30 ವರ್ಷಕ್ಕೆ ಎಂಟ್ರಿ.. 34ಕ್ಕೆ ಕ್ಯಾಪ್ಟನ್ಸಿ – ಗುರಿ ಮರೆತ ಸೂರ್ಯನಿಗೆ ಪತ್ನಿಯೇ ಗುರು
ಡೊಮೆಸ್ಟಿಕ್ To ಟಿ-20ಐ.. ಹೇಗಿತ್ತು ಜರ್ನಿ?

30 ವರ್ಷಕ್ಕೆ ಎಂಟ್ರಿ.. 34ಕ್ಕೆ ಕ್ಯಾಪ್ಟನ್ಸಿ – ಗುರಿ ಮರೆತ ಸೂರ್ಯನಿಗೆ ಪತ್ನಿಯೇ ಗುರುಡೊಮೆಸ್ಟಿಕ್ To ಟಿ-20ಐ.. ಹೇಗಿತ್ತು ಜರ್ನಿ?

ಟೀಂ ಇಂಡಿಯಾದಲ್ಲಿ 30+ ಏಜ್ ಆಗ್ತಿದ್ದಂತೆ ಕ್ರಿಕೆಟ್ ಕರಿಯರ್​ನೇ ಮುಗಿಸಿರೋ ಸಾಕಷ್ಟು ಆಟಗಾರರನ್ನ ಕಂಡಿದ್ದೇವೆ. ಅಥವಾ ತಂಡಕ್ಕೆ ಸೆಲೆಕ್ಟ್ ಆಗದೇ ಇರೋ ಘಟನೆಗಳೂ ನಡೀತಿರುತ್ವೆ. ಆದ್ರೆ ಮೂವತ್ತನೇ ವಯಸ್ಸಿಗೆ ತಂಡಕ್ಕೆ ಕಾಲಿಟ್ಟು 34ನೇ ವಯಸ್ಸಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡು ತಂಡವನ್ನ ಅಷ್ಟೇ ಸಮರ್ಥವಾಗಿ ಮುನ್ನಡೆಸುತ್ತಿರೋ ನಾಯಕ ಅಂದ್ರೆ ಅದು ಸೂರ್ಯಕುಮಾರ್ ಯಾದವ್. ಏಷ್ಯಾಕಪ್​ನಲ್ಲಿ ಪ್ರಜ್ವಲಿಸ್ತಿರೋ ಸೂರ್ಯನ ಕ್ರಿಕೆಟ್ ಜರ್ನಿ ನಿಜಕ್ಕೂ ಕಲ್ಲುಮುಳ್ಳಿನ ಹಾದಿಯಾಗಿತ್ತು. ಡೊಮೆಸ್ಟಿಕ್ ಕ್ರಿಕೆಟ್​ನಲ್ಲಿ ಕಳೆದೇ ಹೋಗ್ಬೇಕಿದ್ದ ಸೂರ್ಯ ಈಗ ಜಗತ್ತಿನ ನಂಬರ್ 1 ಟಿ20ಐ ಟೀಂ ಕ್ಯಾಪ್ಟನ್ ಆಗಿದ್ದರ ಹಿಂದೆ ರೋಚಕ ಕಹಾನಿಯೇ ಇದೆ.

ಇದನ್ನೂ ಓದಿ : ಶೂಟಿಂಗ್‌ ವೇಳೆ ಅವಘಡ – ಟಾಲಿವುಡ್‌  ನಟ ಜೂ.ಎನ್‍ಟಿಆರ್‌ಗೆ ಗಂಭೀರ ಗಾಯ!

ಟೀಂ ಇಂಡಿಯಾದ ಟಿ-20ಐ ಕ್ಯಾಪ್ಟನ್.. ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೇನ್ ಸ್ಟ್ರೆಂಥ್.. ಸದ್ಯ ಟಿ-20 ಕ್ರಿಕೆಟ್​ನಲ್ಲಿ ಮಿಸ್ಟರ್ 360 ಬ್ಯಾಟರ್ ಅಂತಾನೇ ಕರೆಸಿಕೊಳ್ಳೋ ಸೂರ್ಯಕುಮಾರ್ ಯಾದವ್ ಸ್ಫೋಟಕ ಇನ್ನಿಂಗ್ಸ್ ಕಟ್ಟೋದ್ರಲ್ಲಿ ಎತ್ತಿದ ಕೈ. ಬ್ಯಾಟಿಂಗ್​ನಲ್ಲಿ ಅಷ್ಟೇ ಅಲ್ದೇ ಈಗ ಕ್ಯಾಪ್ಟನ್ಸಿಯಲ್ಲೂ ಅದ್ಭುತ ರೆಕಾರ್ಡ್ಸ್ ಹೊಂದಿದ್ದಾರೆ. ಭಾರತಕ್ಕೆ ಏಷ್ಯಾಕಪ್​ನಲ್ಲಿ ಮತ್ತೊಂದು ಟ್ರೋಫಿ ಗೆಲ್ಲಿಸಿಕೊಡೋ ಹೊಸ್ತಿಲಿನಲ್ಲಿದ್ದಾರೆ. ಆದ್ರೆ ಕ್ರಿಕೆಟ್​ನಲ್ಲಿ ಸೂರ್ಯನ ಆರಂಭಿಕ ದಿನಗಳು ಮತ್ತು ವೈಯಕ್ತಿಕ ಜೀವನ ಅಷ್ಟು ಸುಲಭದ್ದಾಗಿರಲಿಲ್ಲ. ಹಳಿ ತಪ್ಪಬೇಕಿದ್ದ ಅವ್ರ ಬದುಕನ್ನ ಸರಿದಾರಿಗೆ ತಂದಿದ್ದೇ ಪತ್ನಿ ದೇವಿಶಾ.

30 ವರ್ಷಕ್ಕೆ ಎಂಟ್ರಿ.. 32ಕ್ಕೆ ನಂಬರ್ 1.. 34ಕ್ಕೆ ಕ್ಯಾಪ್ಟನ್!

ಟೀಂ ಇಂಡಿಯಾದಲ್ಲಿ ಸೂರ್ಯನ ಜರ್ನಿ ನಿಜಕ್ಕೂ ಗ್ರೇಟ್ ಅನಿಸುವಂತಿದೆ. 2010ರಲ್ಲಿ ಮುಂಬೈ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸೂರ್ಯ 2011-12ರ ರಣಜಿ ಟ್ರೋಫಿ ಟೂರ್ನಿಯಲ್ಲಿ 754 ರನ್ ಕಲೆ ಹಾಕಿದ್ರು. ಇದೇ ಟೈಮಲ್ಲೇ ಮಂಗಳೂರು ಮೂಲದ ದೇವಿಶಾ ಶೆಟ್ಟಿ ಜೊತೆ ಲವ್​ನಲ್ಲಿ ಬಿದ್ದಿದ್ರು. ದೇವಿಶಾರ ತಂದೆ ದೇವದಾಸ್ ಶೆಟ್ಟಿ ದೊಡ್ಡ ಉದ್ಯಮಿಯಾಗಿದ್ದು ಮಗಳ ಪ್ರೀತಿಯನ್ನ ಒಪ್ಪಿರಲಿಲ್ಲ. ನಿನ್ನನ್ನ ಮದುವೆಯಾಗೋಕೆ ಅವನಿಗೇನು ಯೋಗ್ಯತೆ ಇದೆ ಎಂದೆಲ್ಲಾ ಪ್ರಶ್ನಿಸಿದ್ರು. ಆದ್ರೆ ಪಟ್ಟು ಬಿಡದ ದೇವಿಶಾ ತಂದೆಯನ್ನ ಒಪ್ಪಿಸಿ 2016ರಲ್ಲಿ ಸೂರ್ಯಕುಮಾರ್​ ಜೊತೆ ಮದುವೆಯಾಗಿದ್ರು. ಈ ಟೈಮಲ್ಲಿ ದೇಶೀ ಕ್ರಿಕೆಟ್​ನಲ್ಲೇ ಕಳೆದುಹೋಗ್ಬೇಕಿದ್ದ ಸೂರ್ಯನಿಗೆ ಶಕ್ತಿಯಾಗಿ ನಿಂತಿದ್ದೇ ದೇವಿಶಾ. ಮದುವೆ ಬಳಿಕ ಕಂಪ್ಲೀಟ್ ಕ್ರಿಕೆಟ್​ನತ್ತಲೇ ಫೋಕಸ್ ಮಾಡಿದ ಸೂರ್ಯ ಆ ನಂತ್ರ ಐಪಿಎಲ್​ನಲ್ಲಿ ಸದ್ದು ಮಾಡಿದ್ರು. ಮುಂಬೈ ಪರ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ್ರು. ಇದನ್ನ ಕಂಡ ಬಿಸಿಸಿಐ 30 ವರ್ಷದ ಸೂರ್ಯನಿಗೆ 2021ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಿದ್ರು. ಭಾರತ ತಂಡಕ್ಕೆ ಕಾಲಿಟ್ಟಿದ್ದೇ ಇಟ್ಟಿದ್ದು ಸೂರ್ಯ ಹಿಂತಿರುಗಿ ನೋಡ್ಲೇ ಇಲ್ಲ. 32ನೇ ವಯಸ್ಸಿನಲ್ಲಿ ಜಗತ್ತಿನ ನಂ.1 ಟಿ20 ಬ್ಯಾಟರ್ ಎನಿಸಿಕೊಂಡ್ರು. 34ನೇ ವಯಸ್ಸಿಗೆ ಟಿ-20ಐ ಕ್ಯಾಪ್ಟನ್ ಆದ್ರು. 2024ರ ಟಿ-20 ವಿಶ್ವಕಪ್ ಗೆದ್ದ ಮೇಲೆ ರೋಹಿತ್ ಶರ್ಮಾ ನಿವೃತ್ತಿ ಘೋಷಣೆ ಮಾಡಿದಾಗ ಹಾರ್ದಿಕ್ ಪಾಂಡ್ಯ, ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್ ಹೀಗೆ ಯಾರ್ಯಾರದ್ದೋ ಹೆಸರು ಕ್ಯಾಪ್ಟನ್ಸಿ ರೇಸ್​ನಲ್ಲಿತ್ತು. ಆದ್ರೆ ರೇಸ್​ನಲ್ಲೇ ಇಲ್ಲದ ಸೂರ್ಯ ನಾಯಕನಾಗಿ ಆಯ್ಕೆಯಾಗಿದ್ರು. ಅಲ್ಲಿಂದ ಈಚೆಗೆ ಭಾರತದ ಟಿ-20ಐ ತಂಡದಹೊಸ ಯುಗ ಆರಂಭವಾಗಿದೆ. ಭಾರತ ತಂಡಕ್ಕೆ ಕಾಲಿಟ್ಟ ಸೂರ್ಯ ಕಳೆದ ನಾಲ್ಕು ವರ್ಷಗಳಲ್ಲಿ ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದ್ದಾರೆ.

ಸೂರ್ಯನ ಸಕ್ಸಸ್ ಜರ್ನಿ!

ಟಿ20ಐನಲ್ಲಿ ನಾಯಕನಾಗಿ 82.6% ಗೆಲುವು

ಸೆನಾದಲ್ಲಿ ಅತಿ ಹೆಚ್ಚು ಟಿ20ಐ ಶತಕಗಳು (3)

T20I ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ (167.30 | ಕನಿಷ್ಠ 2000 ರನ್ಸ್)

ಐಸಿಸಿ ಟಿ20ಐ ವರ್ಷದ ಕ್ರಿಕೆಟಿಗ (2022, 2023)

T20I ನಲ್ಲಿ IND ಗೆ ಜಂಟಿಯಾಗಿ ಅತಿ ಹೆಚ್ಚು MOM ಪ್ರಶಸ್ತಿಗಳು (16)

T20I ಗಳಲ್ಲಿ 200+ ಸ್ಟ್ರೈಕ್ ರೇಟ್ ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ (10)

ಟಿ20ಐನಲ್ಲಿ ನಂ.1 ಬ್ಯಾಟ್ಸ್‌ ಮನ್ ಆದ 3ನೇ ಭಾರತೀಯ ಬ್ಯಾಟ್ಸ್‌ ಮನ್

ಭಾರತಕ್ಕೆ ಅತಿ ಹೆಚ್ಚು T20I ರೇಟಿಂಗ್ ಪಾಯಿಂಟ್‌ ಗಳು (912)

ಸೆನಾದಲ್ಲಿ ಅತಿ ಹೆಚ್ಚು T20I ಮಾಮ್ ಪ್ರಶಸ್ತಿಗಳನ್ನು ಗೆದ್ದ ಭಾರತೀಯರು (7)

ವಿದೇಶದಲ್ಲಿ ಟಿ20ಐ ಶತಕ ಬಾರಿಸಿದ ಏಕೈಕ ಭಾರತೀಯ ನಾಯಕ

50 ಎಸೆತಗಳ ಒಳಗೆ ಅತಿ ಹೆಚ್ಚು ಟಿ20ಐ ಶತಕಗಳು (3)

ಭಾರತಕ್ಕಾಗಿ 250+ ಸ್ಟ್ರೈಕ್ ರೇಟ್ ನಲ್ಲಿ ಅತಿ ಹೆಚ್ಚು 50+ ಸ್ಕೋರ್‌ (2)

ಟಿ20ಐನಲ್ಲಿ ಅತಿ ವೇಗದಲ್ಲಿ 100 ಸಿಕ್ಸರ್‌ ಬಾರಿಸಿದ ಭಾರತೀಯ ಆಟಗಾರ

ಒಂದು ವರ್ಷದಲ್ಲಿ ಅತಿ ಹೆಚ್ಚು T20I ಸಿಕ್ಸರ್ಸ್ (2022 ರಲ್ಲಿ 68)

11 ವಿಭಿನ್ನ ದೇಶಗಳಲ್ಲಿ T20I MOM ಪ್ರಶಸ್ತಿಗಳನ್ನು ಗೆದ್ದ ಏಕೈಕ ಆಟಗಾರ

ಒಂದು ವರ್ಷದಲ್ಲಿ 1000+ T20I ರನ್ ಗಳಿಸಿದ ಏಕೈಕ ಭಾರತೀಯ (2022)

ಹೀಗೆ ಭಾರತದ ಪರ ನಾಲ್ಕು ವರ್ಷಗಳಲ್ಲೇ ದಾಖಲೆಗಳ ಸರಮಾಲೆಗಳನ್ನೇ ಸೃಷ್ಟಿಸಿರೋ ಸೂರ್ಯಕುಮಾರ್ ಐಪಿಎಲ್​ನಲ್ಲೂ ಸೂಪರ್ ಹೀರೋ. ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯೋ ಸೂರ್ಯ 2018, 2023 ಮತ್ತು 2025 ರಲ್ಲಿ ಮುಂಬೈ ಇಂಡಿಯನ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇನ್ನು 2012ರಲ್ಲಿ ಮುಂಬೈ ಇಂಡಿಯನ್ಸ್ ಜೊತೆ ಐಪಿಎಲ್ ಕರಿಯರ್ ಸ್ಟಾರ್ಟ್ ಮಾಡಿದ್ರೂ ಕೂಡ 2014ರಿಂದ 2017ರವರೆಗೆ ಕೆಕೆಆರ್ ಪರ ಆಡಿದ್ರು. 2018 ರಲ್ಲಿ ಮತ್ತೆ ಮುಂಬೈ ಇಂಡಿಯನ್ಸ್‌ಗೆ ವಾಪಸ್ಸಾದ್ರು. 2023 ರಲ್ಲಿ  ವಾಂಖೆಡೆ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೇವಲ 49 ಎಸೆತಗಳಲ್ಲಿ 103 ರನ್ ಗಳಿಸಿ ತಮ್ಮ ಮೊದಲ ಐಪಿಎಲ್ ಶತಕ ಬಾರಿಸಿದ್ರು. 2025ರ ಸೀಸನ್​ನಲ್ಲಿ 16 ಪಂದ್ಯಗಳಿಂದ 717 ರನ್ಸ್ ಕಲೆ ಹಾಕಿದ್ರು. ಟೋಟಲ್ಲಾಗಿ ಐಪಿಎಲ್​ನಲ್ಲಿ 166ಪಂದ್ಯಗಳನ್ನ ಆಡಿದ್ದು 4311 ರನ್ಸ್ ಕಲೆ ಹಾಕಿದ್ದಾರೆ. ಹೀಗೆ ಸೂರ್ಯಕುಮಾರ್ ಯಂಗ್​ಸ್ಟರ್ಸ್​ನೂ ನಾಚಿಸುವಂತ ಪರ್ಫಾಮೆನ್ಸ್ ನೀಡ್ತಾ ಬರ್ತಿದ್ದಾರೆ. ಇದೇ ಕಾರಣಕ್ಕೆ ಟಿ-20 ಸ್ಪೆಷಲಿಸ್ಟ್ ಬ್ಯಾಟ್ಸ್​​ಮನ್ ಎನಿಸಿಕೊಂಡಿದ್ದಾರೆ. ಇದೀಗ ಭಾರತಕ್ಕೆ ಏಷ್ಯಾಕಪ್ ಕೊಡಿಸೋಕೆ ರೆಡಿಯಾಗಿರೋ ಸೂರ್ಯ ಎಲ್ಲವೂ ಅಂದುಕೊಂಡಂತೆ ಆದ್ರೆ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್​ನಲ್ಲಿ ಭಾರತವನ್ನ ಮುನ್ನಡೆಸಲಿದ್ದಾರೆ.

Shantha Kumari