ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಫೈಟ್ – ಗೆಲ್ಲೋ ತಂಡಕ್ಕಿದೆ ಲಾಭ..!

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಪಂಜಾಬ್ ಕಿಂಗ್ಸ್ ಫೈಟ್ – ಗೆಲ್ಲೋ ತಂಡಕ್ಕಿದೆ ಲಾಭ..!

ಒಂದೆಡೆ ಅಸ್ಥಿರ ಆಟಕ್ಕೆ ಹೆಸರುವಾಸಿಯಾಗಿರುವ ಪಂಜಾಬ್ ಕಿಂಗ್ಸ್. ಮತ್ತೊಂದೆಡೆ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಗಮನ ಸೆಳೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್. ಇವತ್ತು ಈ ತಂಡಗಳ ಮಧ್ಯೆ ರೋಚಕ ಸೆಣಸಾಟ ನಡೆಯಲಿದೆ.

ಇದನ್ನೂ ಓದಿ: KKRಗೆ ಕ್ಯಾಪ್ಟನ್ ಆಗ್ಬೇಕೆಂದ ರೋಹಿತ್..- MI ಬಿಡ್ತಾರಾ ಬುಮ್ರಾ, ಸೂರ್ಯ?

ಸನ್‌ರೈಸರ್ಸ್ ಹೈದರಾಬಾದ್ ತಂಡ 4 ಪಂದ್ಯಗಳನ್ನಾಡಿದೆ. ಅದರಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ರೆ ಮತ್ತೆರೆಡರಲ್ಲಿ ಸೋತಿದೆ. ಸನ್ರೈಸರ್ಸ್ ಹೈದರಾಬಾದ್ನ ಸ್ಫೋಟಕ ಬ್ಯಾಟರ್‌ಗಳು ಅತ್ಯುತ್ತಮ ಲಯದಲ್ಲಿದ್ದಾರೆ. ಅಭಿಷೇಕ್ ಶರ್ಮಾ, ಕ್ಲಾಸೆನ್, ಟ್ರ್ಯಾವಿಸ್ ಹೆಡ್, ಅಬ್ಬರಿಸಿದರೆ ಪಂಜಾಬ್ ಬೌಲರ್‌ಗಳಿಗೆ ಉಳಿಗಾಲವಿಲ್ಲ. ಆದರೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬೌಲಿಂಗ್ ವಿಭಾಗ ಅಷ್ಟೇನೂ ಬಲಿಷ್ಠವಾಗಿಲ್ಲ. ಭುವನೇಶ್ವರ್ ಕುಮಾರ್, ಜಯದೇವ್ ಉನಾದ್ಕಟ್, ಮಯಾಂಕ್ ಮಾರ್ಕಂಡೆ ದುಬಾರಿಯಾಗುತ್ತಿದ್ದಾರೆ. ಇದು ನಾಯಕ ಪ್ಯಾಟ್ ಕಮಿನ್ಸ್ ಗೆ ಸವಾಲಾಗಿ ಕಾಡ್ತಿದೆ.

ಪಂಜಾಬ್ ಕಿಂಗ್ಸ್ ಗೆ ಇವತ್ತು ಹೋಮ್ ಗ್ರೌಂಡ್‌ನಲ್ಲಿ ಗೆಲ್ಲುವ ತವಕ. SRH ಎದುರು ಬಿಗ್ ಫೈಟ್ ಕೊಡುವ ಜೋಶ್‌ನಲ್ಲಿದೆ ಪಂಜಾಬ್ ಕಿಂಗ್ಸ್. ಈಗಾಗಲೇ ನಾಲ್ಕು ಪಂದ್ಯ ಆಡಿರುವ ಪಂಜಾಬ್, 2ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋಲು ಕಂಡಿದೆ. ಪಂಜಾಬ್ ದೇಸಿ ಬ್ಯಾಟರ್ಗಳ ಮೇಲೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ನಾಯಕ ಶಿಖರ್ ಧವನ್ ಜೊತೆ ಪ್ರಭ್ಸಿಮ್ರನ್, ಜಿತೇಶ್ ಶರ್ಮಾ, ಶಶಾಂಕ್ ಸಿಂಗ್ ಅಬ್ಬರಿಸಬೇಕಾದ ಅಗತ್ಯವಿದೆ. ಬೌಲಿಂಗ್ ವಿಭಾಗ ಕೂಡಾ ಸುಧಾರಿತ ಪ್ರದರ್ಶನ ನೀಡಬೇಕಿದೆ. ಇಲ್ಲದಿದ್ದರೆ ಸನ್ರೈಸರ್ಸ್ನ ರನ್ ಮಳೆಗೆ ಕಡಿವಾಣ ಹಾಕುವುದು ಕಷ್ಟವೇ.

 

Sulekha