VK ಮೀರಿಸಿದ DK – SRH ಬೌಲಿಂಗ್ EXPOSED -RCB ಗೆಲ್ಲೋಕೆ ಸಾಧ್ಯವಿತ್ತಾ?

VK ಮೀರಿಸಿದ DK – SRH ಬೌಲಿಂಗ್ EXPOSED -RCB ಗೆಲ್ಲೋಕೆ ಸಾಧ್ಯವಿತ್ತಾ?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಸೋತಿದೆ ನಿಜ.. ಎಸ್‌ಆರ್‌ಹೆಚ್‌ ಹೊಸ ದಾಖಲೆಯನ್ನು ಬರೆದಿರೋದೂ ನಿಜ.. ಆದರೆ ಈ ಪಂದ್ಯ ಸೋತಿದ್ದು ಆರ್‌ಸಿಬಿ ಫ್ಯಾನ್ಸ್‌ಗೆ ಜಾಸ್ತಿ ಬೇಸರವಾಗಿಲ್ಲ.. ಫುಲ್‌ ಎಂಟರ್‌ಟೈನಿಂಗ್‌ ಆಗಿದ್ದ ಮ್ಯಾಚ್‌ನಲ್ಲಿ ಆರ್‌ಸಿಬಿ 26 ರನ್‌ಗಳಿಂದ ಸೋತಿದ್ದರೂ ಕಡೇ ಕ್ಷಣದವರೆಗೆ ಹೋರಾಡಿದ ರೀತಿ.. ಡಿಕೆಯ ಬ್ಯಾಟಿಂಗ್‌ ವೈಖರಿ.. ಆರಂಭದಲ್ಲಿ ಕೊಹ್ಲಿ ಮತ್ತು ಡುಪ್ಲೆಸಿಸ್‌ ಆಡಿದ ಶೈಲಿ ಇವೆಲ್ಲವೂ ಆರ್‌ಸಿಬಿ ಪ್ಯಾನ್ಸ್‌ಗೆ ಇಷ್ಟವಾಗಿದೆ..

ಇದನ್ನೂ ಓದಿ:ಆರ್​​​ಸಿಬಿ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಭರ್ಜರಿ ಗೆಲುವು

ಸನ್‌ ರೈಸರ್ಸ್‌ ಹೈದ್ರಾಬಾದ್‌ ಬ್ಯಾಟಿಂಗ್‌ ಈ ಬಾರಿಯ ಐಪಿಎಲ್‌ನಲ್ಲಿ ಸಿಕ್ಕಾಪಟ್ಟೆ ಶೈನ್‌ ಆಗ್ತಿದೆ.. ಮುಂಬೈ ವಿರುದ್ಧ 277 ರನ್‌ ಹೊಡೆದು ದಾಖಲೆ ಬರೆದಿದ್ದ ಎಸ್‌ಆರ್‌ ಹೆಚ್‌ ಈಗ ಆರ್‌ಸಿಬಿ ವಿರುದ್ಧ 287 ರನ್‌ ಹೊಡೆದು ತಾವೇ ನಿರ್ಮಿಸಿದ ದಾಖಲೆಯನ್ನು ಮುರಿದು ಹೊಸ ರೆಕಾರ್ಡ್‌ ಸೃಷ್ಟಿಸಿದ್ದಾರೆ.. ಎಸ್‌ಆರ್‌ಹೆಚ್‌ ಬ್ಯಾಟ್ಸ್‌ಮನ್‌ಗಳ ಅಬ್ಬರ ಕಂಡರೆ, ಇವರೆಲ್ಲಾ ಇರೋದೇ ಸಿಕ್ಸ್‌ ಫೋರ್‌ ಹೊಡೆಯೋದಿಕ್ಕಾ ಎಂಬ ಅನುಮಾನ ಮೂಡ್ತಿದೆ.. ಅದರಲ್ಲೂ ಸೌತ್‌ ಆಫ್ರಿಕಾದ ಹೆನ್ರಿಚ್‌ ಕ್ಲಾಸೆನ್ ಆಡ್ತಿರುವ ರೀತಿ ನೋಡ್ತಿದ್ದರೆ, ಹೈದ್ರಾಬಾದ್‌ ಟೀಂ ಕೂಡ ಈ ಬಾರಿಯ ಐಪಿಎಲ್‌ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದು ಎನ್ನುವ ರೀತಿಯಲ್ಲಿದೆ.. ಜೊತೆಗೆ ಟ್ರಾವಿಸ್‌ ಹೆಡ್‌ ತಲೆಯಲ್ಲಿ ಸೋಮವಾರ ಅದೇನು ಓಡೋದಿಕ್ಕೆ ಶುರುವಾಗಿತ್ತೋ ಗೊತ್ತಿಲ್ಲ.. ಮೊದಲೇ ನಮ್ಮ ಆರ್‌ಸಿಬಿ ಬೌಲರ್ಸ್‌ ಒಳ್ಳೆ ನೆಟ್‌ಪ್ರಾಕ್ಟೀಸ್‌ ವೇಳೆ ಬೌಲಿಂಗ್‌ ಮಾಡುವ ರೀತಿಯಲ್ಲಿದ್ದಾರೆ.. ಇವರಿಗೆ ಲೈನೂ ಇಲ್ಲ.. ಲೆಂಗ್ತೂ ಇಲ್ಲ.. ಸ್ವಿಂಗೂ ಇಲ್ಲ.. ಸ್ಪಿನ್ನೂ ಇಲ್ಲ.. ಬ್ಯಾಟ್ಸ್‌ಮನ್‌ ಗಳನ್ನು ಕಟ್ಟಿಹಾಕಬೇಕು ಎಂಬ ಮನಸ್ಥಿತಿಯೂ ಇಲ್ಲ.. ಬೌಲಿಂಗ್‌ ಮೂಲಕ ತಂಡವನ್ನು ಗೆಲ್ಲಿಸಬಹುದು ಎಂಬ ಕನಸೂ ಇಲ್ಲ.. ಇಡೀ ಐಪಿಎಲ್‌ ಪ್ರ್ಯಾಂಚೈಸಿಗಳಲ್ಲಿ ಅತ್ಯಂತ ದುರ್ಬಲ ಬೌಲಿಂಗ್‌ ಯುನಿಟ್‌ ಅಂತಿದ್ರೆ ಅದು ಆರ್‌ಸಿಬಿಯದ್ದು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.. ಅಷ್ಟು ಕೆಟ್ಟದಾಗಿಯೇ ಎಸ್‌ಆರ್‌ಹೆಚ್‌ ವಿರುದ್ಧ ಆರ್‌ಸಿಬಿ ಬೌಲರ್‌ಗಳು ಬೌಲಿಂಗ್‌ ಮಾಡಿದ್ದಾರೆ.. ನಿಮಗೆ ಅನ್ನಿಸಬಹುದು.. ಹಾಗಿದ್ದರೆ ಮುಂಬೈ ವಿರುದ್ಧ ಕೂಡ ಹೈದ್ರಾಬಾದ್‌ನವರೂ ಹೀಗೆಯೇ ಹೊಡೆದಿಲ್ವಾ ಎಂದು.. ಹೌದು.. ಅಲ್ಲೂ ಹೊಡೆದಿದ್ದರು. ಆದರೆ ಅಲ್ಲಿ ಕ್ಯಾಪ್ಟನ್‌ ಹಾರ್ದಿಕ್‌ ಪಾಂಡ್ಯ ಎಂಬ ಯೋಚನೆ ಮತ್ತು ಯೋಜನೆಯಿಲ್ಲದ ನಾಯಕರಿದ್ದರು.. ಅದ್ರಿಂದಾಗಿ ಅಷ್ಟು ಕೆಟ್ಟದಾಗಿ ಬೌಲಿಂಗ್‌ ಮಾಡಿತ್ತು ಮುಂಬೈ.. ಆದ್ರೆ ಆರ್‌ ಸಿಬಿ ಇರೋದೇ ಹೀಗೆ.. ಇಲ್ಲಿ ಯೋಚನೆಯೂ ಇಲ್ಲ.. ಯೋಜನೆಯೂ ಇಲ್ಲ.. ಬೌಲಿಂಗ್‌ ಮೂಲಕ ಗೆಲ್ಲಬಹುದು ಎಂಬ ವಿಶ್ವಾಸವೂ ಇಲ್ಲ.. ಇದ್ರಿಂದಾಗಿಯೇ ಎಸ್‌ಆರ್‌ಹೆಚ್‌ 287 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ, ಐಪಿಎಲ್‌ನಲ್ಲಿ ಹೊಸ ರೆಕಾರ್ಡ್‌ ಬರೆಯಿತು..

ಆದ್ರೆ ಎಸ್‌ಆರ್‌ಹೆಚ್‌ 287 ರನ್‌ ಹೊಡೆದರೂ ಅವರ ಬೌಲರ್‌ಗಳನ್ನು ನೆಮ್ಮದಿಯಾಗಿರೋದಿಕ್ಕೆ ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳು ಬಿಟ್ಟಿರಲಿಲ್ಲ.. ಅದರಲ್ಲೂ ವಿರಾಟ್‌ ಕೊಹ್ಲಿ ಒಂದೆಡೆ ವಿರಾಟ್‌ ರೂಪ ಪಡೆದಿದ್ದರೆ ಮತ್ತೊಂದೆಡೆ ಡುಪ್ಲೆಸಿಸ್‌ ಕೂಡ ಅಬ್ಬರಿಸಲು ಶುರು ಮಾಡಿದ್ದರು.. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ರನ್‌ ಮಷೀನ್‌ಗಳು ಅನ್ನೋದ್ರಲ್ಲಿ ಅನುಮಾನವೇ ಇಲ್ಲ.. ಅಲ್ಲದೆ ಪರ್ಫೆಕ್ಟ್‌ ಬ್ಯಾಟಿಂಗ್‌ ಶೈಲಿ ಹೊಂದಿರುವ ಆಟಗಾರರು ಅಂದ್ರೆ ಅದು ಕೊಹ್ಲಿ ಮತ್ತು ಡುಪ್ಲೆಸಿಸ್‌.. ಆದ್ರೆ ಎಸ್‌ಆರ್‌ಹೆಚ್‌ ವಿರುದ್ಧ ನಿಧಾನಕ್ಕೆ ಇನ್ನಿಂಗ್ಸ್‌ ಕಟ್ಟಿದರೆ ಸಾಕಾಗೋದಿಲ್ಲ ಎನ್ನುವ ಮನಸ್ಥಿತಿಯಲ್ಲೇ ಬಂದಿದ್ದ ಕೊಹ್ಲಿ ಮತ್ತು ಡುಪ್ಲೆಸಿಸ್‌ ಅದೇ ರೀತಿಯಲ್ಲಿ ಆಡಿದ್ರು.. 6.2 ಓವರ್‌ಗಳಲ್ಲಿ ಕೊಹ್ಲಿ ಔಟಾದಾಗ ತಂಡದ ಮೊತ್ತ 80 ಆಗಿತ್ತು.. ಅಂದ್ರೆ ಆಡುವ ಮನಸ್ಥಿತಿ ಹೇಗಿತ್ತು ಎನ್ನುವುದನ್ನು ತೋರಿಸುತ್ತದೆ.. ನಿಜಕ್ಕೂ ತಂಡಕ್ಕೆ ಬೇಕಿದ್ದ ಆರಂಭಿಕ ರನ್‌ರೇಟ್‌ಅನ್ನು ಕೊಹ್ಲಿ ಮತ್ತು ಡುಪ್ಲೆಸಿಸ್‌ ಕೊಟ್ಟಿದ್ದರು.. ಆದ್ರೆ ಕೊಹ್ಲಿ ಔಟಾಗುತ್ತಿದ್ದಂತೆ ಆರ್‌ಸಿಬಿ ಪತನ ಶುರುವಾಗಿತ್ತು.. ಚೆನ್ನಾಗಿಯೇ ಆಡ್ತಿದ್ದ ಡುಪ್ಲೆಸಿಸ್‌ ಕೂಡ ವಿಚಲಿತರಾದ್ರು.. ವಿಲ್‌ ಜಾಕ್ಸ್‌ ಮತ್ತು ರಜತ್‌ ಪಟೀದಾರ್‌ ಔಟಾಗುತ್ತಿದ್ದಂತೆ ಡುಪ್ಲೆಸಿಸ್‌ ಕೂಡ ವೈಡ್‌ ಬಾಲ್‌ಗೆ ಹೊಡೆಯಲು ಹೋಗಿ ವಿಕೆಟ್‌ ಒಪ್ಪಿಸಿದ್ರು.. ಒಂದು ವೇಳೆ ಡುಪ್ಲಿಸಿಸ್‌ ಇನ್ನೂ ಸ್ವಲ್ಪ ಹೊತ್ತು ಕ್ರೀಸ್‌ನಲ್ಲಿ ಇರುತ್ತಿದ್ದರೆ, ಆರ್‌ಸಿಬಿಗೆ ಗೆಲ್ಲುವ ಅವಕಾಶ ಇದ್ದೇ ಇತ್ತು.. ಸೌರವ್‌ ಚೌಹಾಣ್‌ ಔಟಾದಾಗ ತಂಡದ ಸ್ಥಿತಿ 122 ರನ್‌ಗಳಿಗೆ 5 ವಿಕೆಟ್‌ ಆಗಿತ್ತು.. ಹೀನಾಯವಾಗಿ ಆರ್‌ಸಿಬಿ ಸೋಲುತ್ತೆ ಅಂತಲೇ ಅಭಿಮಾನಿಗಳು ಅಂದ್ಕೊಂಡಿದ್ದರು.. ಆದ್ರೆ ಅಲ್ಲಿಂದ ನಂತರ ಹೊಸ ಹುಮ್ಮಸ್ಸು ತಂದಿದ್ದು ಅಂದ್ರೆ ಅದು ದಿನೇಶ್‌ ಕಾರ್ತಿಕ್‌.. ನೋಡ ನೋಡುತ್ತಿದ್ದಂತೆ ಆರ್‌ಸಿಬಿ ಸ್ಕೋರ್‌ಗೆ ರಾಕೆಟ್‌ ವೇಗ ಸಿಕ್ಕಿತ್ತು.. ದಿನೇಶ್‌ ತಂಡವನ್ನು ಗೆಲ್ಲಿಸಿಯೇ ಬಿಡಬೇಕು ಎಂಬ ರೀತಿಯಲ್ಲೇ ಆಟವಾಡಿದ್ರು.. ಆದ್ರೆ ನಡುವೆ ಒಂದೆರಡು ಓವರ್‌ಗಳಲ್ಲಿ ಕಡಿಮೆ ರನ್‌ ಬಂದಿದ್ದು ಕೂಡ ತಂಡ ಹಿನ್ನಡೆ ಅನುಭವಿಸಲು ಕಾರಣವಾಯಿತು.. ಆದ್ರೆ ಕೊಹ್ಲಿ, ಡುಪ್ಲೆಸಿಸ್‌, ಹಾಗೂ ದಿನೇಶ್‌ ಆಟದಿಂದಾಗಿ ಎಸ್‌ಆರ್‌ಹೆಚ್‌ನ ಬೌಲಿಂಗ್‌ ಕೂಡ ಎಕ್ಸ್‌ಪೋಸ್‌ ಆಗಿದೆ.. ಬಿಗ್‌ ಸ್ಕೋರ್‌ ಬೋರ್ಡ್‌ನಲ್ಲಿದ್ದರೂ ಆರ್‌ಸಿಬಿಯೆದರು ಹೈದ್ರಾಬಾದ್‌ ಬೌಲರ್ಸ್‌ 262 ರನ್‌ ಬಿಟ್ಟುಕೊಟ್ಟಿದ್ದಾರೆ.. ಇದು ಕೇವಲ ಆರ್‌ಸಿಬಿ ವಿರುದ್ಧ ಮಾತ್ರವಲ್ಲ.. ಮುಂಬೈ ವಿರುದ್ಧ ಕೂಡ ಹೈದ್ರಾಬಾದ್‌ ಬೌಲರ್ಸ್‌ ಇದೇ ರೀತಿಯಲ್ಲಿ ಚಚ್ಚಿಸಿಕೊಂಡಿದ್ದರು… ಹೈದ್ರಾಬಾದ್‌ನ 277 ರನ್‌ಗಳಿಗೆ ಉತ್ತರವಾಗಿ ಮುಂಬೈ 246 ರನ್ ಹೊಡೆದಿತ್ತು.. ಆದ್ರೆ ಮುಂಬೈಗಿಂತಲೂ ಚೆನ್ನಾಗಿ ಬ್ಯಾಟಿಂಗ್‌ ಮಾಡಿದ ಬೆಂಗಳೂರು 262 ರನ್‌ ಹೊಡೆದಿದೆ.. ಒಂದೇ ಪಂದ್ಯದಲ್ಲಿ 549 ರನ್‌ಗಳು ಎರಡೂ ತಂಡಗಳಿಂದ ಹರಿದುಬಂದಿದ್ದು, ಟಿ20 ಇತಿಹಾಸದಲ್ಲಿ ಒಂದು ಪಂದ್ಯದಲ್ಲಿ ದಾಖಲಾದ ಹೈಯೆಸ್ಟ್‌ ಸ್ಕೋರ್‌ ಎಂಬ ದಾಖಲೆಯನ್ನು ಇದು ಬರೆದಿದೆ.. ಆರ್‌ಸಿಬಿ ಒಂದು ವೇಳೆ ಹೈದ್ರಾಬಾದ್‌ನ ಅಬ್ದುಲ್‌ ಸಮದ್‌ 10 ಎಸೆತಗಳಲ್ಲಿ 37 ರನ್‌ ಹೊಡೆಯುವುದನ್ನು ತಡೆದಿರುತ್ತಿದ್ದರೆ ಪಂದ್ಯ ಗೆಲ್ಲುವ ಅವಕಾಶವಿತ್ತು.. ಕೇವಲ ಹತ್ತೇ ಹತ್ತು ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ 3 ಸಿಕ್ಸ್‌ ಬಾರಿಸಿದ್ದ ಸಮದ್‌, ಪಂದ್ಯವನ್ನು ಕಿತ್ತುಕೊಂಡು ಹೋಗಿದ್ದರು. ಇಲ್ಲದೇ ಹೋದ್ರೆ ಆರ್‌ಸಿಬಿಗೂ ಗೆಲ್ಲುವ ಅವಕಾಶ ಸಿಗುತ್ತಿತ್ತೋ ಏನೋ..

Sulekha