಒಂದು ಬಾರಿಯೂ ಚಾಂಪಿಯನ್ ಪಟ್ಟಕ್ಕೇರೋಕೆ ಆಗಿಲ್ಲ. ಆದ್ರೀಗ ಮೊದಲ ಬಾರಿಗೆ ಅದೂ ಕೂಡ ತವರಿನಲ್ಲೂ ಟ್ರೋಫಿ ಎತ್ತಿ ಹಿಡಿಯೋ ಜೋಶ್​ನಲ್ಲಿದೆ. ಗುರುವಾರ ನಡೆದಿದ್ದ ಸೆಮಿಫೈನಲ್ ಮ್ಯಾಚಲ್ಲಿ ಆಸ್ಟ್ರೇಲಿಯಾ ವಿರುದ್ಧ ಐಸಿಹಾಸಿಕ ರನ್ ಚೇಸ್ ಮಾಡಿ ಗೆದ್ದು ಬೀಗಿದ್ರು. ಜೆಮಿಮಾ ರಾಡ್ರಿಗಸ್ ಶತಕ ಬಾರಿಸಿ ಗೆಲುವಿನ ದಡ ಸೇರಿಸಿದ್ರು. ಇದೀಗ ಫೈನಲ್ ಮ್ಯಾಚಲ್ಲಿ ಸೌತ್ ಆಫ್ರಿಕಾ ಮುಖಾಮುಖಿಯಾಗಲಿದೆ. 25 ವರ್ಷಗಳ ಬಳಿಕ ವಿಶ್ವಕ್ಕೆ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಹೊಸ ಚಾಂಪಿಯನ್‌ ಸಿಗಲಿದ್ದಾರೆ. ಇನ್ನು ಭಾರತ ಸುಮಾರು 12 ವರ್ಷಗಳ ಬಳಿಕ ಏಕದಿನ ಮಹಿಳಾ ವಿಶ್ವಕಪ್‌ ಫೈನಲ್‌ಗೆ ಅರ್ಹತೆ ಪಡೆದಿದೆ. 2017ರಲ್ಲಿ ಭಾರತ, ಇಂಗ್ಲೆಂಡ್‌ ವಿರುದ್ಧ 7 ರನ್‌ಗಳ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದಕ್ಕೂ ಮೊದಲು ಭಾರತ 2005ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಆಘಾತ ಅನುಭವಿಸಿತ್ತು. ಈಗ ಭಾರತಕ್ಕೆ ಇತಿಹಾಸ ನಿರ್ಮಿಸುವ ಕನಸಿದೆ. ನವಿ ಮುಂಬೈನಲ್ಲಿ ಭಾರತ ಇತಿಹಾಸ ನಿರ್ಮಿಸುತ್ತಾ ಎಂಬುದನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಮಹಿಳಾ ಹಾಗೂ ಪುರುಷರ ಏಕದಿನ ವಿಶ್ವಕಪ್‌ನ ಫೈನಲ್‌ಗೆ ತಲುಪಿದೆ. ಯಾರೇ ಗೆದ್ರೂ ಕೂಡ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರ್ತಾರೆ. ಇದು ಒಂದ್ಕಡೆಯಾದ್ರೆ ಅತ್ತ ಬಾಯ್ಸ್ ಟೀಂ ಕೂಡ ಮಾಡು ಇಲ್ಲವೇ ಮಡಿ ಸ್ಟೇಜ್​ನಲ್ಲಿದೆ.

ಆಸೀಸ್ ವಿರುದ್ಧ ಭಾರತಕ್ಕೆ 3ನೇ ಮ್ಯಾಚ್ ಗೆಲ್ಲೋ ಸವಾಲು!

ಇನ್ನು ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟಿ-20 ಸರಣಿ ಆಡ್ತಿರೋ ಭಾರತದ ಮೆನ್ಸ್ ಟೀಂ ಕೂಡ ಅಂಡರ್ ಪ್ರೆಶರ್​ನಲ್ಲಿದೆ. ಅಕ್ಟೋಬರ್ 29ರಂದು ನಡೆದ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇನ್ನೂ ಅಕ್ಟೋಬರ್ 31ರಂದು ಮೆಲ್ಬೊರ್ನ್​ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಸೋ ಆಸ್ಟ್ರೇಲಿಯಾ ಸರಣಿಯಲ್ಲಿ ಒಂದು ಗೆಲುವಿನ ಲೀಡ್ ಸಾಧಿಸಿದೆ. ಉಳಿದಿರೋ ಮೂರು ಪಂದ್ಯಗಳಲ್ಲಿ ಭಾರತ ಮೂರೂ ಪಂದ್ಯಗಳನ್ನ ಗೆದ್ರಷ್ಟೇ ಸರಣಿ ಕೈವಶವಾಗುತ್ತೆ ಅಥವಾ ಎರಡು ಪಂದ್ಯಗಳನ್ನ ಗೆದ್ರೂ ಸರಣಿ ಸಮಬಲ ಆಗುತ್ತೆ. ಹೀಗಾಗಿ ಮುಂದಿನ ಮೂರೂ ಪಂದ್ಯಗಳಲ್ಲೂ ಡು ಆರ್ ಡೈನಂತೆಯೇ ಪರ್ಫಾಮ್ ಮಾಡ್ಬೇಕಾಗುತ್ತೆ. ಬಟ್ ಮುಂದಿನ ಪಂದ್ಯಗಳಲ್ಲಿ ಭಾರತ ಹಲವು ಚಾಲೆಂಜಸ್ ಎದುರಿಸಬೇಕು.

ಭಾರತಕ್ಕಿರೋ ಸವಾಲುಗಳು!
  1. ಟಾಸ್ ಸೋಲಿನದ್ದೇ ಮೊದಲ ಸೆಟ್ ಬ್ಯಾಕ್
  2. ಪದೇಪದೆ ಕೈಕೊಡ್ತಿರೋ ಟಾಪ್ ಆರ್ಡರ್
  3. ಆಸ್ಟ್ರೇಲಿಯಾಗೆ ಹೋಂ ಪಿಚ್ ಅಡ್ವಾಂಟೇಜ್
  4. ಜೋಶ್ ಹೇಜಲ್ ವುಡ್ ಬೌಲಿಂಗ್ ಕ್ವಾಲಿಟಿ
  5. ಪವರ್ ಪ್ಲೇನಲ್ಲೇ ಹಿನ್ನಡೆ

ಸೋ ಇದೆಲ್ಲಾ ಭಾರತಕ್ಕೆ ಸಂಕಷ್ಟ ತಂದಿಡ್ತಿದೆ. ಅಟ್​ಲೀಸ್ಟ್ ಮುಂದಿನ ಪಂದ್ಯಗಳಲ್ಲಾದ್ರೂ ಇದೆಲ್ಲವನ್ನೂ ಫೇಸ್ ಮಾಡಿ ಮ್ಯಾಚ್ ಗೆಲ್ಲಲೇಬೇಕು. ಟಾಸ್​ನ ಮೈಂಡ್​ನಲ್ಲಿ ಇಟ್ಟುಕೊಳ್ಳದೇ ಬ್ಯಾಟಿಂಗ್ ನಲ್ಲಿ ಬೆಟರ್ ಪರ್ಫಾಮೆನ್ಸ್ ಕೊಡ್ಬೇಕು. ಆಗಷ್ಟೇ ಪಂದ್ಯ ಗೆಲ್ಲೋಕೆ ಸಾಧ್ಯ. ಇನ್ನು ಇಂಡೋ ಆಸೀಸ್ 3ನೇ ಟಿ-20ಐ ಪಂದ್ಯ ಹೊಬಾರ್ಟ್​ನಲ್ಲಿ ಮಧ್ಯಾಹ್ನ 1.45ಕ್ಕೆ ಶುರುವಾಗುತ್ತೆ. ಮತ್ತೊಂದೆಡೆ ಭಾರತ -ಸೌತ್ ಆಫ್ರಿಕಾ ನಡುವಿನ ಮಹಿಳಾ ವಿಶ್ವಕಪ್ ಪಂದ್ಯ ಮಧ್ಯಾಹ್ನ 3 ಗಂಟೆಗೆ ಮುಂಬೈನಲ್ಲಿ ಆರಂಭವಾಗುತ್ತೆ.

Shantha Kumari