ಆಕಾಶದಲ್ಲಿ ಇಂದು ಕಾಣಿಸಲಿದೆ ಅಪರೂಪದ ಖಗೋಳ ವಿಸ್ಮಯ – ಬ್ಲೂ ಮೂನ್ ವೇಳೆ ಚಂದಿರನಲ್ಲಿ ಏನೇನು ಬದಲಾವಣೆಯಾಗುತ್ತೆ?

ಇಸ್ರೋ ಚಂದ್ರಯಾನದ ಮೂಲಕ ಚಂದ್ರನ ಅಂಗಳದಲ್ಲಿ ಇಳಿದ ಮೇಲೆ ಭಾರತೀಯರಿಗೆ ಚಂದಿರ ಹತ್ತಿರವಾಗಿದ್ದಾನೆ. ಅದ್ರೀಗ ಅದೇ ಚಂದಿರ ಭಾರತೀಯರಿಗೆ ಇನ್ನಷ್ಟು ಹತ್ತಿರದಲ್ಲಿ ಗೋಚರವಾಗಲಿದ್ದಾನೆ. ಆಗಸದಲ್ಲಿ ಸೂಪರ್ ಮೂನ್ ಅರ್ಥಾತ್ ಬ್ಲೂ ಮೂನ್ ಅನ್ನೋ ಚಮತ್ಕಾರವೊಂದು ನಡೆಯಲಿದೆ. ನೀವೆಂದೂ ನೋಡಿರದ ರೀತಿ ಚಂದಿರ ಅತ್ಯಂತ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದಾನೆ. ಭೂಮಿಯ ಸಮೀಪಕ್ಕೆ ಚಂದಿರ ಬರಲಿದ್ದಾನೆ.
ಇದನ್ನೂ ಓದಿ: ನೆಪ್ಚ್ಯೂನ್ ಗ್ರಹದ ಮೇಲೆ ನಿಗೂಢ ಕಪ್ಪು ಚುಕ್ಕೆ ಪತ್ತೆ! – ಪ್ರಕಾಶಮಾನವಾದ ಚುಕ್ಕೆಯ ರಹಸ್ಯವೇನು?
ಭಾರತೀಯ ಕಾಲಮಾನ ಗುರುವಾರ ಮುಂಜಾನೆ 4.30ರ ಸುಮಾರಿಗೆ ಬ್ಲೂಮೂನ್ ಗೋಚರಿಸಲಿದೆ. ಸುಮಾರು ಎರಡು ಗಂಟೆಗಳ ಕಾಲ ಚಂದಿರ ಅತ್ಯಂತ ಪ್ರಕಾಶಮಾನವಾಗಿ ಕಾಣಿಸಿಕೊಳ್ಳಲಿದ್ದು, ಮುಂಜಾನೆ 4.30ರಿಂದ ಬೆಳಗ್ಗೆ 6.30ರವರೆಗೆ ಬ್ಲೂಮೂನ್ ನೋಡಬಹುದಾಗಿದೆ. ಚಂದಿರನನ್ನ ಗಮನಿಸುವ ವೇಳೆ ಶನಿ ಗ್ರಹ ಕೂಡ ಮಾಮೂಲಿಗಿಂತ ಹೆಚ್ಚು ದೊಡ್ಡದಾಗಿ ಕಾಣಿಸಿಕೊಳ್ಳಲಿದೆ. ಒಂದು ವೇಳೆ ನೀವು ಟೆಲಿಸ್ಕೋಪ್ ಮೂಲಕ ವೀಕ್ಷಿಸಿದ್ರೆ ಶನಿ ಗ್ರಹದ ಉಂಗುರವನ್ನು ಮತ್ತಷ್ಟು ಹತ್ತಿರದಿಂದ ನೋಡಿ ಆನಂದಿಸಬಹುದು.
ಸೂಪರ್ ಮೂನ್ ಗುರುವಾರ ಮುಂಜಾನೆ ಕಾಣಿಸಿಕೊಂಡ ನಂತರ ಈ ಬ್ಲೂಮೂನ್ ಗೋಚರವಾಗೋದು 14 ವರ್ಷಗಳ ಬಳಿಕ. ಅಂದ್ರೆ 2037ರಲ್ಲಿ. ಹೀಗಾಗಿ ಯಾವುದೇ ಕಾರಣಕ್ಕೂ ಮಿಸ್ ಮಾಡದೆ ನಭೋಮಂಡಲದಲ್ಲಿ ನಡೆಯುವ ಈ ಅಪರೂಪದ ಘಟನೆಯನ್ನ ಕಣ್ತುಂಬಿಕೊಳ್ಳಬಹುದು.