ಆರ್​​​ಸಿಬಿ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಭರ್ಜರಿ ಗೆಲುವು

ಆರ್​​​ಸಿಬಿ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಭರ್ಜರಿ ಗೆಲುವು

ಆರ್‌ಸಿಬಿ  ಹಾಗೂ ಎಸ್​​ಆರ್​ಹೆಚ್ ತಂಡಗಳ ನಡುವಿನ ಹೈವೋಲ್ಟೇಜ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 25 ರನ್‌ಗಳ ಗೆಲುವು ಸಾಧಿಸಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂತರಾಷ್ಟ್ರೀಯ ಕ್ರೀಡಾಂಗಣ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಹೈದರಾಬಾದ್​ ನಿಗದಿತ 20 ಓವರ್​ನಲ್ಲಿ 3 ವಿಕೆಟ್​ ನಷ್ಟಕ್ಕೆ ಬರೋಬ್ಬರಿ 287 ರನ್​ ಕಲೆ ಹಾಕಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಉಡೀಸ್​ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಆಸೀಸ್ ​ಗೆ ಹುಲಿ.. RCBಯಲ್ಲಿ ಇಲಿ – ಗೇಮ್ ಚೇಂಜರ್ ಆಗಿದ್ದ ಮ್ಯಾಕ್ಸ್ ವೆಲ್ RCB ಪಾಲಿಗೆ ಫ್ಲಾಪ್ ಹೀರೋ!

ಇನ್ನು, ಹೈದರಾಬಾದ್​ ನೀಡಿದ ಟಾರ್ಗೆಟ್​ ಬೆನ್ನತ್ತಿದ ಆರ್​​ಸಿಬಿ ಉತ್ತಮ ಆರಂಭ ಪಡೆದುಕೊಂಡಿದೆ. ಆರ್​​​ಸಿಬಿ ಪರ ಓಪನರ್ಸ್​​​ ಆಗಿ ಬಂದ ವಿರಾಟ್​ ಕೊಹ್ಲಿ, ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ವಿರಾಟ್​ ಕೊಹ್ಲಿ ಅಂತೂ ಹೈದರಬಾದ್​​​ ಬೌಲರ್​ಗಳ ಬೆಂಡೆತ್ತಿದ್ರು. ತಾನು ಎದುರಿಸಿದ ಕೇವಲ 20 ಬಾಲ್​ನಲ್ಲಿ 2 ಸಿಕ್ಸರ್​​​, 4 ಫೋರ್​ ಸಮೇತ 42 ರನ್​ ಚಚ್ಚಿ ವಿಕೆಟ್​ ಒಪ್ಪಿಸಿದ್ರು. ಇನ್ನೊಂದೆಡೆ ಬ್ಯಾಟಿಂಗ್​ ಮಾಡುತ್ತಿರೋ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಕೇವಲ 23 ಬಾಲ್​ನಲ್ಲಿ 51 ರನ್​ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 6 ಫೋರ್​​ ಚಚ್ಚಿದ್ರು. ಇವರ ಸ್ಟ್ರೈಕ್​ ರೇಟ್​​ 210ಕ್ಕೂ ಹೆಚ್ಚಿತ್ತು.

ಇನ್ನು, ಆರ್​​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ ದಿನೇಶ್​ ಕಾರ್ತಿಕ್​ ಆರ್​​​ಸಿಬಿಯನ್ನು ಗೆಲ್ಲಿಸಲು ಯತ್ನಿಸಿದ್ರು. ತಾನು ಆಡಿದ ಕೇವಲ 35 ಬಾಲ್​ನಲ್ಲಿ ಬರೋಬ್ಬರಿ 7 ಸಿಕ್ಸರ್​​, 3 ಫೋರ್​ ಸಮೇತ 83 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 240 ಇತ್ತು. ಮಹಿಪಾಲ್​ ಲೋಮ್ರೋರ್​​​ 19, ಅನೂಜ್​ ರಾವತ್​​ 25 ರನ್​ ಗಳಿಸಿದ್ರೂ ಆರ್​​ಸಿಬಿ 262 ರನ್​ ಪೇರಿಸಲು ಸಹಾಯವಾಯ್ತು.

Shwetha M