ಭೂಮಿಗೆ ಬಂದ ಸುನೀತಾ ವಿಲಿಯಮ್ಸ್ ತಂಡ – ಗಗನಯಾತ್ರಿಗಳಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ

ಭೂಮಿಗೆ ಬಂದ ಸುನೀತಾ ವಿಲಿಯಮ್ಸ್ ತಂಡ –    ಗಗನಯಾತ್ರಿಗಳಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ

ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಹಾಗೂ ತಂಡ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್ ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆ ಲ್ಯಾಂಡ್ ಆಗಿದೆ. ಸಮುದ್ರಕ್ಕಿಳಿದ ನೌಕೆಯನ್ನು ನಾಸಾ ಹಾಗೂ ಸ್ಪೇಸ್ ಎಕ್ಸ್ ಸಿಬ್ಬಂದಿಗಳ ತಂಡ ಹಡಗಿನ ಮೂಲಕ ಮೇಲಕ್ಕೆತ್ತಿದೆ. ಇದೀಗ ಈ ನೌಕೆಯಿಂದ ಸುನೀತಾ ವಿಲಿಯಮ್ಸ್ ಹಾಗೂ ತಂಡ ಹೊರಬಂದಿದೆ. ಗುರುತ್ವಾಕರ್ಷಣ ಬಲವಿಲ್ಲದೆ ಕಳೆದ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಕಳೆದಿದ್ದ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್‌ಗೆ ಆರೋಗ್ಯ ತಪಾಸಣೆ ಕಾರ್ಯ ನಡೆಯುತ್ತಿದೆ.

ಭಾರತೀಯ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಸಮುದ್ರದಲ್ಲಿ ಸ್ಪೇಸ್‌ಕ್ರಾಫ್ಟ್ ನೌಕೆ ಇಳಿದಿದೆ. ಈ ನೌಕೆಯಲ್ಲಿ ಒಟ್ಟು ನಾಲ್ವರಿದ್ದಾರೆ. ನಿಕ್ ಹೇಗ್, ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್ ಮತ್ತು ರಷ್ಯಾದ ಗಗನಯಾತ್ರಿ ಅಲೆಕ್ಸಾಂಡರ್ ಗೊರ್ಬುನೊವ್. ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ನೌಕೆಯ ಹ್ಯಾಚ್ ತೆರೆಯಲಾಗಿದೆ. ಬಳಿಕ ಸಿಬ್ಬಂದಿಗಳ ತಂಡ ನೌಕೆಯ ಒಳ ಪ್ರವೇಶಿಸಿ ಅಗತ್ಯ ವಸ್ತುಗಳನ್ನು ಹೊರತಂದಿದ್ದಾರೆ. ಬಳಿಕ ನಾಲ್ವರು ಗಗನಯಾತ್ರಿಗಳನ್ನು ನೌಕೆಯಿಂದ ಸುರಕ್ಷಿತವಾಗಿ ಹೊರತರಲಾಯ್ತು.

ಸುದೀರ್ಘ 9 ತಿಂಗಳಿನಿಂದ ಬಾಹ್ಯಾಕಾಶದಲ್ಲಿ ಯಾವುದೇ ಗುರುತ್ವಾಕರ್ಷಣಾ ಬಲವಿಲ್ಲದೆ ಕಳೆದಿರುವ ಕಾರಣ ಭೂಮಿಗೆ ಆಗಮಿಸಿದಾಗ ಏಕಾಏಕಿ ಗುರುತ್ವಾಕರ್ಷಣಾ ಬಲಕ್ಕೆ ಒಳಪಡುತ್ತಾರೆ. ಹೀಗಾಗಿ ಗಗನಯಾತ್ರಿಗಳಲ್ಲಿ ತಲೆಸುತ್ತು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಈ ಹಿನ್ನಲೆಯಲ್ಲಿ ಗಗನಯಾತ್ರಿಗಳಿಗೆ ವೈದ್ಯರ ತಂಡ ಆರೋಗ್ಯ ತಪಾಸಣೆ ಪ್ರಕ್ರಿಯೆ ಶುರು ಮಾಡಿದೆ.

Kishor KV

Leave a Reply

Your email address will not be published. Required fields are marked *