ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯ – ಆರೆಂಜ್ ಆರ್ಮಿ ವಿರುದ್ಧ ಅಬ್ಬರಿಸ್ತಾರಾ ರಿಂಕು ಸಿಂಗ್?

ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಪಂದ್ಯ – ಆರೆಂಜ್ ಆರ್ಮಿ ವಿರುದ್ಧ ಅಬ್ಬರಿಸ್ತಾರಾ ರಿಂಕು ಸಿಂಗ್?

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತನ್ನ ಐಪಿಎಲ್ ಅಭಿಯಾನವನ್ನು ಪ್ರಾರಂಭಿಸಲಿದೆ. ಕೆಕೆಆರ್ ಟೀಮ್ ನ ಸ್ಪೆಷಾಲಿಟಿ ಏನ್ ಗೊತ್ತಾ ಸ್ನೇಹಿತರೆ, ಏನೇ ಮಾಡಿದರೂ  ಸಮ್‌ಥಿಂಗ್ ಡಿಫರೆಂಟಾಗೆ ಇರುತ್ತೆ. ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಅನ್ನೋ ಟೀಮ್ ಅಂದ್ರೆ ಅದು ಕೆಕೆಆರ್. ಎಕ್ಸಾಂಪಲ್‌ಗೆ ಕೆಕೆಆರ್ ಟೀಮ್‌ನ ಆಟಗಾರರು ಪ್ರಾಕ್ಟೀಸ್ ಸ್ಟಾರ್ಟ್ ಮಾಡಿದ್ದು ಕೂಡಾ ಡಿಫರೆಂಟ್‌ ಆಗಿಯೇ. ಈಡನ್ ಗಾರ್ಡನ್ಸ್ ನಲ್ಲಿ ಮೊದಲಿಗೆ ಮೈದಾನಕ್ಕೆ ಮತ್ತು ಸ್ಟಂಪ್​ಗೆ ಹೂವಿನ ಹಾರ ಹಾಕಿ ಪೂಜೆ ಮಾಡಿ ನಂತರ ಅಭ್ಯಾಸವನ್ನು ಆರಂಭಿಸಿದ್ದರು.

ಇದನ್ನೂ ಓದಿ:ಅಂದು ಜಡ್ಡು.. ಇಂದು ರಿತು.. CSK ಕ್ಯಾಪ್ಟನ್ಸಿ ಬದಲಿಸಿದ್ದೇಕೆ? – ನಿವೃತ್ತಿಗೆ ಸಿದ್ಧರಾದ್ರಾ ಧೋನಿ?

ಈ ಬಾರಿ ಐಪಿಎಲ್ ಸೀಸನ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೂಡಾ ಹೊಸ ಹುಮ್ಮಸ್ಸಿನಲ್ಲಿಯೇ ಅಭಿಯಾನ ಶುರುಮಾಡಲಿದೆ. ಮೆಂಟರ್ ಆಗಿರುವ ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ ಕೆಕೆಆರ್ ಚಾಂಪಿಯನ್ ನಾಯಕ ಗೌತಮ್ ಗಂಭೀರ್ ತಂಡವನ್ನು ಸೇರಿಕೊಂಡಿದ್ದು, ತಂಡದಲ್ಲಿ ಹೊಸ ಹುರುಪು ಬಂದಂತಾಗಿದೆ. ಫ್ರಾಂಚೈಸಿ ಇತಿಹಾಸದಲ್ಲಿ ಎರಡು ಬಾರಿ ಐಪಿಎಲ್‌ ಗೆದ್ದಿರುವ ಕೆಕೆಆರ್‌ನ ಟ್ರೋಫಿ ವಿಜೇತ ನಾಯಕ ಎಂದರೆ ಅದು ಗಂಭೀರ್.  ಅಲ್ಲದೇ ಈ ಬಾರಿ ಟ್ರೋಫಿ ಗೆಲ್ಲಲು ಗೌತಿ ಸಹ ಮಾಸ್ಟರ್ ಪ್ಲ್ಯಾನ್ ನಡೆಸುತ್ತಿದ್ದು, ಕೋಲ್ಕತ್ತಾ ತಂಡವು ಕೂಡಾ ಭರ್ಜರಿ ಅಭ್ಯಾಸದಲ್ಲಿ ನಿರತವಾಗಿತ್ತು. ಈ ಬಾರಿ ಕೆಕೆಆರ್‌ ಕೂಡ ಸಖತ್‌ ಬ್ಯಾಲೆನ್ಸ್‌ಡ್‌ ತಂಡವಾಗಿ ಕಾಣಿಸುತ್ತಿದೆ..  ಇನ್ನು ಬ್ಯಾಟಿಂಗ್ ಸೆನ್ಸೇಷನ್ ರಿಂಕು ಸಿಂಗ್ ಈ ಟೀಮ್‌ನ ಮೇನ್ ಸ್ಟ್ರೆಂತ್. ಐಪಿಎಲ್ 2023 ಟೂರ್ನಿಯಲ್ಲಿ ಸತತ 5 ಸಿಕ್ಸರ್​ಗಳ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿನ ತಲ್ಲಣ ತಂದಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡದ ಯುವ ಬ್ಯಾಟರ್ ರಿಂಕು ಸಿಂಗ್ ಈ ಬಾರಿಯೂ ಅಬ್ಬರಿಸಲು ರೆಡಿಯಾಗಿದ್ದಾರೆ. ಜೊತೆಗೆ ಹಾರ್ಡ್ ಹಿಟ್ಟಿಂಗ್ ಬ್ಯಾಟರ್, ಆಲ್‌ರೌಂಡರ್ ಈ ಟೀಮ್‌ನ ಶಕ್ತಿ. ಕೆಕೆಆರ್ ಪ್ಲೇಯಿಂಗ್ ಇಲೆವೆನ್ ನೋಡೋದಾದ್ರೆ,..

KKR ಪ್ಲೇಯಿಂಗ್ 11 ಹೀಗಿದೆ

  • ಶ್ರೇಯಸ್ ಅಯ್ಯರ್ (ನಾಯಕ)
  • ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್)
  • ಫಿಲ್ ಸಾಲ್ಟ್
  • ವೆಂಕಟೇಶ್ ಅಯ್ಯರ್
  • ನಿತಿಶ್ ರಾಣಾ
  • ರಿಂಕು ಸಿಂಗ್
  • ಆಂಡ್ರೆ ರಸೆಲ್
  • ಸುನಿಲ್ ನರೈನ್
  • ಹರ್ಷಿತ್ ರಾಣಾ
  • ಮಿಚೆಲ್ ಸ್ಟಾರ್ಕ್
  • ವರುಣ್ ಚಕ್ರವರ್ತಿ

Sulekha