BCCI ಕ್ಯಾಂಪ್ ಗೆ ಸಚಿನ್, ದ್ರಾವಿಡ್? – ಭಾರತ ಕ್ರಿಕೆಟ್ ನಲ್ಲಿ ದಿಗ್ಗಜರ ಕ್ರಾಂತಿ 
ಸೂಪರ್ ಸ್ಟಾರ್ಸ್ ಕೈಗೆ POWER!

BCCI ಕ್ಯಾಂಪ್ ಗೆ ಸಚಿನ್, ದ್ರಾವಿಡ್? – ಭಾರತ ಕ್ರಿಕೆಟ್ ನಲ್ಲಿ ದಿಗ್ಗಜರ ಕ್ರಾಂತಿ ಸೂಪರ್ ಸ್ಟಾರ್ಸ್ ಕೈಗೆ POWER!

ವಿಶ್ವ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಪ್ರಾಬಲ್ಯ ದಿನೇದಿನೇ ಹೆಚ್ಚಾಗ್ತಾನೇ ಇದೆ. ಮೂರೂ ಫಾರ್ಮೆಟ್​ಗಳಲ್ಲೂ ಐಸಿಸಿ ರ್ಯಾಂಕಿಂಗ್ಸ್, ಐಸಿಸಿ ಟ್ರೋಫಿಗಳ ಗೆಲುವು, ಬಲಿಷ್ಠ ಬೆಂಚ್ ಸ್ಟ್ರೆಂತ್ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿ ಬಿಸಿಸಿಐ ವಿಶ್ವಕ್ರಿಕೆಟ್​ನೇ ಆಳ್ತಿದೆ. ಹೀಗಿದ್ರೂ ಬಿಸಿಸಿಐ ದಿಗ್ಗಜರ ಅನುಭವ ಬಳಸಿಕೊಳ್ತಿಲ್ಲ ಅನ್ನೋ ಆರೋಪಗಳಿವೆ. ಇದಕ್ಕಾಗಿ ಸುನಿಲ್ ಗವಾಸ್ಕರ್ ಒಂದು ಸಲ್ಯೂಷನ್ ಕೊಟ್ಟಿದ್ದಾರೆ.

ಇದನ್ನೂ ಓದಿ : ವೈಭವ್ ಬೆನ್ನಿಗೆ ನಿಂತ ಶ್ರೇಯಸ್ – ರೋಬೋಟ್ ಅಲ್ಲ ಎಂದಿದ್ದೇಕೆ ಸಂಜು?

ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ್ಮೇಲೆ ಸಾಕಷ್ಟು ವಿಚಾರಗಳಲ್ಲಿ ಹಲವು ಕ್ರಿಕೆಟರ್​ಗಳಿಗೆ ಭಿನ್ನಾಭಿಪ್ರಾಯಗಳಿವೆ. ಪ್ರತಿಭಾವಂತರ ಆಯ್ಕೆ ವಿಚಾರದಲ್ಲೂ ಅಪಸ್ವರಗಳಿವೆ. ಇದೀಗ ಈ ಕನ್ಫ್ಯೂಷನ್​ಗೆ ಭಾರತೀಯ ಕ್ರಿಕೆಟ್‌ನ ದಿಗ್ಗಜ ಸುನಿಲ್ ಗವಾಸ್ಕರ್ ಒಂದು ಸಲಹೆ ನೀಡಿದ್ದಾರೆ.

ಕ್ರಿಕೆಟ್ ಸಲಹಾ ಸಮಿತಿ ಸೇರ್ತಾರಾ ಸೂಪರ್ ಸ್ಟಾರ್ಸ್?

ಪ್ರಸ್ತುತ ಬಿಸಿಸಿಐನಲ್ಲಿರುವ ಕ್ರಿಕೆಟ್ ಸಲಹಾ ಸಮಿತಿ ಅಂದ್ರೆ CACಯ ವ್ಯಾಪ್ತಿಯನ್ನು ವಿಸ್ತರಿಸಿ, ಭಾರತೀಯ ಕ್ರಿಕೆಟ್‌ನ ಟೆಕ್ನಿಕಲ್ ನಿರ್ಧಾರಗಳಲ್ಲಿ ದೇಶದ ಮಾಜಿ ಕ್ರಿಕೆಟ್ ದಿಗ್ಗಜರ ಅನುಭವವನ್ನು ಬಳಸಿಕೊಳ್ಳಲು ಹೊಸ ಸಮಿತಿಯೊಂದನ್ನು ರಚಿಸಬೇಕು ಎಂದು ಗವಾಸ್ಕರ್ ಹೇಳಿದ್ದಾರೆ. ಮಿಡ್-ಡೇ ಪತ್ರಿಕೆಗೆ ಬರೆದಿರುವ ತಮ್ಮ ಆರ್ಟಿಕಲ್​ನಲ್ಲಿ ಹೊಸ ಐಡಿಯಾ ಕೊಟ್ಟಿದ್ದಾರೆ. ಪ್ರಸ್ತುತ ಬಿಸಿಸಿಐನ ಸಿಎಸಿ ಸಮಿತಿಯಲ್ಲಿ ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣ್ ನಾಯಕ್ ಅವರಂತಹ ಮಾಜಿ ಆಟಗಾರರಿದ್ದಾರೆ. ಆದರೆ, ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ಅನುಭವ ಹೊಂದಿರೋ ಸಚಿನ್ ತೆಂಡೂಲ್ಕರ್ ಅವರಂತಹ ದೈತ್ಯ ಆಟಗಾರರನ್ನು ಈ ಮುಖ್ಯ ಸಮಿತಿಯಲ್ಲಿ ಸೇರ್ಪಡೆಗೊಳಿಸಬೇಕು ಅನ್ನೋದು ಗವಾಸ್ಕರ್ ಅವ್ರ ವಾದ.  ಹಾಗೇ ಈ ಸಮಿತಿಗೆ 7 ಲೆಜೆಂಡರಿ ಪ್ಲೇಯರ್​ಗಳ ಹೆಸ್ರನ್ನ ಸಜೆಸ್ಟ್ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ರವಿಶಾಸ್ತ್ರಿ, ಅನಿಲ್ ಕುಂಬ್ಳೆ, ಹರ್ಭಜನ್ ಸಿಂಗ್ ಹಾಗೂ ವೀರೇಂದ್ರ ಸೆಹ್ವಾಗ್ ಅವರಂತಹ ಅನುಭವಿ ಆಟಗಾರರನ್ನೊಳಗೊಂಡ ಪ್ರಬಲ ಸಮಿತಿಯನ್ನು ಬಿಸಿಸಿಐ ರಚಿಸಬೇಕು. ಈ ಸಮಿತಿಗೆ ಪ್ರತ್ಯೇಕ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ನೇಮಿಸಿ, ಕ್ರಿಕೆಟ್‌ನ ತಾಂತ್ರಿಕ ನಿರ್ಧಾರಗಳಲ್ಲಿ ಇವರ ಅನುಭವವನ್ನು ಬಳಸಿಕೊಳ್ಬೇಕು ಅಂತಾ ಸಲಹೆ ನೀಡಿದ್ದಾರೆ.

ಹೊಸ ಜವಾಬ್ದಾರಿ ಹಂಚಿಕೆ ಬಗ್ಗೆಯೂ ಸಲಹೆ!

ಇನ್ನು ಕೇವಲ ಆಯ್ಕೆಗಷ್ಟೇ ಸೀಮಿತವಾಗದೆ ಅವ್ರ ಕಾರ್ಯವ್ಯಾಪ್ತಿ ಬಗ್ಗೆಯೂ ಸಜೇಷನ್ ನೀಡಿದ್ದಾರೆ.  ಪ್ರಸ್ತುತ CAC ಕೇವಲ Head Coach ಮತ್ತು Selectors ಸಂದರ್ಶನ ಮಾಡುವ ಕೆಲಸಕ್ಕೆ ಮಾತ್ರ ಸೀಮಿತವಾಗಿದೆ. ಆದರೆ ಹೊಸ ಸಮಿತಿಯು ಭಾರತೀಯ ಕ್ರಿಕೆಟ್‌ನ ಎಲ್ಲಾ ಪ್ರಮುಖ ನಿರ್ಧಾರಗಳಲ್ಲಿ ಭಾಗಿಯಾಗಬೇಕು.  ದೇಶಿ (Domestic) ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳಾಪಟ್ಟಿಗಳನ್ನು ನಿರ್ಧರಿಸುವಲ್ಲಿ ಈ ಸಮಿತಿಯ ಸಲಹೆ ಪಡೆಯಬೇಕು. ಇದೇ ಮಾದರಿಯಲ್ಲಿ ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಗೂ ಮಾಜಿ ಮಹಿಳಾ ಕ್ರಿಕೆಟ್ ತಾರೆಗಳನ್ನೊಳಗೊಂಡ ಪ್ರತ್ಯೇಕ ಸಲಹಾ ಸಮಿತಿಯನ್ನು ರಚಿಸಬೇಕು, ಇದು ಭಾರತೀಯ ಮಹಿಳಾ ಕ್ರಿಕೆಟನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಅನ್ನೋದು ಗವಾಸ್ಕರ್ ಮಾತು. ಸೋ ಇಲ್ಲಿ ಗವಾಸ್ಕರ್ ಉದ್ದೇಶ ಚೆನ್ನಾಗೇ ಇದೆ. ಭಾರತವನ್ನ ಉತ್ತುಂಗಕ್ಕೆ ಕೊಂಡೊಯ್ದಿರೋ ಲೆಜೆಂಡರ್ಸ್ ಈಗಲೂ ಕೂಡ ತಮ್ಮ ಅನುಭವವನ್ನ ಯಂಗ್​ಸ್ಟರ್ಸ್​ಗೆ ನೀಡೋ ಮೂಲಕ ತಂಡವನ್ನ ಇನ್ನಷ್ಟು ಸ್ಟ್ರಾಂಗ್ ಮಾಡಬಹುದು. ಆದ್ರೆ ಬಿಸಿಸಿಐ ಇದನ್ನ ಎಷ್ಟು ಸೀರಿಯಸ್ ಆಗಿ ತಗೊಳ್ಳುತ್ತೆ ಅನ್ನೋದೇ ಇಲ್ಲಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *