ಯಶ್‌ಗೆ ಸನ್ನಿ ಡಿಯೋಲ್ ಸವಾಲ್! – ರಾಮಾಯಣ PART-2 BIG ಸೀಕ್ರೆಟ್

ಯಶ್‌ಗೆ ಸನ್ನಿ ಡಿಯೋಲ್ ಸವಾಲ್! – ರಾಮಾಯಣ PART-2 BIG ಸೀಕ್ರೆಟ್

ಭಾರತೀಯ ಚಿತ್ರರಂಗದಲ್ಲೇ ಅತಿದೊಡ್ಡ ನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ ರಾಮಾಯಣ! ಮೊದಲ ಭಾಗದ ದೃಶ್ಯ ವೈಭವ, ರಾವಣನ ಅಬ್ಬರ ಹಾಗೂ ಜಟಾಯುವಿನ ಹೋರಾಟ  ಪ್ರೇಕ್ಷಕರ ಮನಗೆದ್ದಿದೆ. 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಈಗ ಎಲ್ಲರ ಕಣ್ಣು ಕಾಯುತ್ತಿರುವುದು ರಾಮಾಯಣದ ಎರಡನೇ ಭಾಗದ ಮೇಲೆ! ಅದಕ್ಕೆ ಕಾರಣ, ಕ್ಲೈಮ್ಯಾಕ್ಸ್‌ನಲ್ಲಿ ಭಜರಂಗಬಲಿ ಹನುಮಂತನ ಎಂಟ್ರಿ ಕೊಟ್ಟಿರುವ ಸುಳಿವು! ಅದರಲ್ಲೂ ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳಲಿರುವುದು ಅಭಿಮಾನಿಗಳ ಕುತೂಹಲವನ್ನು ದುಪ್ಪಟ್ಟು ಮಾಡಿದೆ.

ರಾಮಾಯಣ ಸಿನಿಮಾದ ಮೊದಲ ಭಾಗದ ಕೊನೆಯಲ್ಲಿ ಜಟಾಯು ಹಾಗೂ ರಾವಣನ ನಡುವಿನ ಭೀಕರ ಯುದ್ಧ ಪ್ರೇಕ್ಷಕರನ್ನು ಭಾವುಕರನ್ನಾಗಿಸುತ್ತದೆ. ಸೀತಾಮಾತೆಯನ್ನು ರಕ್ಷಿಸುವುದಕ್ಕಾಗಿ ರಾವಣನ ವಿರುದ್ಧ ಹೋರಾಡುವ ಜಟಾಯು, ಕೊನೆಗೆ ತನ್ನ ಪ್ರಾಣವನ್ನೇ ತ್ಯಾಗ ಮಾಡುತ್ತಾನೆ. ಈ ದೃಶ್ಯ ಸಿನಿಮಾ ನೋಡುವವರ ಕಣ್ಣಲ್ಲಿ ನೀರು ತರಿಸುವಂತಿದೆ.

ಆದರೆ ಜಟಾಯುವಿನ ಹೋರಾಟದ ಬಳಿಕ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಸಿಗುವ ಮತ್ತೊಂದು ದೊಡ್ಡ ಸರ್ಪ್ರೈಸ್ ಅಂದ್ರೆ ಭಜರಂಗಬಲಿ ಹನುಮಂತನ ಎಂಟ್ರಿ! ಹೌದು, ಭಾರತೀಯರ ಪಾಲಿನ ಆರಾಧ್ಯ ದೈವ, ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿರುವ ಹನುಮಂತನ ಪಾತ್ರದ ಝಲಕ್ ಮೂಲಕ ಎರಡನೇ ಭಾಗದ ಬಗ್ಗೆ ಭರ್ಜರಿ ನಿರೀಕ್ಷೆ ಹುಟ್ಟುಹಾಕಲಾಗಿದೆ.

ಇದನ್ನೂ ಓದಿ: ಅಮೃತಧಾರೆ ಧಾರಾವಾಹಿಯಲ್ಲಿ ಅಂತಿಮ ಸಂಚಿಕೆಗಳು ಪ್ರಸಾರ – ಗೌರಿಪುತ್ರ ಹೊಸ ಧಾರಾವಾಹಿ ಶ್ರೀಘ್ರದಲ್ಲೇ ಆರಂಭ

ಭಾರತೀಯರ ಪಾಲಿನ ಸೂಪರ್ ಹೀರೋ ಶ್ರೀಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಎಂಟ್ರಿಯನ್ನ ಕೊಟ್ಟಿದ್ದು ಮತ್ತೊಂದು ಸ್ಪೆಷಲ್ ಸಂಗತಿ, ಈ ಸಿನಿಮಾಗೆ ಸನ್ನಿ ಡಿಯೋಲ್ ಸುಮಾರು 40 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಇದಕ್ಕೆ ತಕ್ಕಂತೆ ರಾಮಾಯಣ ಸಿನಿಮಾದಲ್ಲಿ ಅವರ ನಟನೆ & ಅವರ ಜವಾಬ್ದಾರಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಇನ್ನು ರಾಮಾಯಣ ಸಿನಿಮಾದ ಮೊದಲ ಭಾಗದಲ್ಲಿ ರಾವಣ ಹಾಗೂ ಜಟಾಯು ನಡುವೆ ಯುದ್ಧ ಸಂಚಲನ ಸೃಷ್ಟಿಸುತ್ತೆ. ಭಗವಾನ್ ರಾಮನ ಪರವಾಗಿ ಭಾರಿ ಹೋರಾಟ ಮಾಡಿ ಸೀತಾಮಾತೆ ರಕ್ಷಣೆಗೆ ಪರದಾಡಿ ಜೀವ ಬಿಡುವ ಜಟಾಯು ಫ್ಯಾನ್ಸ್ ಕಣ್ಣಲ್ಲಿ ನೀರು ತರಿಸುತ್ತದೆ. ಹೀಗೆ ಜಟಾಯು ಜೀವಬಿಟ್ಟ ನಂತರ ಕ್ಲೈಮ್ಯಾಕ್ಸ್‌ನಲ್ಲಿ ಹನುಮಂತ ಎಂಟ್ರಿ ಕೊಟ್ಟು, ಇಡೀ ಥಿಯೇಟರ್‌ನಲ್ಲಿ ಶಿಳ್ಳೆ ಹಾಗೂ ಚಪ್ಪಾಳೆ ಕಂಪನ ಸೃಷ್ಟಿಸುತ್ತೆ. ಈ ಮೂಲಕ ರಾಕ್ಷಸರ ರಾಜನಾದ ರಾವಣನ ಲಂಕೆಗೆ ಬೆಂಕಿ ಇಡಲು ಭಜರಂಗಬಲಿ ಹನುಮಂತನ ಎಂಟ್ರಿ ಫಿಕ್ಸ್ ಆಗಿದ್ದು, ರಾಮ ಮತ್ತು ರಾವಣ ಯುದ್ಧಕ್ಕೂ ವೇದಿಕೆ ಸಜ್ಜಾಗಿದೆ.

ಸೀತಾ ಮಾತೆ ರಕ್ಷಣೆಗಾಗಿ ಹೋರಾಡುವ ಹನುಮಂತ

ಅಂದಹಾಗೆ ಹನುಮಂತನಿಗೆ ಶ್ರೀರಾಮನ ಮೇಲಿರುವ ಅಪಾರ ಭಕ್ತಿ, ಸೀತಾ ಮಾತೆ ಹುಡುಕಲು ಲಂಕೆಗೆ ತೆರಳುವ ಸಾಹಸ, ಸಮುದ್ರ ದಾಟುವ ಶಕ್ತಿ ಹಾಗೂ ಯುದ್ಧದಲ್ಲಿ ತೋರಿಸುವ ಪರಾಕ್ರಮ ಇವೆಲ್ಲಾ ಹನುಮಂತನ ಪಾತ್ರವನ್ನ ವಿಶೇಷವಾಗಿಸುತ್ತೆ. ಸನ್ನಿ ಡಿಯೋಲ್ ಅವ್ರ ಗಂಭೀರ ಧ್ವನಿ ಸೇರಿದಂತೆ ಬಲಿಷ್ಠ ವ್ಯಕ್ತಿತ್ವ ಮತ್ತು ಆಕ್ಷನ್ ದೃಶ್ಯಗಳ ಅನುಭವ ಗಮನಿಸಿದರೆ ಹನುಮಂತನ ಪಾತ್ರದಲ್ಲಿ ಅವರು ಹೇಗೆ ಕಾಣಿಸಿಕೊಳ್ಳಲಿದ್ದಾರೆ? ಎಂಬ ಫ್ಯಾನ್ಸ್ ಕುತೂಹಲ ಸಹಜವಾಗಿ ಡಬಲ್ ಆಗಿದೆ.

ಪಾರ್ಟ್‌ 1ನಲ್ಲಿ ಯಶ್‌ ,  ಪಾರ್ಟ್‌ 2ನಲ್ಲಿ ಸನ್ನಿ ಡಿಯೋಲ್ ಅಬ್ಬರ

ಇನ್ನೂ ರಾಮಾಯಣ ಪಾರ್ಟ್‌1ನಲ್ಲಿ ಯಶ್ ಅಬ್ಬರಿಸಿದ್ದಾರೆ. ಫ್ಯಾನ್ಸ್ ರಾವಣನ ಆರ್ಭಟಕ್ಕೆ ಕಳೆದು ಹೋಗಿದ್ದಾರೆ. ಇಡೀ ಪಾರ್ಟ್‌1ನಲ್ಲಿ ಯಶ್ ಅವರು ಇಡೀ ಸಿನಿಮಾದಲ್ಲಿ ಘರ್ಜನೆ ಮಾಡಿದ್ದಾರೆ. ಪಾರ್ಟ್‌ 2ನಲ್ಲಿ ಯಶ್ ಘರ್ಜನೆ ಮಾಡಿದ್ರೂ ಆಂಜನೇಯ ಆರ್ಭಟವೇ ಹೆಚ್ಚಿರುತ್ತೆ.. ಹೀಗಾಗಿ ರಾಮಯಣ ಪಾರ್ಟ್ 2 ರಾವಣ Vs ಹನುಮಂತ ಅಬ್ಬರ ಇರಲಿ. ರಾಮನ ಯುದ್ಧ ಸನ್ನಿವೇಶ ಕೂಡ ಪಾರ್ಟ್‌ 2ನಲ್ಲಿ ಪ್ರೇಕ್ಷಕರಿಗೆ ಸಖತ್ ಕಿಕ್ ಕೊಡಲಿದೆ..

ಒಟ್ಟಿನಲ್ಲಿ ಮೊದಲ ಭಾಗದಲ್ಲಿ ಕಥೆಗೆ ಭರ್ಜರಿ ಅಡಿಪಾಯ ಹಾಕಿರುವ ಚಿತ್ರತಂಡ, ಎರಡನೇ ಭಾಗದಲ್ಲಿ ಹನುಮಂತನ ಪರಾಕ್ರಮ ಮತ್ತು ರಾಮ-ರಾವಣರ ಮಹಾಯುದ್ಧದ ಮೂಲಕ ಮತ್ತೊಂದು ಅದ್ಭುತ ಸಿನಿಮಾ ಅನುಭವ ನೀಡಲು ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ, ರಾಮಾಯಣ ಸಿನಿಮಾದ ಎರಡನೇ ಭಾಗ 2028ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಆದ್ರೆ ಪಾರ್ಟ್ 1 ನೋಡಿದವರಿಗೆ ಪಾರ್ಟ್ 2ಗಾಗಿ ಕಾಯುವುದು ತುಂಬಾ ಕಷ್ಟನೇ ಏನ್ ಅಂತೀರಾ?.

 

Kishor KV

Leave a Reply

Your email address will not be published. Required fields are marked *