ನೇಹಾಗೆ ಮನೆಗೆ ಸಿಎಂ | ಜೈಲಿನಲ್ಲಿ ಕೇಜ್ರಿವಾಲ್‌.. ಪ್ರಚಾರದಲ್ಲಿ ಪತ್ನಿ | ಇಂದಿನ ಪ್ರಮುಖ ಸುದ್ದಿಗಳು

ನೇಹಾಗೆ ಮನೆಗೆ ಸಿಎಂ | ಜೈಲಿನಲ್ಲಿ ಕೇಜ್ರಿವಾಲ್‌.. ಪ್ರಚಾರದಲ್ಲಿ ಪತ್ನಿ | ಇಂದಿನ ಪ್ರಮುಖ ಸುದ್ದಿಗಳು

ನೇಹಾ ಹಿರೇಮಠ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಬೀದರ್ ನಿಂದ ವಿಶೇಷ ವಿಮಾನದಲ್ಲಿ ಸಿಎಂ ಹುಬ್ಬಳ್ಳಿಗೆ ಆಗಮಿಸಿದ್ರು. ನೇಹಾ ಹಿರೇಮಠ ಹತ್ಯೆಯನ್ನು ಈಗಾಗಲೇ ಖಂಡಿಸಿದ್ದೇನೆ ಮತ್ತು ಈಗಲೂ ಖಂಡಿಸುತ್ತೇನೆ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಹೇಳಿದ್ರು. ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿಕೊಡಲಾಗಿದೆ, ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯವೊಂದನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

  • ಜೈಲಿನಲ್ಲಿ ಕೇಜ್ರಿ.. ಪ್ರಚಾರದಲ್ಲಿ ಪತ್ನಿ

ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣಾ ಅಖಾಡಕ್ಕೆ ಅರವಿಂದ್‌ ಕೇಜ್ರೀವಾಲ್‌ ಪತ್ನಿ ಸುನಿತಾ ಕೇಜ್ರಿವಾಲ್‌  ಎಂಟ್ರಿ ಕೊಡಲಿದ್ದಾರೆ. ಸುನಿತಾ ಅವರು ದೆಹಲಿಯಲ್ಲಿ ಆಪ್‌ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ. ನಾಳೆಯಿಂದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸುನೀತಾ ಕೇಜ್ರಿವಾಲ್ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. ಸುನೀತಾ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲು.

  • ಡಿ.ಕೆ. ಬ್ರದರ್ಸ್ಗೆ ಆಪ್ತರಿಗೆ ಐಟಿ ಶಾಕ್!

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ.ಸುರೇಶ್​ ​ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಡಿ.ಕೆ. ಬ್ರದರ್ಸ್​ಗೆ ಆಪ್ತರಾಗಿರುವ ಕೋಣನಕುಂಟೆ ಬ್ಲಾಕ್​ನ ಮಾಜಿ ಕಾರ್ಪೊರೇಟರ್ ಗಂಗಾಧರ್‌ ಮನೆ ಮೇಲೆ‌ ಐಟಿ ದಾಳಿ ನಡೆದಿದೆ. ಸತತ 12 ಗಂಟೆಗಳ‌ ಕಾಲ ಗಂಗಾಧರ್ ಮನೆಯಲ್ಲಿ ಶೋಧ ನಡೆಸಿದ ಐಟಿ ಅಧಿಕಾರಿಗಳು, ಗಂಗಾಧರ್​ ಮನೆಯಲ್ಲಿ 87 ಲಕ್ಷ ಹಣ, ಚಿನ್ನಾಭರಣ ಹಾಗೂ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

  • ರಾಯ್ ಬರೇಲಿಯಿಂದ ಪ್ರಿಯಾಂಕಾ, ಅಮೇಥಿಯಿಂದ ರಾಹುಲ್ ಸ್ಪರ್ಧೆ ಬಹುತೇಕ ಖಚಿತ

ನಾಳೆ ಹಲವು ರಾಜ್ಯಗಳಲ್ಲಿ  ಎರಡನೇ ಹಂತದ ಮತ್ತು ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ  ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ಕೇರಳದ ವಯನಾಡಿನಲ್ಲೂ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ರಾಹುಲ್ ಗಾಂಧಿ ಮತ್ತೊಮ್ಮೆ ಚುನಾವಣಾ ಕಣದಲ್ಲಿದ್ದಾರೆ. ಇದರ ಜೊತೆಗೆ ಉತ್ತರ ಪ್ರದೇಶದ ಎರಡು ಹೈ ಪ್ರೊಫೈಲ್ ಕ್ಷೇತ್ರಗಳಾದ ರಾಯ್ ಬರೇಲಿ ಮತ್ತು ಅಮೇಥಿಯ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ. ರಾಯ್ ಬರೇಲಿ ಮತ್ತು ಅಮೇಥಿ ಎರಡೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಏಪ್ರಿಲ್ 26 ರಿಂದಲೇ ಪ್ರಾರಂಭವಾಗಲ್ಲಿದ್ದು, ರಾಹುಲ್ ಗಾಂಧಿ ಅಮೇಥಿಯಲ್ಲಿ ಸ್ಪರ್ಧಿಸಿದ್ರೆ, ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಹೇಳಾಗುತ್ತಿದೆ.

  •  ಲಕ್ಷ್ಮಣ ಸವದಿ ಮನೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ

ಬೆಳಗಾವಿ ನಗರದ ಸದಾಶಿವ ನಗರಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಮನೆಯಲ್ಲಿ ಇಂದು ಬೆಳಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಉಪಹಾರ ಮಾಡಿದ್ರು. ಈ ವೇಳೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಸವದಿ ಮನೆಯಲ್ಲಿದ್ದರು. ಡೈನಿಂಗ್ ಟೇಬಲ್ ಬಳಿ ಬಂದಾಗ ಪಕ್ಕದ ಕುರ್ಚಿಯಲ್ಲಿ ಕೂರಲು ಹೋಗುವ ಸುರ್ಜೆವಾಲಾರ ಕೈ ಹಿಡಿಯುವ ಸವದಿ, ಮನೆಯ ಯಜಮಾನ ಕೂರುವ ಕುರ್ಚಿಯಲ್ಲಿ ಕೂರಿಸುತ್ತಾರೆ. ಲಕ್ಷ್ಮಿ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಕೂಡಾ ಸವದಿ ಮನೆಗೆ ಆಗಮಿಸಿದ್ದರು.

  • ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆ

ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಿದ್ಧತೆ ಭರದಿಂದ ಸಾಗುತ್ತಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್, ಮತ ಯಂತ್ರ ವಿತರಣೆ ಕಾರ್ಯ ಆರಂಭವಾಗಿದೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ ಒಟ್ಟು 8ಸಾವಿರದ 984 ಮತಗಟ್ಟೆಗಳಿವೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಲಿದೆ. ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಇದಕ್ಕಾಗಿ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆ ಮುಗಿಸಿದೆ.

  •  ಮತದಾನ ಕೇಂದ್ರದೊಳಗೆ ಮೊಬೈಲ್ಬಳಕೆಗೆ ನಿರ್ಬಂಧ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮೊಬೈಲ್ ಫೋನ್‌ಗಳನ್ನು ಮತಗಟ್ಟೆಗಳ ಒಳಗೆ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ. ಎಲ್ಲಾ ಮತದಾನ ಕೇಂದ್ರದೊಳಗೆ ಮೊಬೈಲ್‌ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಮತದಾನ ಮಾಡುವಾಗ ಅದನ್ನು ಫೋಟೋ ತೆಗೆದುಕೊಳ್ಳುವ ಅಥವಾ ವಿಡಿಯೋವನ್ನು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಿಗೆ ಶೇರ್ ಮಾಡಿಕೊಳ್ಳೋ ಸಂಭವ ಇರುತ್ತದೆ. ಹೀಗಾಗಿ ಮತ ಚಲಾಯಿಸಲು ತೆರಳುವ ವೇಳೆ ಮೊಬೈಲ್ ಕೊಂಡೊಯ್ಯಲು ಅವಕಾಶ ನೀಡದಿರಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ.

  • ಕೈಅಭ್ಯರ್ಥಿಗೆ ವೋಟ್ಹಾಕಬೇಡಿ ಅಂತಾ ಮನೆಮನೆಗೆ ತೆರಳಿ ಕಾಂಗ್ರೆಸ್ಪಕ್ಷದಿಂದಲೇ ಪ್ರಚಾರ!

ಎಲ್ಲಾ‌ ಕಡೆ ತಮ್ಮ ಅಭ್ಯರ್ಥಿಯನ್ನೇ ಗೆಲ್ಲಿಸಿ ಅಂತ ಪಕ್ಷಗಳು ಪ್ರಚಾರ ಮಾಡ್ತಿದ್ರೆ, ಇಲ್ಲಿ ಕಾಂಗ್ರೆಸ್ ‌ಮಾತ್ರ ತಮ್ಮ ಅಭ್ಯರ್ಥಿಯನ್ನು ಸೋಲಿಸಿ ಅಂತ ಪ್ರಚಾರ ಮಾಡ್ತಿದೆ. ರಾಜಸ್ಥಾನದ ಬನ್ಸ್ವಾರಾ-ದುಂಗರ್‌ ಪುರ ಕ್ಷೇತ್ರದಲ್ಲಿ ಹೆಚ್ಚಿನ ಆದಿವಾಸಿಗಳು ವಾಸಿಸುತ್ತಿದ್ದಾರೆ. ಈ ಸ್ಥಾನಕ್ಕೆ ಕಾಂಗ್ರೆಸ್ ಅರವಿಂದ್ ದಾಮೋರ್ ಅವರನ್ನು ಕಣಕ್ಕಿಳಿಸಿತ್ತು. ನಂತರ ಮನಸು ಬದಲಿಸಿದ ಕಾಂಗ್ರೆಸ್ ಭಾರತ್ ಆದಿವಾಸಿ ಪಕ್ಷ ಅಭ್ಯರ್ಥಿ ರಾಜ್‌ ಕುಮಾರ್ ರೋಟ್ ಅವರಿಗೆ ಬೆಂಬಲ ನೀಡಲು ನಿರ್ಧರಿಸಿತ್ತು. ಬುಡಕಟ್ಟು ಸಮುದಾಯದ ಮತಗಳು ಹೆಚ್ಚಾಗಿರುವುದರಿಂದ, ಬಿಎಪಿಗೆ ಬೆಂಬಲ ನೀಡಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬಹುದು ಎಂದು ಕಾಂಗ್ರೆಸ್ ಲೆಕ್ಕ ಹಾಕಿತ್ತು. ಆದರೆ, ನಾಮಪತ್ರ ಹಿಂಪಡೆಯಬೇಕಿದ್ದ ಅಭ್ಯರ್ಥಿ ಅರವಿಂದ್ ಗೆ  ದಿಢೀರ್ ನಾಪತ್ತೆಯಾಗಿದ್ದರು. ಹೀಗಾಗಿ ಪಕ್ಷದ ಅಭ್ಯರ್ಥಿಯನ್ನು ಸೋಲಿಸುವಂತೆ ಖುದ್ದು ಕೈ‌ನಾಯಕರೇ ಪ್ರಚಾರ ಮಾಡುವಂತಾಗಿದೆ‌.

Shwetha M

Leave a Reply

Your email address will not be published. Required fields are marked *