ವರ್ಷದಲ್ಲಿ 1 ತಿಂಗಳು ಕ್ರಿಕೆಟ್ ಬಂದ್ – ಆಟಗಾರರಿಗೆ ರೆಸ್ಟ್ ಕೊಡುತ್ತಾ BCCI?
ಬ್ಯಾಕ್ ಟು ಬ್ಯಾಕ್ ಪಂದ್ಯ ಹೊರೆನಾ?

ವರ್ಷದಲ್ಲಿ 1 ತಿಂಗಳು ಕ್ರಿಕೆಟ್ ಬಂದ್ – ಆಟಗಾರರಿಗೆ ರೆಸ್ಟ್ ಕೊಡುತ್ತಾ BCCI?ಬ್ಯಾಕ್ ಟು ಬ್ಯಾಕ್ ಪಂದ್ಯ ಹೊರೆನಾ?

ಐಪಿಎಲ್ ಆಯ್ತು.. ಅದಾಗಿ ವಾರದಲ್ಲೇ ಅಫ್ಘನಿಸ್ತಾನ್ ವಿರುದ್ಧ ಏಕೈಕ ಟೆಸ್ಟ್ ಮ್ಯಾಚ್.. ಇನ್ನೊಂದು ವಾರದಲ್ಲೇ ಮೂರು ಪಂದ್ಯಗಳ ಏಕದಿನ ಸರಣಿ. ಅದು ಕಳೆದು ವಾರಕ್ಕೂ ಮೊದ್ಲೇ ಐರ್ಲೆಂಡ್ ವಿರುದ್ಧ ಟಿ-20ಐ ಸರಣಿ. ಅದಾಗಿ ನಾಲ್ಕೇ ದಿನಕ್ಕೆ ಇಂಗ್ಲೆಂಡ್ ವಿರುದ್ಧ ಟಿ-20ಐ ಸಿರೀಸ್. ಅತ್ತ ಇನ್ನ ಮೂರು ದಿನಕ್ಕೆ ಏಕದಿನ ಸರಣಿ. ಮಿನಿಮಮ್ ಒನ್ ವೀಕ್ ಕೂಡ ಗ್ಯಾಪ್ ಇಲ್ಲ. ಆದ್ರೀಗ ವರ್ಷದಲ್ಲಿ ಒಂದು ತಿಂಗಳು ಕ್ರಿಕೆಟರ್ಸ್ ಮತ್ತು ಫ್ಯಾನ್ಸ್​ಗೆ ಬ್ರೇಕ್ ಕೊಡಿ ಅನ್ನೋ ಒತ್ತಾಯ ಕೇಳಿ ಬಂದಿದೆ.

ಇದನ್ನೂ ಓದಿ : ಪಾಂಡ್ಯ-ಜೈಸ್ವಾಲ್ Swap Deal – KKR ಕ್ಯಾಪ್ಟನ್ ಆಗ್ತಾರಾ ಸೂರ್ಯ?

ಜೂನ್ 26ರಿಂದ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ-20 ಸರಣಿಗೆ ಭಾರತ ಸಜ್ಜಾಗ್ತಿದೆ. ಈ ಸರಣಿಗೂ ಮೊದ್ಲೇ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಬಿಸಿಸಿಐಗೆ ಒಂದು ಬಿಗ್ ಸಜೇಷನ್ ಕೊಟ್ಟಿದ್ದಾರೆ. ಶುಭಮನ್ ಗಿಲ್ ಕ್ಯಾಪ್ಟನ್ಸಿಯಲ್ಲಿ ಇತ್ತೀಚೆಗೆ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಗೆದ್ದು ಬೀಗಿದೆ. ಸತತ 2 ತಿಂಗಳ ಐಪಿಎಲ್ ಮುಗಿದ ಆರು ದಿನಗಳಲ್ಲೇ ಈ ಸರಣಿ ಸ್ಟಾರ್ಟ್ ಆಗಿತ್ತು. ಬ್ಯಾಕ್ ಟು ಬ್ಯಾಕ್ ಪಂದ್ಯಗಳಿಂದ ಭಾರತ ತಂಡದ ಆಟಗಾರರು ರೆಸ್ಟ್​ಲೆಸ್ ಆಗಿದ್ದು ಅವ್ರಿಗೆ ರೆಸ್ಟ್ ಕೊಡುವಂತೆ ಸಲಹೆ ನೀಡಿದ್ದಾರೆ.

ಹಿರಿಯ ಆಟಗಾರರಿಗೆ 1 ತಿಂಗಳ ರೆಸ್ಟ್ ಕೇಳಿದ ಗವಾಸ್ಕರ್!

ಸರಣಿಯಿಂದ ಸರಣಿಗೆ ವಾರವೂ ಕೂಡ ಬ್ರೇಕ್ ಇಲ್ಲದೆ ಬಿಸಿಸಿಐ ಪಂದ್ಯಗಳನ್ನ ಶೆಡ್ಯೂಲ್ ಮಾಡ್ತಿದೆ. ಇದ್ರಿಂದಾಗಿ ಆಟಗಾರರಿಗೆ ವಿಶ್ರಾಂತಿ ಸಿಕ್ತಿಲ್ಲ. ಹೀಗಾಗಿ ಹಿರಿಯ ಆಟಗಾರರಿಗೆ ಕನಿಷ್ಠ ಒಂದು ತಿಂಗಳ ವಿಶ್ರಾಂತಿ ನೀಡಬೇಕು. ಇದು ಅವರ ಹೆಲ್ತ್ ಕಾಪಾಡಿಕೊಳ್ಳಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಹಾಯ ಮಾಡುತ್ತದೆ ಎಂದು ಗವಾಸ್ಕರ್ ಬಿಸಿಸಿಐಯನ್ನು ಒತ್ತಾಯಿಸಿದ್ದಾರೆ. ಭಾರತ ಕ್ರಿಕೆಟ್ ಬೋರ್ಡ್ ಅಫ್ಘಾನಿಸ್ತಾನ, ಜಿಂಬಾಬ್ವೆ ಮತ್ತು ಶ್ರೀಲಂಕಾದಂತಹ ದೇಶಗಳಿಗೆ ಅಣ್ಣನಂತೆ ನಿಂತು ಆಯಾ ದೇಶಗಳಿಗೆ ಪ್ರವಾಸ ಮಾಡುವ ಮೂಲಕ ಅವರು ಕೂಡ ಕ್ರಿಕೆಟ್​ನಲ್ಲಿ ಬೆಳೆಯೋಕೆ ಜೊತೆಗೆ ಫೈನಾನ್ಶಿಯಲಿ ಸ್ಟ್ರಾಂಗ್ ಆಗೋಕೆ ಸಹಾಯ ಮಾಡ್ತಿದೆ. ಆದ್ರೆ ನಮ್ಮ ಕ್ರಿಕೆಟಿಗರ ಆರೋಗ್ಯ ಮತ್ತು ಫಿಟ್ನೆಸ್ ಕೂಡ ಮುಖ್ಯವಾಗುತ್ತೆ. ವರ್ಷದಲ್ಲಿ ಭಾರತದ ಆಟಗಾರರಿಗೆ ಅಟ್​ಲೀಸ್ಟ್ ಒಂದು ತಿಂಗಳು ರೆಸ್ಟ್ ನೀಡಬೇಕು. ಹಾಗೇನಾದ್ರೂ ಪಂದ್ಯಗಳನ್ನ ಆಡಿಸಲೇಬೇಕು ಅಂತಿದ್ರೆ ಭಾರತದಲ್ಲಿ ಇನ್ನೂ ಕೂಡ ಸಾಕಷ್ಟು ಟ್ಯಾಲೆಂಟೆಡ್ ಪ್ಲೇಯರ್ಸ್ ಇದ್ದಾರೆ. ಹೀಗಾಗಿ ಕೆಲವರಿಗೆ ರೆಸ್ಟ್ ನೀಡಿ ಬೇರೆಯವ್ರನ್ನ ಆಡಿಸಬಹುದು ಎಂದು ಸಲಹೆ ನೀಡಿದ್ದಾರೆ. ಭಾರತವು ಆಲ್ಮೋಸ್ಟ್ ಪ್ರತಿ ತಿಂಗಳು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವುದರಿಂದ ಇಂಜುರಿ ಪ್ರಾಬ್ಲಮ್ಸ್ ಕೂಡ ಜಾಸ್ತಿ ಇರುತ್ತೆ. ಹೀಗಾಗಿ ವಿಶ್ರಾಂತಿ ಅವಶ್ಯಕ ಎಂದಿದ್ದಾರೆ. ಌಂಡ್ ಇದೇ ವೇಳೆ ಅಭಿಮಾನಿಗಳ ಬಗ್ಗೆ ಹೇಳೋದನ್ನೂ ಅವ್ರು ಮರೆತಿಲ್ಲ.

ಅಭಿಮಾನಿಗಳಲ್ಲಿಯೂ ಕಡಿಮೆಯಾಗ್ತಿದೆಯಾ ಕ್ರೇಜ್?

ಲಕ್ನೋ ಮತ್ತು ಚೆನ್ನೈನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳ ವೇಳೆಯೂ ಮೈದಾನಗಳು ಅರ್ಧಕ್ಕರ್ಧ ಖಾಲಿ ಇದ್ವು. ಭಾರತದ ಶೆಡ್ಯೂಲ್​ನಲ್ಲಿ ಲಾಂಗ್ ಗ್ಯಾಪ್ ಇಲ್ಲದೇ ಇರೋದ್ರಿಂದ  ಅಭಿಮಾನಿಗಳು ದಣಿದಿದ್ದಾರೆ ಮತ್ತು ಆಸಕ್ತಿ ಕಡಿಮೆ ಮಾಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ. ಹಿರಿಯರ ಪಂದ್ಯಗಳಿಗೇ ಮಣೆ ಹಾಕೋ ಬದ್ಲು ಯುವ ಆಟಗಾರರಿಗೆ ಅವಕಾಶ ಮತ್ತು ಅನುಭವ ಸಿಗುವಂತೆ ‘ಎ’ ತಂಡ ಮತ್ತು ಅಂಡರ್-19 ಪಂದ್ಯಗಳನ್ನು ಹೆಚ್ಚಿಸೋದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ. ದಯವಿಟ್ಟು ರಾಷ್ಟ್ರೀಯ ಆಟಗಾರರನ್ನು ಉಳಿಸಿ ಮತ್ತು ಅವರಿಗೆ ಒಂದು ತಂಡವಾಗಿ ಒಟ್ಟಿಗೆ ಸರಿಯಾದ ವಿಶ್ರಾಂತಿ ನೀಡಬೇಕು. ಪ್ರತಿಯೊಬ್ಬ ಉನ್ನತ ಆಟಗಾರನಿಗೆ ವರ್ಷದಲ್ಲಿ ಕನಿಷ್ಠ ಒಂದು ತಿಂಗಳಾದರೂ ಪೂರ್ಣ ವಿರಾಮ ಸಿಗಬೇಕು ಎಂದಿದ್ದಾರೆ. ಆದ್ರೆ ಬಿಸಿಸಿಐ ಏನು ಮಾಡುತ್ತೆ ಅನ್ನೋದೇ ಈಗಿರೋ ಪ್ರಶ್ನೆ.

Shantha Kumari

Leave a Reply

Your email address will not be published. Required fields are marked *