ಮೂಳೆಗೆ ಅಂಟಿಕೊಂಡ ಚರ್ಮ! – ಬಾಹ್ಯಾಕಾಶದಲ್ಲಿ ಬಾಡಿದ ಸುನೀತಾ
ಭೂಮಿಗೆ ಬರೋವರೆಗೆ ಜೀವಕ್ಕಿಲ್ಲಾ ತೊಂದ್ರೆ?

ಎಲ್ಲಾ ಸರಿಯಾದ ಟೈಂಗೆ ನಡೆದಿದ್ದರೆ 8 ದಿನಗಳ ಅಂತರಿಕ್ಷ ಯಾನ ಮುಗಿಸಿಕೊಂಡು, ಸುನೀತಾ ವಿಲಿಯಮ್ಸ್ ಮರಳಿ ಭೂಮಿಗೆ ಬರಬೇಕಿತ್ತು. ಆದ್ರೆ, ಆಕೆ ಬಾಹ್ಯಾಕಾಶಕ್ಕೆ ಹಾರಿ 5 ತಿಂಗಳೇ ಕಳೆದಿದೆ. ಈಗಲೂ ಅಲ್ಲೇ ಲಾಕ್ ಆಗಿದ್ದಾರೆ. ಅಮೆರಿಕಾ ಎಲೆಕ್ಷನ್ ಟೈಮಲ್ಲಿ ಎಲ್ಲಾ ವೋಟ್ ಮಾಡಿ ಅಂತಾ ನಗುನಗ್ತಾ ಹೇಳಿದ್ದ ಸುನಿತಾ ಅವರ ದೇಹವೇ ಬದಲಾಗಿ ಹೋಗಿದೆ.ಚರ್ಮ ಮೂಳೆಗೆ ಅಂಟಿಕೊಂಡತಿದೆ. ಹಾಗಿದ್ರೆ ಸುನಿತಾ ವಿಲಿಯಮ್ಸ್ಗೆ ಏನಾಗಿದೆ? ಈಗ ಹೇಗಿದ್ದಾರೆ? ಯಾವಾಗ ಮರಳಿ ಭೂಮಿಗೆ ಬರ್ತಾರೆ? ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಅರಳಿದ ಪ್ರೀತಿಗೆ ಮತ್ತೆ ಹುಳಿ – ಕಿತ್ತಾಡಿಕೊಂಡ ಅನುಷಾ ಮತ್ತು ಧರ್ಮ
ಬಾಹ್ಯಾಕಾಶಕ್ಕೆ ಹೋದ ದಿನದಿಂದ ಸುನಿತಾ ವಿಲಿಯಮ್ಸ್ ಸುದ್ದಿಯಲ್ಲಿದ್ದಾರೆ. ಆಗ ಬರ್ತಾರೆ ಈಗ ಬರ್ತಾರೆ ಅಂತ ಸುದ್ದಿಯಲ್ಲಿದ್ದ ಗಗನಯಾತ್ರಿಗಳು ಬಳಿಕ ಬರೋದೇ ಇಲ್ಲ ಅಂತ ಆತಂಕ ನಿರ್ಮಾಣವಾಗಿತ್ತು. ಅದೆಲ್ಲ ನಿವಾರಣೆ ಆಯ್ತು ಅನ್ನುವಾಗಲೇ ಹೊಸ ಸಂಕಷ್ಟ ಶುರುವಾಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಅವರ ಈ ಪೋಟೋಗಳನ್ನು ನೋಡಿ ಎಲ್ಲರಿಗೂ ಶಾಕ್ ಆಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳ ಆರೋಗ್ಯ ದಿನದಿನಕ್ಕೂ ಹದಗೆಡುತ್ತಿರೋ ಬಗ್ಗೆ ದೊಡ್ಡ ಅನುಮಾನ ಹುಟ್ಟಿದೆ. ಬಾಹ್ಯಾಕಾಶದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕಾಲ ವಾಸ ಮಾಡುತ್ತಿರುವುದರಿಂದ ಸುನಿತಾ ವಿಲಿಯಮ್ಸ್ ತೂಕ ಕಳೆದುಕೊಂಡಿದ್ದು ಅಪೌಷ್ಟಿಕತೆಯಿಂದ ಆರೋಗ್ಯವೂ ಹದಗೆಟ್ಟಂತಿದೆ. ರಿಲೀಸ್ ಆಗಿರುವ ಸುನಿತಾ ವಿಲಿಯಮ್ಸ್ ಹೊಸ ಫೋಟೋಗಳು ಇದಕ್ಕೆ ಸಾಕ್ಷಿಯಾಗಿದೆ.
ಫುಲ್ ವೀಕ್ ಆದ ಸುನೀತಾ
ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ ವಿಲ್ಮೋರ್ ಫೋಟೋ ಬಿಡುಗಡೆಯಾಗಿದ್ದು, ಗಗನಯಾತ್ರಿಗಳ ಆರೋಗ್ಯದ ಬಗ್ಗೆ ಈ ಫೋಟೋ ಗಂಭೀರವಾದ ಚರ್ಚೆ ಹುಟ್ಟು ಹಾಕಿದೆ. ಅಷ್ಟೇ ಅಲ್ಲಈ ಫೋಟೋದಲ್ಲಿ ಕಾಣುವಂತೆ ಸುನಿತಾ ಹಾಗೂ ವಿಲ್ಮೋರ್ ಮುಖದಲ್ಲೂ ಯಾವ ಲವಲವಿಕೆ ಇಲ್ಲ. ಹೆಚ್ಚಿನ ಕಾಲ ಬಾಹ್ಯಾಕಾಶದಲ್ಲಿ ಉಳಿದ ಕಾರಣ ದೇಹರಚನೆ ಸಂಪೂರ್ಣ ಬದಲಾಗಿದ್ದು, ಸುನೀತಾ ವಿಲಿಯಮ್ಸ್ ಹಾಗೂ ಬ್ಯಾರಿ ವಿಲ್ಮೋರ್ ತೂಕ ಕಳೆದುಕೊಂಡಿದ್ದಾರೆ ಅನ್ನೋದು ಕಾಣುತ್ತೆ. 8 ದಿನಕ್ಕಾಗಿ ಬಾಹ್ಯಾಕಾಶಕ್ಕೆ ಪ್ರಯಾಣ ಮಾಡಿದ್ದ ಸುನಿತಾ ಹಾಗೂ ವಿಲ್ಮೋರ್, ಬೋಯಿಂಗ್ ಸ್ಟಾರ್‌ಲೈನರ್ ನೌಕೆಯಲ್ಲಿ ಸಮಸ್ಯೆಯಾಗ 150ಕ್ಕೂ ಅಧಿಕ ದಿನ ಲಾಕ್ ಆಗಿದ್ದಾರೆ. ಗಗನಯಾತ್ರಿಗಳು ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ 2.5 ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದಾರೆ. 2025ರ ಫ್ರೆಬವರಿ ಟೈಂಗೆ ಇಬ್ಬರನ್ನು ಭೂಮಿಗೆ ವಾಪಾಸ್ ಕರೆತರುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ.
ಇನ್ನೂ ಬಗ್ಗೆ ನಾಸಾ ಅಪ್ಡೆಟ್ ನೀಡಿದ್ದು, ಸುನೀತಾ ವಿಲಿಯಮ್ಸ್ ಆರೋಗ್ಯವಾಗಿದ್ದಾರೆಂದು ತಿಳಿಸಿದೆ. ಗಗನಯಾತ್ರಿಗಳಿಗೆ ನಿರಂತರವಾಗಿ ಆರೋಗ್ಯ ಪರೀಕ್ಷೆ ಮಾಡಿಸಲಾಗುತ್ತಿದೆ. ಗಗನಯಾತ್ರಿಗಳನ್ನ ಪರೀಕ್ಷೆ ಮಾಡೋದಕ್ಕಾಗಿ ನೆೇಮಕಗೊಂಡಿರುವ ವೈದರು ಇದರ ಮೇಲ್ವಿಚಾರಣೆ ನಡೆಸಲಿದ್ದಾರೆಂದು ನಾಸಾದ ವಕ್ತಾರ ತಿಳಿಸಿದ್ದಾರೆ.. ಸುನೀತಾ ಅವರ ಫೋಟೋ ಅವರ ಆರೋಗ್ಯ ಹದಗೆಟ್ಟಿದೆ ಅನ್ನೋ ಅನುಮಾನವನ್ನ ಮೂಡಿಸಿದೆ. ಆದಷ್ಟು ಬೇಗ ವಿಲಿಯಮ್ಸ್ ಮತ್ತು ಸುನೀತಾ ವಿಲಿಯಮ್ಸ್ ಭೂಮಿಗೆ ಬರಲಿ ಅಂತಾ ಪಾರ್ಥನೆ ಮಾಡೋಣ.