ಭಾರತದ ಗೆಲುವಿನ ಕುಲದೀಪ – ಸದ್ದಿಲ್ಲದೇ ಚರಿತ್ರೆ ಸೃಷ್ಟಿಸಿದ ಯಾದವ್
ವೈಟ್ & ರೆಡ್ ಬಾಲ್ ಸೂಪರ್ ಸ್ಟಾರ್

ಭಾರತದ ಗೆಲುವಿನ ಕುಲದೀಪ –  ಸದ್ದಿಲ್ಲದೇ ಚರಿತ್ರೆ ಸೃಷ್ಟಿಸಿದ ಯಾದವ್ವೈಟ್ & ರೆಡ್ ಬಾಲ್ ಸೂಪರ್ ಸ್ಟಾರ್

ಕುಲ್ದೀಪ್ ಯಾದವ್. ಪ್ರಸ್ತುತ ಟೀಂ ಇಂಡಿಯಾದ ನಂಬರ್ 1 ಸ್ಪಿನ್ ಬೌಲರ್. Left arm wrist spinner ಆಗಿರೋ ಕುಲ್ದೀಪ್ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಕೊಡ್ತಾನೇ ಬಂದಿದ್ದಾರೆ. ಇತ್ತೀಚೆಗೆ ಏಷ್ಯಾಕಪ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕುಲ್ದೀಪ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಮ್ಯಾಚಲ್ಲೂ ಭಾರತಕ್ಕೆ ಬಿಗ್ ಸ್ಟ್ರೆಂಥ್ ಆಗಿದ್ದಾರೆ.. ಅದ್ರಲ್ಲೂ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತಕ್ಕೆ ಮ್ಯಾಚ್ ಟರ್ನಿಂಗ್ ಪರ್ಫಾಮೆನ್ಸ್ ನೀಡಿದ್ದಾರೆ. ಇತ್ತೀಚಿನ ಪಂದ್ಯಗಳಲ್ಲಿ ಕುಲ್ದೀಪ್ ಯಾದವ್ ಬೌಲಿಂಗ್​ಗೆ ಬಂದ್ರು ಅಂದ್ರೆ ವಿಕೆಟ್ ಪಕ್ಕಾ ಎನ್ನುವಂತೆ ಪರ್ಫಾಮ್ ಮಾಡ್ತಿದ್ದಾರೆ.

ಕೆರೆಬಿಯನ್ ಬ್ಯಾಟರ್ ಗಳ ಸಿಂಹಸ್ವಪ್ನವಾದ ಕುಲ್ದೀಪ್!

ವಿಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಎರಡೂ ಪಂದ್ಯಗಳನ್ನ ಗೆದ್ದು ವಿಂಡೀಸ್ ತಂಡವನ್ನ ವೈಟ್ ವಾಶ್ ಮಾಡಿದೆ. ಭಾರತದ ಈ ಗೆಲುವಿನಲ್ಲಿ ಕುಲ್ದೀಪ್ ಬೌಲಿಂಗ್ ಬಲ ತುಂಬಾನೇ ಇತ್ತು. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಭಾರತಕ್ಕೆ ಬೌಲಿಂಗ್ ವಿಭಾಗದಲ್ಲಿ ಶಕ್ತಿಯಾಗಿದ್ರು. ಮೊದಲ ಇನ್ನಿಂಗ್ಸ್​ನಲ್ಲಿ 6.1 ಓವರ್​ಗಳಲ್ಲಿ 25 ರನ್ ನೀಡಿ 2 ವಿಕೆಟ್ ಉರುಳಿಸಿದ್ರು. ಌಂಡ್ ಸೆಕೆಂಡ್ ಇನ್ನಿಂಗ್ಸ್​ನಲ್ಲಿ 8.1 ಓವರ್​ಗಳಲ್ಲಿ 23 ರನ್ ನೀಡಿ 2 ವಿಕೆಟ್ ಬೇಟೆಯಾಡಿದ್ರು. ಇದೀಗ ಎರಡನೇ ಟೆಸ್ಟ್ ಪಂದ್ಯದಲ್ಲಂತೂ ಬೌಲಿಂಗ್ ನಲ್ಲಿ ಫೈಫರ್ ವಿಕೆಟ್ ಸಾಧನೆ ಮಾಡಿದ್ದಾರೆ. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತದ ಪರ ಕುಲ್ದೀಪ್ ಯಾದವ್ 5 ವಿಕೆಟ್​​ಗಳನ್ನ ಬೇಟೆಯಾಡಿದ್ದಾರೆ. 26.5 ಓವರ್ ಬೌಲ್ ಮಾಡಿದ್ದ ಕುಲ್ದೀಪ್ 4 ಮೇಡನ್ ಓವರ್​ಗಳ ಸಹಿತ 82 ರನ್ ನೀಡಿದ್ರು. ಹಾಗೇ 5 ವಿಕೆಟ್​​ಗಳನ್ನ ಬೇಟೆಯಾಡಿದ್ರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವನ್ನ 248 ರನ್​ಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ಮೇನ್ ವೆಪನ್ ಆದ್ರು. ಇನ್ನು ಸೆಕೆಂಡ್ ಇನ್ನಿಂಗ್ಸ್​ನಲ್ಲೂ ಮೂರು ವಿಕೆಟ್ ತೆಗ್ದಿದ್ದಾರೆ. 29 ಓವರ್​ಗಳನ್ನ ಬೌಲ್ ಮಾಡಿದ ಕುಲ್ದೀಪ್ 4 ಮೇಡನ್ ಓವರ್ ಸಹಿತ 104 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಟೋಟಲ್ಲಾಗಿ ಎರಡು ಪಂದ್ಯಗಳ ನಾಲ್ಕೂ ಇನ್ನಿಂಗ್ಸ್​ಗಳಿಂದ ಸೇರಿ 12 ವಿಕೆಟ್ ಉರುಳಿಸಿದ್ದಾರೆ. ಹಾಗೇ ಸರಣಿಯಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಕೂಡ ಆಗಿದ್ದಾರೆ.

5 ವಿಕೆಟ್ ಗಳೊಂದಿಗೆ ವಿಶ್ವದಾಖಲೆ ಬರೆದ ಸ್ಪಿನ್ನರ್!

ಇನ್ನು ವಿಂಡೀಸ್ ವಿರುದ್ಧ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 5 ವಿಕೆಟ್​ಗಳ ಗೊಂಚಲು ಪಡೆದ ಕುಲ್ದೀಪ್ ದಾಖಲೆಯನ್ನೂ ನಿರ್ಮಿಸಿದ್ರು. 5ನೇ ಬಾರಿಗೆ 5 ವಿಕೆಟ್ ಗಳ ಸಾಧನೆಯಾಗಿದೆ. ಆ ಮೂಲಕ ಭಾರತದ ರಿಸ್ಟ್ ಸ್ಪಿನ್ನರ್ ಅಪರೂಪದ ದಾಖಲೆ ನಿರ್ಮಿಸಿದ್ದು, ಅತೀ ಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದ ಮೊದಲ ಎಡಗೈ ಸ್ಪಿನ್ನರ್ ಎಂಬ ಚರಿತ್ರೆ ಸೃಷ್ಟಿಸಿದ್ದಾರೆ. ಆ ಮೂಲಕ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಜಾನಿ ವಾರ್ಡ್ಲೆ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಎಡಗೈ ಚೈನಾಮನ್ ಬೌಲರ್ ವಾರ್ಡೆಲ್‌ಗಿಂತ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಇದರಿಂದಾಗಿ ಚೈನಾಮನ್ ಬೌಲರ್‌ಗಳಲ್ಲಿ ಈ ಸಾಧನೆಯನ್ನು ವೇಗವಾಗಿ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಜಸ್ಟ್ 15 ಟೆಸ್ಟ್ ಪಂದ್ಯಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಏಷ್ಯಾಕಪ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಬೇಟೆಯಾಡಿದ್ದ ಕುಲ್ದೀಪ್!

ಇನ್ನು ಏಷ್ಯಾಕಪ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಕುಲ್ದೀಪ್ ಇಡೀ ಟೂರ್ನಿಯಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಆಗಿದ್ರು. 7 ಪಂದ್ಯಗಳಿಂದ 9.29 ರ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ರು. ಅದ್ರಲ್ಲೂ ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ 7 ರನ್ ನೀಡಿ 4 ವಿಕೆಟ್ ಉರುಳಿಸಿದ್ದು ಪಂದ್ಯಾವಳಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಒಂದೇ ಆವೃತ್ತಿಯ ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ ಎಂಬ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಇವರು ಫೈನಲ್ ಪಂದ್ಯದಲ್ಲೂ ಪಾಕ್‌ ವಿರುದ್ಧ ಸ್ಥಿರ ಪ್ರದರ್ಶನ ನೀಡಿ 4 ವಿಕೆಟ್‌ ಕಬಳಿಸಿ ತಂಡದ ಗೆಲುವಿನಲ್ಲಿ ಮಿಂಚಿದ್ದರು. ಹೀಗಾಗಿ ಟೂರ್ನಮೆಂಟ್​ನ ದಿ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ರು. ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಇಷ್ಟೇ ಅಲ್ದೇ ಒಡಿಐ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ಬೌಲರ್​ಗಳ ಲಿಸ್ಟ್​ನಲ್ಲಿ ಕುಲ್ದೀಪ್ ಯಾದವ್ ನಂಬರ್ 3 ಪ್ಲೇಸ್​ನಲ್ಲಿದ್ದಾರೆ. ಮೊಹಮ್ಮದ್ ಶಮಿ 56 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಫಸ್ಟ್ ಪ್ಲೇಸ್​ನಲ್ಲಿದ್ರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ 57 ಒಡಿಐ ಪಂದ್ಯಗಳಲ್ಲಿ 100 ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ಇನ್ನು ಕುಲ್ದೀಪ್ ಯಾದವ್ ಮೂರನೇ ಪ್ಲೇಸ್​ನಲ್ಲಿದ್ದು 58 ಪಂದ್ಯಗಳಿಂದ 100 ವಿಕೆಟ್​ಗಳನ್ನ ಬೇಟೆಯಾಡಿ ದಾಖಲೆ ಮಾಡಿದ್ದಾರೆ.

ಸದ್ಯ ಟೀಂ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಬ್ಯಾಟಿಂಗ್ & ಬೌಲಿಂಗ್​ನಲ್ಲಿ ಇಡೀ ಕ್ರಿಕೆಟ್​ ಜಗತ್ತನ್ನೇ ಡಾಮಿನೇಟ್ ಮಾಡ್ತಿರೋ ಪ್ಲೇಯರ್ಸ್ ಇದ್ದಾರೆ.. ಹೀಗೆ ಪ್ರತೀಸಲ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಾಗ್ಲೂ ಒಬ್ಬೊಬ್ರು ಟ್ರೆಂಡಿಂಗ್​ನಲ್ಲಿರ್ತಾರೆ. ಬಟ್ ಸದ್ದಿಲ್ಲದೇ ಚರಿತ್ರೆ ಸೃಷ್ಟಿಸ್ತಿರೋ ಸೂಪರ್ ಸ್ಟಾರ್ ಅಂದ್ರೆ ಅದು ಕುಲ್ದೀಪ್ ಯಾದವ್. ವೈಟ್ ಬಾಲ್ ಹಾಗೇ ರೆಡ್ ಬಾಲ್ ಫಾರ್ಮೆಟ್​​ನಲ್ಲಿ ಪ್ರಸ್ತುತ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಆಗಿದ್ದಾರೆ.

Kishor KV