ತವರಿನಲ್ಲೇ ಸನ್‌ ರೈಸರ್ಸ್‌ಗೆ ಹೀನಾಯ ಸೋಲು – ಹೈದರಾಬಾದ್​​ ವಿರುದ್ಧ 35 ರನ್​ಗಳಿಂದ ಗೆದ್ದು ಬೀಗಿದ ಬೆಂಗಳೂರು!

ತವರಿನಲ್ಲೇ ಸನ್‌ ರೈಸರ್ಸ್‌ಗೆ ಹೀನಾಯ ಸೋಲು – ಹೈದರಾಬಾದ್​​ ವಿರುದ್ಧ 35 ರನ್​ಗಳಿಂದ ಗೆದ್ದು ಬೀಗಿದ ಬೆಂಗಳೂರು!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆರ್‌ಸಿಬಿ ತಂಡ ಹೈದರಾಬಾದ್‌ ವಿರುದ್ಧ 35 ರನ್‌ಗಳ ಗೆಲುವು ಸಾಧಿಸಿದೆ. ಬರೋಬ್ಬರಿ 6 ಪಂದ್ಯಗಳ ಸೋಲಿನ ಬಳಿಕ ಗೆಲುವು ಸಾಧಿಸಿದ್ದು, ಈ ಸೀಸನ್​ನಲ್ಲೇ ಆರ್​​ಸಿಬಿ ಗೆದ್ದ 2ನೇ ಮ್ಯಾಚ್​ ಇದಾಗಿದೆ.

ಇದನ್ನೂ ಓದಿ: ವೋಟ್‌ ಮಾಡಿ.. ಫೋಟೋ ಕ್ಲಿಕ್ ಮಾಡಿ.. – 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ!

ರಾಜೀವ್​ ಗಾಂಧಿ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಹೈವೋಲ್ಟೇಜ್​ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 206 ರನ್‌ ಬಾರಿಸಿತ್ತು.

ಆರ್​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಫಾಫ್​​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 12 ಬಾಲ್​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 25 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​​ ಬರೋಬ್ಬರಿ 200ಕ್ಕೂ ಹೆಚ್ಚು ಇತ್ತು. ಆದ್ರೆ, ಟಿ ನಟರಾಜನ್​ ಬೌಲಿಂಗ್​ನಲ್ಲಿ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಫಾಫ್​ ಕ್ಯಾಚ್​​ ಕೊಟ್ಟರು.

ಫಾಫ್​ ಡುಪ್ಲೆಸಿಸ್​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​ ಪಾಟಿದಾರ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಹೈದರಾಬಾದ್​​ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 20 ಬಾಲ್​ನಲ್ಲಿ ಬರೋಬ್ಬರಿ 50 ರನ್​ ಸಿಡಿಸಿದ್ರು. ಬರೋಬ್ಬರಿ 5 ಸಿಕ್ಸರ್​​, 2 ಫೋರ್​​ ಮೂಲಕ ಅರ್ಧಶತಕ ಚಚ್ಚಿದ್ರು.

ಆರಂಭದಿಂದಲೂ ತಾಳ್ಮೆಯಿಂದಲೇ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. 43 ಬಾಲ್​ನಲ್ಲಿ 51 ಸಿಡಿಸಿದ್ರು. ಬರೋಬ್ಬರಿ 1 ಸಿಕ್ಸರ್​​, 4 ಭರ್ಜರಿ ಫೋರ್​​ ಬಾರಿಸಿದ್ರು. ಇವರಿಗೆ ಸಾಥ್​ ಕೊಟ್ಟ ಕ್ಯಾಮರಾನ್​ ಗ್ರೀನ್​​ ಕೇವಲ 20 ಬಾಲ್​ನಲ್ಲಿ 5 ಫೋರ್​ ಸಮೇತ 37 ರನ್​ ಚಚ್ಚಿದ್ರು. ಸ್ವಪ್ನಿಲ್​ ಸಿಂಗ್​ 12, ಲೋಮ್ರೋರ್​ 7 ರನ್​ ಗಳಿಸಿದ್ರು. ಆರ್​​ಸಿಬಿ 20 ಓವರ್​ನಲ್ಲಿ 7 ವಿಕೆಟ್​ ನಷ್ಟಕ್ಕೆ 206 ರನ್​​ ಗಳಿಸಿದೆ. ಈ ಮೂಲಕ ಹೈದರಾಬಾದ್​ಗೆ 207 ರನ್​ ಟಾರ್ಗೆಟ್​ ಕೊಟ್ಟಿತ್ತು.

207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಸನ್‌ ರೈಸರ್ಸ್‌ ಹೈದರಾಬಾದ್‌  ತಂಡ ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಹೈದರಾಬಾದ್​ ಪರ ಅಭಿಷೇಕ್​ 31, ನಿತೀಶ್​ ರೆಡ್ಡಿ 13, ಪ್ಯಾಟ್​ ಕಮಿನ್ಸ್​ 31, ಶಾಬಾಜ್​ 40 ರನ್​ ಗಳಿಸಿದ್ರು. ಹೈದರಾಬಾದ್​ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 171 ರನ್​ ಗಳಿಸಿದೆ. ಆರ್​​ಸಿಬಿ 35 ರನ್​ಗಳಿಂದ ಗೆದ್ದು ಬೀಗಿದೆ.

Shwetha M