ಭೂಮಿಯತ್ತ ಸುನಿತಾ & ಟೀಂ ಸಮುದ್ರದಿಂದ ಆಸ್ಪತ್ರೆಗೆ ಏರ್‌ಲಿಫ್ಟ್!!
ಎಡವಟ್ಟಾದ್ರೆ ಜೀವಕ್ಕೆ ಆಪತ್ತು!

ಭೂಮಿಯತ್ತ ಸುನಿತಾ & ಟೀಂ  ಸಮುದ್ರದಿಂದ ಆಸ್ಪತ್ರೆಗೆ ಏರ್‌ಲಿಫ್ಟ್!!ಎಡವಟ್ಟಾದ್ರೆ ಜೀವಕ್ಕೆ ಆಪತ್ತು!

ಸುಮಿತಾ ವಿಲಿಯಮ್ಸ್ ಮತ್ತು ಬಚ್ ಬಾಹ್ಯಾಕಾಶ ವಿಜ್ಞಾನಿ ಭೂಮಿಗೆ ಬರಲು ಪರದಾಡುತ್ತಿದ್ದರೆ, ಇತ್ತ ಭೂಮಿ ಮೇಲೆ ಇರುವ ವಿಜ್ಞಾನಿಗಳು ಚಿಂತೆ ಮಾಡುವಂತೆ ಆಗಿತ್ತು. ಕೆಲವೇ ಕೆಲವು ದಿನಗಳ ಕೆಲಸ ಅಂತಾ ಬಾಹ್ಯಾಕಾಶಕ್ಕೆ ಹಾರಿದ್ದ ಸುನಿತಾ ವಿಲಿಯಮ್ಸ್ ಬರೋಬ್ಬರಿ ಮುಕ್ಕಾಲು ವರ್ಷಗಳ ಕಾಲ ಅಂದ್ರೆ, 9 ತಿಂಗಳು ಆಕಾಶದಲ್ಲಿ ಸಿಲುಕಿ ಒದ್ದಾಡಿಬಿಟ್ಟರು. ಹೀಗಿದ್ದಾಗ ಸುರಕ್ಷಿತವಾಗಿ ಸುನಿತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರಲು ಇದೀಗ ನಾಸಾ ಸಂಸ್ಥೆ ಮುಂದಾಗಿದೆ

ಭಾರತ ಮೂಲದ ನಂಟು ಹೊಂದಿರುವ ಸುನಿತಾ ವಿಲಿಯಮ್ಸ್ ಅವರು ತಮ್ಮ ಬಾಹ್ಯಾಕಾಶ ಪ್ರವಾಸದಿಂದಲೇ ಖ್ಯಾತಿ ಪಡೆದಿದ್ದರು. ಹಲವು ಬಾರಿ ಬಾಹ್ಯಾಕಾಶಕ್ಕೆ ಹೋಗಿ ಬಂದಿದ್ದಾರೆ. ಇದೀಗ 9 ತಿಂಗಳ ನಂತರ ಮರಳಿ ಭೂಮಿಗೆ ವಾಪಸ್ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್.  ಮಾರ್ಚ್ 18 ಅಂದ್ರೆ ಇಂದು  ಸಂಜೆ  ಭೂಮಿಗೆ ಬರಲಿದ್ದಾರೆ..

9 ತಿಂಗಳು ಬಾಹ್ಯಾಕಾಶದಲ್ಲಿ ಒದ್ದಾಟ 

ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ 2024ರ ಜೂನ್ 5 ರಂದು ಬೋಯಿಂಗ್ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಗಗನಕ್ಕೆ ಹಾರಿದ್ದರು. ಕೇವಲ 8 ದಿನಗಳ ಕಾಲ ಅಲ್ಲಿ ಉಳಿದು, ಕಾರ್ಯಾಚರಣೆ ನಡೆಸಲು ಪ್ಲಾನ್ ಮಾಡಲಾಗಿತ್ತು. ಆದರೆ ದಿಢಿರ್ ಅಂತಾ ತಾಂತ್ರಿಕ ಸಮಸ್ಯೆ ಎದುರಾಗಿ ಗಗನಯಾತ್ರಿಗಳನ್ನ ಬಾಹ್ಯಾಕಾಶದಲ್ಲಿಯೇ ಬಿಟ್ಟು ಸ್ಟಾರ್‌ಲೈನರ್‌ ಭೂಮಿಗೆ ಮರಳಿ ಬಂದಿತ್ತು. ಹೀಗಾಗಿ ಕಳೆದ 9 ತಿಂಗಳಿಂದ ಅಲ್ಲಿಯೇ ಸಿಲುಕಿ ಒದ್ದಾಡಿದ್ದರು ಸುನಿತಾ ವಿಲಿಯಮ್ಸ್ & ಬಚ್ ವಿಲ್ಮೋರ್ ಅವರು.

‘ನಾಸಾ’ ಸೇರಿ ಜಗತ್ತಿನ ದೊಡ್ಡ ದೊಡ್ಡ ಬಾಹ್ಯಾಕಾಶ ಸಂಸ್ಥೆಗಳ ವಿಜ್ಞಾನಿಗಳು ಸಮಸ್ಯೆ ಸರಿ ಮಾಡಲು ಪ್ರಯತ್ನಿಸಿದ್ದರು. ಇದು ವರ್ಕೌಟ್ ಆಗದೇ ಕೊನೆಗೆ ‘ಸ್ಪೇಸ್ ಎಕ್ಸ್’ ನೌಕೆ ಆಕಾಶಕ್ಕೆ ಹಾರಿತ್ತು. ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಸಂಸ್ಥೆ ಡ್ಯ್ರಾಗನ್‌ ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ತಲುಪಿ, ಹಲವು ತಿಂಗಳಿಂದಲೂ ಕಾರ್ಯಾಚರಣೆಯನ್ನ ನಡೆಸಿದೆ. ಇದರ ಫಲವಾಗಿ ಮಾರ್ಚ್ 18 ರಂದು ಅಂದ್ರೆ ಇಂದು  ಸುನಿತಾ ವಿಲಿಯಮ್ಸ್ & ಬುಚ್ ವಿಲ್ಮೋರ್ ಒಟ್ಟಾಗಿ ಭೂಮಿಗೆ ಬಂದು ಇಳಿಯಲಿದ್ದಾರೆ.

 ಏನಿದು ಹೀಲಿಯಂ ಲೀಕ್ ಸಮಸ್ಯೆ?

ಗಗನಯಾನ ಮಾಡುವಾಗ ಸರ್ವಿಸ್ ಮಾಡ್ಯೂಲ್, ಕ್ಯೂ ಮಾಡ್ಯೂಲ್​ನಲ್ಲಿ ಕುಳಿತುಕೊಂಡು ಹೊರಡುತ್ತಾರೆ ಗಗನಯಾನಿಗಳು. ಆದ್ರೆ ಭೂಮಿಗೆ ವಾಪಸ್ ಆಗುವಾಗ ಸ್ಪೇಸ್​ ಶಟಲ್​ನಲ್ಲಿ ಕುಳಿತುಕೊಂಡು ಬರಬೇಕಾಗುತ್ತದೆ. ಇದು ನಾಸಾ ಮಾಡಿಕೊಂಡಿದ್ದ ಪ್ಲ್ಯಾನ್​, ಬಟ್ ಹೀಲಿಯಂ ಲೀಕ್ ಆಗಿ ಡಿಡೆಕ್ಷನ್ ಆಗಿದ್ರಿಂದ ಸುನೀತಾ ಮತ್ತು ಬಚ್​ ವಾಪಸ್​ ಆಗಲು ಸಮಸ್ಯೆಯಾಯ್ತು. 408 ಕಿಲೋ ಮೀಟರ್ ದೂರದಲ್ಲಿರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗುರುತ್ವಾಕರ್ಷಣೆಯ ಬಲ ಸೊನ್ನೆಯಿರುತ್ತದೆ. ಹೀಗಾಗಿಯೇ ಇಲ್ಲಿ ಹೀಲಿಯಂ ಸಹಾಯದಿಂದ ಹೈಡ್ರೋಜನ್ ಮತ್ತು ಆಕ್ಸಿಜನ್ ಪೂರೈಕೆ ಮಾಡಲಾಗುತ್ತದೆ. ನೌಕೆಯಲ್ಲಿರುವ ಇಂಧನ ಹೊರ ಬರಬೇಕಾದ್ರೆ ಪ್ರೆಶರ್ ರೈಸ್ ಮಾಡಬೇಕು. ಪ್ರೆಶರ್ ರೈಸ್ ಮಾಡೋಕೆ ಹೀಲಿಯಂ ಉಪಯೋಗ ಮಾಡಲಾಗುತ್ತದೆ.ಹೀಲಿಯಂ ಮೂಲಕ ಪ್ರೆಶರ್​ರೈಸ್ ಆದಮೇಲೆ ಹೈಡ್ರೋಜನ್, ಆಕ್ಸಿಜನ್ ಹೊರಬರುತ್ತದೆ. ಆದ್ರೆ ಹೀಲಿಯಂ ಲೀಕ್ ಆದ ಕಾರಣದಿಂದಾಗಿ ಹೈಡ್ರೋಜನ್ ಹಾಗೂ ಆಕ್ಸಿಜನ್​​ನ ಸಮಸ್ಯೆಯಾಗಿತ್ತು. ಸಾಮಾನ್ಯವಾಗಿ ಹೀಲಿಯಂ ಲೀಕ್ ಆಗೋದು ದೊಡ್ಡ ಸಮಸ್ಯೆಯಾಗಲ್ಲ. ಆದ್ರೆ ಸುನೀತಾ ವಿಲಿಯಮ್ಸ್ ಇದ್ದ ಗಗನನೌಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೀಲಿಯಂ ಲೀಕ್ ಆದ ಕಾರಣದಿಂದ ಸಮಸ್ಯೆ ಉಂಟಾಗಿತ್ತು. ಇದೇ ಕಾರಣಕ್ಕೆ ಅಂದುಕೊಂಡ ಸಮಯದಲ್ಲಿ ವಾಪಸ್​ ಆಗದೇ ಸುನೀತಾ ಹಾಗೂ ವಿಲ್ಮೋರ್​ ಐಎಸ್​ಎಸ್​ನಲ್ಲಿಯೇ ಉಳಿಯಬೇಕಾಯ್ತು.

 

ಸಮುದ್ರದಲ್ಲಿ ಬಂದಿಳಿಯಲಿದ್ದಾರೆ ಸುನಿತಾ, ಬುಚ್ 

 

ಮೊದಲಿಗೆ, ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುವ ಸುನೀತಾ ವಿಲಿಯಮ್ಸ್‌ ಅವರು ನಾರ್ಥ ಅಟ್ಲಾಂಟಿಕ್‌ ಸಾಗರದಲ್ಲಿ ಬಂದು ಇಳಿಯಲಿದ್ದಾರೆ. ಅಮೆರಿಕದ ನೌಕಾಸೇನೆ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಹೆಲಿಕಾಪ್ಟರ್‌ನಲ್ಲಿ ವರ್ಗಾವಣೆ ಮಾಡಲಿದೆ. ಈ ಕಾರ್ಯಾಚರಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕಾಗುತ್ತದೆ. ಏಕೆಂದರೆ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರ ಮೂಳೆಗಳು ದೀರ್ಘಕಾಲದವರೆಗೆ ಬಾಹ್ಯಾಕಾಶದಲ್ಲಿರುವುದರಿಂದ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಸಮಯ ಬೇಕು. ಹೀಗಾಗಿ ಅವರನ್ನು ಅತ್ಯಂತ ನಾಜೂಕಿನ ಪರಿಸ್ಥಿತಿಯಲ್ಲಿ  ನಾಸಾದ ಆಸ್ಪತ್ರೆಗೆ ಸಾಗಿಸಲಾಗುತ್ತದೆ. ಇವರ ಜೀವನ ಕ್ರಮವನ್ನು ಸಹಜವಾಗಿಸುವುದು ನಾಸಾಗೆ ಒಂದು ರೀತಿಯ ಚಾಲೆಂಜ್.‌ ಆದರೆ ಈ ಕುರಿತು ನಾಸಾ ಈಗಾಗಲೇ ಸರ್ವ ಸನ್ನದ್ಧವಾಗಿದ್ದು, ಸುನೀತಾ ವಿಲಿಯಮ್ಸ್‌ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಹಜ ಸ್ಥಿತಿಗೆ ಮರಳಲು ಕೆಲವು ದಿನಗಳು ಅಥವಾ ಹಲವು ತಿಂಗಳುಗಳೇ ಬೇಕಾಗಬಹುದು.  ಇವರಿಗೆ ಮೂಳೆ ಮತು ಸ್ನಾಯುಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಇದರ ಜೊತೆಗೆ, ಹೃದಯದ ಒತ್ತಡದ ಸಮಸ್ಯೆಯೂ ಎದುರಾಗಬಹುದು. ಇದು ಮಾನಸಿಕ ಒತ್ತಡಕ್ಕೂ ಕಾರಣವಾಗಬಹುದು ಮತ್ತು ವಿಕಿರಣಗಳ ಪ್ರಭಾವದಿಂದಾಗಿ ಕ್ಯಾನ್ಸರ್ ಕಾಯಿಲೆಯ ಭೀತಿಯೂ ಇದೆ.

 ಸುನಿತಾ ವಿಲಿಯಮ್ಸ್ ಗೆ ಎಷ್ಟು ಹಣ ಸಿಗುತ್ತೆ?

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಗಗನಯಾತ್ರಿಗಳು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲು ಯಾಕೆ ಮುಂದಾಗುತ್ತಾರೆ ಎನ್ನುವ ಪ್ರಶ್ನೆಗೆ ಹಲವು ಉತ್ತರಗಳು ಎದುರಾಗುತ್ತವೆ. ನಾಸಾ ಸಂಸ್ಥೆಯು ಗಗನಯಾತ್ರಿಗಳಿಗೆ ಅತ್ಯುತ್ತಮ ಆರ್ಥಿಕ ಪ್ಯಾಕೇಜ್ ಅನ್ನು ನೀಡುತ್ತದೆ. ಇದರೆ ಜೊತೆಗೆ, ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನೂ ಒದಗಿಸುತ್ತದೆ.  ವೈದ್ಯಕೀಯ ಸೇವೆ, ಪುನರ್ವಸತಿ, ವಿಶೇಷ ವೈದ್ಯಕೀಯ ತಪಾಸಣೆ, ಫಿಟ್ನೆಸ್ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ಸಂಪೂರ್ಣವಾಗಿ, ಗಗನಯಾತ್ರಿಗಳ ಬೆಂಬಲಕ್ಕೆ ನಾಸಾ ಕಟಿಬದ್ದವಾಗಿರುತ್ತದೆ. ಇದು, ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಲು ಗಗನನೌಕೆ ಏರುವ ಮುನ್ನ ಮತ್ತು ಇಳಿದ ನಂತರವೂ ಈ ಬೆನಿಫಿಟ್ ಇರಲಿದೆ. ಸುನಿತಾ ವಿಲಿಯಮ್ಸ್ ವಾರ್ಷಿಕವಾಗಿ 1,00,000 – 1,52,258 ಡಾಲರ್ ನಡುವೆ ವೇತನ ಪಡೆಯುತ್ತಾರೆ. ಇದಲ್ಲದೇ, ಪಿಂಚಣಿ ಪಡೆಯಲೂ ಅರ್ಹರಾಗಿದ್ದಾರೆ. ಜೊತೆಗೆ, ಪ್ರಯಾಣ ಭತ್ಯೆಗಳು, ಅಂತರರಾಷ್ಟ್ರೀಯ ತರಬೇತಿ ಮತ್ತು ಇಂತಹ ಸಾಧನೆಯನ್ನು ಮಾಡಿದ ಅಪರೂಪದ ಗಣ್ಯರು ಎನ್ನುವ ಹೆಗ್ಗಳಿಕೆಗೂ ಸುನಿತಾ ವಿಲಿಯಮ್ಸ್ ಮತ್ತು ಇತರ ಗಗನಯಾತ್ರಿಗಳು ಪಾತ್ರರಾಗಲಿದ್ದಾರೆ.

ವಿಲಿಯಮ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳದ  ಬೈಡನ್

ಇದರಲ್ಲಿ ಕೆಲವು ರಾಜಕೀಯ ವಿಷಯಗಳು ಅಡಕವಾಗಿವೆ. ಸ್ಪೇಸ್‌ ಎಕ್ಸ್‌ ಮಾಲೀಕ ಎಲಾನ್‌ ಮಸ್ಕ್‌ ಹೇಳುವಂತೆ ಈ ಹಿಂದಿನ ಜೋ ಬೈಡನ್‌ ಆಡಳಿತ ಅವರ ಸತತ ಮನವಿಯ ಹೊರತಾಗಿಯೂ ಸುನೀತಾ ವಿಲಿಯಮ್ಸ್‌ ಮತ್ತು ಬುಚ್‌ ವಿಲ್ಮೋರ್‌ ಅವರನ್ನು ಭೂಮಿಗೆ ಕರೆತರುವ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.   ಆದರೆ ಡೊನಾಲ್ಡ್‌ ಟ್ರಂಪ್‌ ಅವರು ವಿಶೇಷ ಕಾಳಜಿವಹಿಸಿ ಸುನೀತಾ ವಿಲಿಯಮ್ಸ್‌ ಅವರನ್ನು ಮರಳಿ ಭೂಮಿಗೆ ಕರೆತರುವ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಎಲಾನ್‌ ಮಸ್ಕ್‌ ಅವರಿಗೆ ಸೂಚನೆ ನೀಡಿದ್ರು. ಆ ಮೇಲೆ ಈ ಬಗ್ಗೆ ಕಾರ್ಯಾಚರಣೆ ನಡೆಯಿತು.

 ಮತ್ತೆ ಗಗನಯಾನ ಮಾಡ್ತಾರಾ ಸುನೀತಾ?

ಗಗನಯಾತ್ರಿಯಾಗಿ ಸುನೀತಾ ವಿಲಿಯಮ್ಸ್‌ ಅವರ ಭವಿಷ್ಯವನ್ನು ಊಹಿಸುವುದು ತುಸು ಕಷ್ಟದ ಕೆಲಸ. ಅವರು ಈಗಾಗಲೇ ಮೂರು ಬಾರಿ ಐಎಸ್‌ಎಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ಅವರ ವಯಸ್ಸನ್ನು ಪರಿಗಣಿಸಿದರೆ, ನಾಸಾ ನಾಲ್ಕನೇ ಬಾರಿಗೆ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು ಅನುಮಾನ. ಆದಾಗ್ಯೂ ಇದು ವೈಯಕ್ತಿಕ ಸಾಮರ್ಥ್ಯ ಮತ್ತು ನಾಸಾದ ನಿರ್ಧಾರದ ಮೇಲೆ ಅವಲಂಬಿತವಾಗಿದೆ.  ಒಟ್ನಲ್ಲಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ಮತ್ತೆ ಭೂಮಿಗೆ ಬರುತ್ತಿರುವುದು ಖುಷಿಯ ವಿಚಾರ.

 

 

 

Kishor KV

Leave a Reply

Your email address will not be published. Required fields are marked *