ಉಪ್ಪಿನ ಮರುಭೂಮಿಯ ವಿಶೇಷತೆಯೇನು ಗೊತ್ತಾ? – ಗ್ರೇಟ್ ರಾನ್ ಆಫ್ ಕಚ್‌ನಲ್ಲಿ ಸೂರ್ಯಾಸ್ತದ ಸೊಬಗು ನೋಡಿದ್ದೀರಾ?

ಉಪ್ಪಿನ ಮರುಭೂಮಿಯ ವಿಶೇಷತೆಯೇನು ಗೊತ್ತಾ? – ಗ್ರೇಟ್ ರಾನ್ ಆಫ್ ಕಚ್‌ನಲ್ಲಿ ಸೂರ್ಯಾಸ್ತದ ಸೊಬಗು ನೋಡಿದ್ದೀರಾ?

ಗ್ರೇಟ್ ರಾನ್ ಆಫ್ ಕಚ್. ಗುಜರಾತ್‌ನ ಕಚ್ ಜಿಲ್ಲೆಯಲ್ಲಿದೆ. ಇದು ವಿಶಾಲ.. ವಿಸ್ತಾರದ ಉಪ್ಪು ಮರುಭೂಮಿ. ಉಪ್ಪು ಜವುಗು ಪ್ರದೇಶಗಳಿಂದ ರೂಪುಗೊಂಡಿರುವ ವಿಶೇಷ ಪ್ರವಾಸಿ ತಾಣ. ಈ ಉಪ್ಪು ಮರುಭೂಮಿ ಜಗತ್ತಿನಾದ್ಯಂತ ಪ್ರಸಿದ್ಧವಾಗಿದೆ. ಜೊತೆಗೆ ಇಲ್ಲಿನ ಸೂರ್ಯಾಸ್ತದ ಸೊಬಗು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಆಗಮಿಸುತ್ತಾರೆ. ಈ ಆಕರ್ಷಕ ಪ್ರವಾಸಿ ತಾಣ, ಸೂರ್ಯಾಸ್ತದ ರಮ್ಯ ಸಮಯದ ಕೆಲ ವಿಶೇಷತೆಗಳು, ಜೊತೆಗೆ ಒಂದಿಷ್ಟು ಚಿತ್ರಗಳು ಇಲ್ಲಿವೆ.

ಇದನ್ನೂ ಓದಿ:ಪ್ರವಾಸಿಗರ ಎದುರೇ ಮಾಯವಾಗುತ್ತೆ ಈ ಕಡಲತೀರ! -ಸಮುದ್ರವೂ ಕಣ್ಣಾಮುಚ್ಚಾಲೆ ಆಡುತ್ತೆ ಗೊತ್ತಾ?

ಹುಣ್ಣಿಮೆಯ ಚಂದಿರನ ನೋಡಲು ಕಾತರಿಸುವ ಮನಸುಗಳು ಜೊತೆಗೆ ಸೂರ್ಯಾಸ್ತದ ಹೊಂಬಣ್ಣದ, ಭೂತಾಯಿ ಕೆಂಪು ಸೀರೆಯುಟ್ಟು ಮಿನುಗುವ, ಆಕಾಶ ಪೂರ್ತಿ ಬಂಗಾರದಂತೆ ಹೊಳೆಯುವುದನ್ನು ಕಣ್ತುಂಬಿಕೊಳ್ಳಲು ಕಾತರಿಸುವ ಮನಸುಗಳಿಗೆ ಇಲ್ಲೊಂದು ಪ್ರವಾಸಿ ತಾಣ ಹೇಳಿ ಮಾಡಿಸಿದಂತಿದೆ. ಅದು ಕಚ್ ಪ್ರದೇಶದಲ್ಲಿರುವ ಉಪ್ಪು ಮರುಭೂಮಿ. ಗ್ರೇಟ್ ರಾನ್ ಆಫ್ ಕಚ್‌ನಲ್ಲಿ ಸೂರ್ಯಾಸ್ತ ನೋಡುವುದೇ ಕಣ್ಣಿಗೆ ಹಬ್ಬ.

ಇನ್ನು ನೀವೇನಾದರೂ ಹುಣ್ಣಿಮೆಯ ರಾತ್ರಿಯಲ್ಲಿ ಚಂದ್ರನನ್ನು ನೋಡಿದರೆ, ಇದು ಭೂಲೋಕವೋ.. ಸ್ವರ್ಗಲೋಕವೋ.. ಇಲ್ಲಾ ನಾವು ಬೇರೆ ಲೋಕದಲ್ಲಿ ಇದ್ದೇವೋ ಎಂಬ ಭ್ರಮೆ, ಸಂಭ್ರಮ ನಿಮ್ಮನ್ನು ಆವರಿಸಿಕೊಂಡು ಬಿಡುತ್ತೆ. ಅಷ್ಟೊಂದು ಸುಂದರ ಜಾಗವಿದು. ಜೊತೆಗೆ ಇಲ್ಲಿ ಭೇಟಿ ಕೊಟ್ಟಿರುವ ಪ್ರವಾಸಿಗರು ಹೇಳುವುದು ಒಂದೇ ಮಾತು. ಇಲ್ಲಿ ಭೂಮಿ, ಆಕಾಶ ಒಂದಾದಂತೆ ಕಾಣುತ್ತದೆ ಎಂದು.

ನ್ ಆಫ್ ಕಚ್ ಪ್ರದೇಶದಲ್ಲಿ ಬಿಳಿ ಉಪ್ಪು ಮರುಭೂಮಿ ನೋಡಿದರೆ, ಇದೊಂದು ಶುದ್ಧ ಬಿಳಿ ಭೂಮಿಯ ವಿಸ್ತಾರ ನೋಡಿದಂತೆ ಅನಿಸುತ್ತದೆ. ಇಲ್ಲಿ ಚಳಿಗಾಲದಲ್ಲಿ ರಾನ್ ಉತ್ಸವ ನಡೆಯುತ್ತದೆ. ಈ ಪ್ರದೇಶ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಇನ್ನೊಂದು ವಿಶೇಷವೆಂದರೆ, ಭಾರತದ ಅತಿದೊಡ್ಡ ಜಿಲ್ಲೆಯೆಂದರೆ ಕಚ್. ಆದರೆ, ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲೆ ಕೂಡಾ ಇದೇ.

ಇಲ್ಲಿ ಸುಮಾರು 10,000 ಚದರ ಕಿ.ಮೀ ಗಿಂತಲೂ ಹೆಚ್ಚಿನ ಭಾಗವನ್ನು ಉಪ್ಪಿನ ಮರುಭೂಮಿಯೇ ಆವರಿಸಿಕೊಂಡಿದೆ. ಭಾರತದಲ್ಲಿಯ ಮಾನ್ಸೂನ್ ಮಳೆಗಾಲದ ಸಮಯದಲ್ಲಿ ಈ ಮರುಭೂಮಿಯು ನೀರಿನೊಳಗಿರುತ್ತದೆ ಎಂಬುದೇ ಒಂದು ಆಶ್ಚರ್ಯ. ವರ್ಷದ ಎಂಟು ತಿಂಗಳುಗಳ ಕಾಲ, ಇದು ಬಿಳಿ ಉಪ್ಪುಗಳನ್ನು ಒಳಗೊಂಡಿರುತ್ತದೆ. ಪ್ರತೀ ವರ್ಷ ಅಕ್ಟೋಬರ್ ತಿಂಗಳುಗಳಲ್ಲಿ ರಾನ್ ಕಚ್ ಬರಿದಾಗುತ್ತದೆ. ಈ ಉಪ್ಪಿನ ಮರುಭೂಮಿಗೆ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಭೇಟಿ ನೀಡಿದರೆ, ಸುಂದರ ಅದ್ಭುತ ತಾಣವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲಿ ಪ್ರವಾಸಿಗರನ್ನು ಖುಷಿ ಪಡಿಸಲು ಒಂಟೆಗಳು ಕಾಯುತ್ತಿರುತ್ತವೆ. ಒಂಟೆ ಸವಾರಿ.. ಮರುಭೂಮಿಯಲ್ಲಿ ಖುಷಿ ಕೊಡುತ್ತೆ ನೋಡಿರಿ.

Sulekha