ವೈಭವ್ ಬೆಂಚ್.. BCCIಗೆ ಬ್ಯಾಕ್ ಫೈರ್ – ENGನಲ್ಲಿ ಸೂರ್ಯವಂಶಿ DEBUT?
ಬಾಸ್ ಬೇಬಿಗೆ ವೇಯ್ಟಿಂಗ್ ಗೇಮ್ ಬೇಕಾ?

ವೈಭವ್ ಸೂರ್ಯವಂಶಿ.. ಕಳೆದ ಎರಡು ತಿಂಗಳಿಂದ್ಲೂ ಸಿಕ್ಕಾಪಟ್ಟೆ ಟ್ರೆಂಡಿಂಗ್ನಲ್ಲಿರೋ ಹೆಸರು. ಐಪಿಎಲ್ನಲ್ಲಿ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿ ಟೀಂ ಇಂಡಿಯಾ ಸೀನಿಯರ್ಸ್ ಟೀಮ್ಗೂ ಕಾಲಿಟ್ಟಿರೋ ವೈಭವ್ ಈಗ ವಿಶ್ವಕ್ರಿಕೆಟ್ನ ಸೆನ್ಸೇಷನಲ್ ಸ್ಟಾರ್. ಬಟ್ ಬ್ಯಾಡ್ಲಕ್ ಏನಂದ್ರೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಡೆಬ್ಯೂ ಮಾಡೋಕೆ ಅವಕಾಶ ಸಿಕ್ಕಿಲ್ಲ. ಒಂದ್ಕಡೆ ಭಾರತ ಎರಡಕ್ಕೆ ಎರಡೂ ಪಂದ್ಯಗಳನ್ನ ಸೋತ ಮೇಲಂತೂ ವೈಭವ್ ವಿಚಾರದಲ್ಲಿ ಮಾಜಿ ದಿಗ್ಗಜರೇ ಧ್ವನಿ ಎತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿಸಲೇಬೇಕು ಅಂದಿದ್ದಾರೆ.
ಇದನ್ನೂ ಓದಿ : ಕೋಚ್ & ಕ್ಯಾಪ್ಟನ್ COLD WAR – ಶ್ರೇಯಸ್-ಗಂಭೀರ್ ಟೀಂ ಮುಗಿಸಿದ್ರಾ?
ಐರ್ಲೆಂಡ್ ವಿರುದ್ಧದ ಫಸ್ಟ್ ಮ್ಯಾಚಲ್ಲಿ ಟಾಸ್ ಪ್ರೊಸೀಜರ್ಸ್ ಆದ್ಮೇಲೆ ಶ್ರೇಯಸ್ ಅಯ್ಯರ್ಗೆ ಸ್ಪೋರ್ಟ್ಸ್ ಕಾಮೆಂಟೇಟರ್ ಒಂದು ಪ್ರಶ್ನೆ ಕೇಳ್ತಾರೆ. ಇವತ್ತಿನ ಮ್ಯಾಚಲ್ಲಿ ವೈಭವ್ ಸೂರ್ಯವಂಶಿ ಆಡ್ತಿದ್ದಾರಾ ಅಂತಾ. ಆಗ ಶ್ರೇಯಸ್ ಹೇಳ್ತಾರೆ. ಅನ್ ಫಾರ್ಚುನೇಟ್ಲಿ ಇಲ್ಲ. ಸೂರ್ಯವಂಶಿ ಗನ್ ಪ್ಲೇಯರ್. ಬಟ್ ಇನ್ನೂ ಉತ್ತಮವಾಗಿ ಆಡುವಂಥ ಅದ್ಭುತ ಪ್ಲೇಯರ್ಸ್ ತಂಡದಲ್ಲಿದ್ದಾರೆ. ಸೋ ನಾವು ಅವ್ರಿಗೆ ಸಪೋರ್ಟ್ ಮಾಡ್ತೀವಿ. ಟೈಂ ಬಂದಾಗ ಸೂರ್ಯವಂಶಿಗೆ ಚಾನ್ಸ್ ಸಿಗುತ್ತೆ ಅಂತಾ. ಆದ್ರೆ ಭಾರತ ಎರಡಕ್ಕೆ ಎರಡೂ ಪಂದ್ಯಗಳನ್ನ ಸೋತ ಮೇಲೆ ಸೂರ್ಯವಂಶಿ ತಂಡದಲ್ಲಿ ಆಡ್ಬೇಕಿತ್ತು ಅನ್ನೋ ಪ್ರೆಶರ್ ಜಾಸ್ತಿಯಾಗ್ತಿದೆ.
ಸೂರ್ಯವಂಶಿ ವಿಚಾರದಲ್ಲಿ ಯಾಕೆ ವೇಯ್ಟಿಂಗ್ ಗೇಮ್?
ಐರ್ಲೆಂಡ್ ವಿರುದ್ಧವೇ ವೈಭವ್ ಆಡ್ಬೇಕಿತ್ತು ಅನ್ನೋದು ಕೆಲವರ ವಾದ. ಇನ್ನೊಂದಷ್ಟು ಮಂದಿ ವೈಭವ್ ಆಡಿದ್ರೆ ಭಾರತ ಏನ್ ಗೆದ್ದು ಬಿಡ್ತಿತ್ತಾ..? ಯಾಕೆ ಅಷ್ಟೊಂದು ಬಿಲ್ಡಪ್ ಕೊಡ್ತೀರಿ ಅನ್ನೋರು ಇನ್ನೊಂದಷ್ಟು ಜನ. ರಿಯಾಲಿಟಿ ಏನಂದ್ರೆ ವೈಭವ್ಗೆ ಯಾರು ಸುಖಾಸುಮ್ಮಗೆ ಹೈಪ್ ಕೊಡ್ತಿಲ್ಲ. ಅವ್ರಲ್ಲಿರೋ ಟ್ಯಾಲೆಂಟ್ನಿಂದಲೇ ಅವ್ರು ತಂಡಕ್ಕೆ ಸೆಲೆಕ್ಟ್ ಆಗಿರೋದು. 25, 30 ವರ್ಷ ಆಗಿರೋ ಆಟಗಾರರೇ ಭಾರತ ತಂಡಕ್ಕೆ ಸೆಲೆಕ್ಟ್ ಆಗೋಕೆ ಸರ್ಕಸ್ ಮಾಡ್ತಿದ್ದಾರೆ. ಬಟ್ 15 ವರ್ಷದ ಸೂರ್ಯವಂಶಿ ಆಯ್ಕೆಯಾಗ್ತಾರೆ ಅಂದ್ರೆ ಅದು ಪ್ಯೂರ್ಲಿ ಅವ್ರಲ್ಲಿರೋ ಸಾಮರ್ಥ್ಯವೇ. ಐಪಿಎಲ್ನಲ್ಲಿ, ಅಂಡರ್ 19ನಲ್ಲಿ, ಭಾರತ ಎ ಟೀಂ ಪರ ಆಡುವಾಗ ಸ್ಟಾರ್ ಬೌಲರ್ಗಳ ಎದುರಲ್ಲೇ ಅಬ್ಬರಿಸೋ ಸಿಡಿಲಮರಿಗೆ ಭಾರತ ತಂಡದಲ್ಲಿ ಅವಕಾಶ ಕೊಡೋದ್ರಲ್ಲಿ ತಪ್ಪೇನಿಲ್ಲ. ಐಪಿಎಲ್ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿರೋ ಪ್ಲೇಯರ್. ಶ್ರೀಲಂಕಾ ತ್ರಿಕೋನ ಸರಣಿಯ ಫೈನಲ್‌ನಲ್ಲಿ 11 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ರು. ಹಾಗೇ ಕೊನೆಯ 10 ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಸಲ 90 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅದೆಲ್ಲವೂ ಕೂಡ 200+ ಸ್ಟ್ರೈಕ್ರೇಟ್ನಲ್ಲಿ. ಇದೇ ಕಾರಣಕ್ಕೆ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್ ಸುನಿಲ್ ಗವಾಸ್ಕರ್ ಕೂಡ ಇಂಗ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಚಾನ್ಸ್ ಕೊಡೋದು ಬೆಟರ್ ಅಂದಿದ್ದಾರೆ. ಹಾಗಂತ ಒತ್ತಾಯಪೂರ್ವಕವಾಗಿ ಬೇರೆಯವ್ರ ಸ್ಲಾಟ್ನಲ್ಲಿ ಆಡಿಸಬೇಕು ಅನ್ನೋ ಸಿಚುಯೇಷನ್ ಏನೂ ಇಲ್ಲ. ಪ್ಲೇಯಿಂಗ್ 11ನಲ್ಲಿ ಆಡೋಕೆ ಎಲ್ಲರಿಗಿಂತಲೂ ಮೋಸ್ಟ್ ಡಿಸರ್ವಿಂಗ್ ಇದ್ದಾರೆ.
ವೈಭವ್ ಯಾಕೆ ಆಡಬೇಕು?
ಐರ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಟಾಪ್ ಆರ್ಡರ್ ಕಂಪ್ಲೀಟ್ ಕೊಲ್ಯಾಪ್ಸ್
ಪ್ಲೇಯಿಂಗ್ 11 ಚಾನ್ಸ್ ಗಾಗಿ ಮಾಜಿ ಕ್ರಿಕೆಟಿಗರಿಂದಲೂ ಹೆಚ್ಚುತ್ತಿರೋ ಒತ್ತಡ
ಟಿ-20 ಫಾರ್ಮೆಟ್ ನಲ್ಲಿ ಜಗತ್ತಿನಲ್ಲೇ ಸದ್ಯ ನಂಬರ್ 1 ಬ್ಯಾಟರ್ ಸೂರ್ಯವಂಶಿ
ಪವರ್ ಪ್ಲೇನಲ್ಲೇ ಪಂದ್ಯದ ದಿಕ್ಕನ್ನೇ ಬದಲಿಸೋ ಸಾಮರ್ಥ್ಯವಿರುವ ವೈಭವ್
ಇಂಗ್ಲೆಂಡ್ ಸರಣಿಗೆ ಟೀಂ ಇಂಡಿಯಾಗೆ ಸೆಲೆಕ್ಟ್ ಆಗಿರೋ ಪ್ಯೂರ್ ಬ್ಯಾಟರ್
ಅದ್ಭುತ ಫಾರ್ಮ್ ನಲ್ಲಿ ಇರೋದ್ರಿಂದ ಪ್ಲೇಯಿಂಗ್ 11ನಲ್ಲಿ ಅವಕಾಶ

ನೋಡಿರಿ

