2 ದಿನ.. 30 ವಿಕೆಟ್.. ಪಂದ್ಯ ಫಿನಿಶ್ – ಸೋಲಿನ ಭಯಕ್ಕೆ ಪಿಚ್ ಬದಲಿಸಿದ್ರಾ?
ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಕಳ್ಳಾಟ

2 ದಿನ.. 30 ವಿಕೆಟ್.. ಪಂದ್ಯ ಫಿನಿಶ್ – ಸೋಲಿನ ಭಯಕ್ಕೆ ಪಿಚ್ ಬದಲಿಸಿದ್ರಾ?ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಕಳ್ಳಾಟ

ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್ ಮ್ಯಾಚಲ್ಲಿ ತವರಿನಲ್ಲೇ ಸೋತಿದ್ದ ಆಸ್ಟ್ರೇಲಿಯಾ ಸೆಕೆಂಡ್ ಮ್ಯಾಚಲ್ಲಿ ಭರ್ಜರಿಯಾಗು ಗೆದ್ದು ಸೇಡು ತೀರಿಸಿಕೊಳ್ತು. ಅದೂ ಕೂಡ ಇನ್ನಿಂಗ್ಸ್ ಜೊತೆಗೆ 51 ರನ್‌ಗಳ ಭರ್ಜರಿ ಜಯ ಇದು. ಇಂಟ್ರೆಸ್ಟಿಂಗ್ ಅಂದ್ರೆ ಈ ಮ್ಯಾಚ್ ಕೇವಲ 2 ದಿನಗಳಲ್ಲೇ ಮುಗಿದಿದೆ. ಈ ಪಂದ್ಯದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಇದನ್ನೂ ಓದಿ : ಶ್ರೀಲಂಕಾ ಮೇಲೆ ಭಾರತ ಸವಾರಿ – ಲಂಕಾಗೆ ಫಾಲೋಆನ್ ಹೇರಿದ ಟೀಮ್ ಇಂಡಿಯಾ

ಡಾರ್ವಿನ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಬಾಂಗ್ಲಾದೇಶ ಗೆದ್ರೆ ಮೆಕೆಯ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲುವ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿ 1-1 ರಿಂದ ಸಮಬಲವಾಯ್ತು. ಆದ್ರೆ ಎರಡನೇ ಪಂದ್ಯ ಕೇವಲ ಎರದು ದಿನಗಳಲ್ಲೇ ಮುಗಿದಿದ್ದು ಅನುಮಾನಕ್ಕೆ ಕಾರಣವಾಗಿದೆ. ಮೊದಲ ಇನ್ನಿಂಗ್ಸ್​ನ ಮೊದಲ ದಿನವೇ 64 ರನ್​ಗಳಿಗೆ ಬಾಂಗ್ಲಾ ಆಲೌಟ್ ಆಗಿದ್ರೆ ಅದೇ ದಿನ   ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತ್ತು. ಸೋ ಅಲ್ಲಿಗೆ ಮೊದಲ ದಿನ 18 ವಿಕೆಟ್ ಬಿದ್ದಿದ್ವು. ಎರಡನೇ ದಿನ ಟೋಟಲ್ 210 ರನ್ಸ್ ಗೆ ಆಸೀಸ್ ಆಲೌಟ್ ಆಗಿ 146 ರನ್ಸ್ ಲೀಡ್ ನಲ್ಲಿದ್ರು. ಆದ್ರೆ ಎರಡನೇ ಇನ್ನಿಂಗ್ಸ್​ನಲ್ಲಿ ಬಾಂಗ್ಲಾ 95 ರನ್ಸ್ ಗೆ ಮತ್ತೆ ಆಲೌಟ್ ಆಯ್ತು. ಹೀಗಾಗಿ ಮ್ಯಾಚ್ ಕೇವಲ ಎರಡೇ ದಿನದಲ್ಲಿ ಮುಗಿದು ಇನ್ನಿಂಗ್ಸ್​ ಜೊತೆಗೆ ಆಸೀಸ್ 51 ರನ್​ಗಳ ಜಯ ಸಾಧಿಸಿದೆ. ಟೆಸ್ಟ್ ಇತಿಹಾಸದಲ್ಲೇ ಬಾಂಗ್ಲಾದೇಶ ತಂಡವು ಪಂದ್ಯವೊಂದರ ಎರಡೂ ಇನ್ನಿಂಗ್ಸ್‌ಗಳಲ್ಲಿ 100 ರನ್‌ಗಳ ಒಳಗೆ ಆಲೌಟ್ ಆಗಿದ್ದು ಇದೇ ಮೊದಲು. ಈ ಗೆಲುವು ಆಸೀಸ್​ ಮರ್ಯಾದೆ ಉಳಿಸಿದೆಯಾದ್ರೂ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಮಾಜಿ ಕ್ರಿಕೆಟರ್ಸ್ ಸಿಡಿದೆದ್ದಿದ್ದಾರೆ.  ಪಿಚ್ ಬಗ್ಗೆಯೂ ಅನುಮಾನಗಳನ್ನ ಮೂಡಿಸಿದೆ.

ಸೋಲಿನ ಭಯದಲ್ಲಿ ಪಿಚ್ ಬದಲಾವಣೆ ಮಾಡಿದ್ರಾ?

ಬಾಂಗ್ಲಾ ವಿರುದ್ಧ ಮೊದಲ ಪಂದ್ಯದಲ್ಲಿ ಫಾರ್ ದಿ ಫಸ್ಟ್ ಟೈಂ ತವರಿನಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿತ್ತು. ಈ ಸೋಲಿನಿಂದ ದೊಡ್ಡ ಮಟ್ಟದ ಅವಮಾನಕ್ಕೀಡಾಗಿದ್ರು. ಸೋ ಎರಡನೇ ಪಂದ್ಯದಲ್ಲೂ ಸೋತು ಕ್ಲೀನ್ ಸ್ವೀಪ್ ಆಗೋ ಭಯದಲ್ಲಿ ಪಿಚ್​ ಬದಲಿಸಿದ್ರು ಅನ್ನೋ ಆರೋಪಗಳಿವೆ. ಅದೂ ಅಲ್ದೇ ಒಂದಷ್ಟು ಕ್ರಿಕೆಟರ್ಸ್ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ.

ತಾಳ್ಮೆ ಕಸಿದ ಟೆಸ್ಟ್ ಪಂದ್ಯ!

ಎರಡು ದಿನಗಳಲ್ಲೇ ಟೆಸ್ಟ್ ಮುಗಿದಿದ್ದನ್ನು ಸುನಿಲ್ ಗವಾಸ್ಕರ್ ಪ್ರಶ್ನೆ

ಮ್ಯಾಕೆ ಪಿಚ್‌ ಗೆ ವೆರಿ ಗುಡ್ ಎಂದು ಐಸಿಸಿಯಿಂದ ರೇಟಿಂಗ್ ಸಿಗುತ್ತೆ

ಭಾರತದಲ್ಲಿನ ಪಿಚ್‌ ಗಳಿಗೆ unsatisfactory, Poor ಎಂದು ರೇಟಿಂಗ್

ಟೀಕೆಗಳ ವಿಚಾರದಲ್ಲೂ ಡಬಲ್ ಸ್ಟ್ಯಾಂಡರ್ಡ್, ಆಸೀಸ್ ಗೆ ಯಾಕಿಲ್ಲ?

ಬಾಂಗ್ಲಾದೇಶ ನಾಯಕ ಶಾಂಟೋ ಕೂಡ ಪಿಚ್ ಬಗ್ಗೆ ಪರೋಕ್ಷವಾಗಿ ಪ್ರಶ್ನೆ

ಉಪಖಂಡದ ಪಿಚ್‌ ಗಳಲ್ಲಿ ಬೌಲರ್ಸ್ ಮೇಲುಗೈ ಸಾಧಿಸಿದಾಗ ಪರಿಶೀಲನೆ

ಈಗ ಮ್ಯಾಕೆಯಲ್ಲೂ ಅದೇ ರೀತಿಯ ಪರಿಶೀಲನೆ ಇರಬೇಕು ಎಂದ ಶಾಂಟೋ

ಆಸ್ಟ್ರೇಲಿಯಾದ ಮಾಜಿ ನಾಯಕ ಲ್ಯಾಂಗರ್ ಕೂಡ 2 ದಿನದ ಟೆಸ್ಟ್ ಗೆ ಸಿಟ್ಟು

2 ದಿನಕ್ಕೆ ಮುಗಿದಿರುವುದು ಸಾಮಾನ್ಯ ಟೆಸ್ಟ್ ಪರಿಸ್ಥಿತಿ ಅಲ್ಲ ಎಂದ ಹೇಜಲ್‌ ವುಡ್

ಹೀಗಿದ್ರೂ ಒಂದಷ್ಟು ಆಸ್ಟ್ರೇಲಿಯನ್ ಕ್ರಿಕೆಟರ್ಸ್ ಮಾತ್ರ ಇದನ್ನ ಬ್ಯಾಟರ್​ಗಳ ಫೇಲ್ಯೂರ್. ಬೌಲರ್​ಗಳ ಎಕ್ಸ್​ಟ್ರಾರ್ಡಿನರಿ ಪರ್ಫಾಮೆನ್ಸ್.. ಸೋ ಪಿಚ್​ನಲ್ಲಿ ಯಾವುದೇ ಗೋಲ್​ಮಾಲ್ ಇಲ್ಲ ಅಂತಿದ್ದಾರೆ. ಌಕ್ಚುಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತದಲ್ಲಿ ಪಂದ್ಯಗಳು ಮೂರು ದಿನಗಳಿಗೆ ಮುಗಿದಾಗೆಲ್ಲಾ ಇದೇ ಆಸ್ಟ್ರೇಲಿಯಾದಿಂದ ಟೀಕೆಗಳು ಬಂದಿದ್ದೂ ಇದೆ. 2023ರಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ವೇಳೆ ಆಸ್ಟ್ರೇಲಿಯಾದ ಮಾಧ್ಯಮಗಳಲ್ಲಿ ಪಿಚ್‌ನ್ನು ಬೇಕಂತಲೇ ಸ್ಪಿನ್ ಫ್ರೆಂಡ್ಲಿ ಮಾಡಿದ್ದಾರೆ ಎನ್ನಲಾಗಿತ್ತು. ರಿಕಿ ಪಾಂಟಿಂಗ್ ಕೂಡ ಪ್ರಶ್ನೆ ಮಾಡಿದ್ರು. 2023ರ ಇಂದೋರ್ ಟೆಸ್ಟ್ ಪಿಚ್‌ಗೆ ICC ಆರಂಭದಲ್ಲಿ poor ರೇಟಿಂಗ್ ನೀಡಿತ್ತು. ನಂತರ BCCI ಮನವಿ ಬಳಿಕ ಅದನ್ನು below average ಎಂದು ಬದಲಿಸಿದ್ರು. ಆದ್ರೆ ಭಾರತದ ಪಿಚ್ ಮತ್ತು ಆಸ್ಟ್ರೇಲಿಯಾ ಪಿಚ್​ಗಳ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಸ್ ತೋರಿಸುತ್ತಿರೋದು ಸ್ಪಷ್ಟವಾಗಿ ಕಾಣಿಸ್ತಿದೆ. ಒಟ್ನಲ್ಲಿ ಭಾರತದ ಪಿಚ್‌ಗಳ ಗುಣಮಟ್ಟದ ಬಗ್ಗೆ ಆಗಾಗ್ಗೆ ಪ್ರಶ್ನೆ ಮಾಡೋ ಆಸ್ಟ್ರೇಲಿಯಾ ಈಗ ತನ್ನದೇ ತವರಿನಲ್ಲಿ 2022ರಿಂದ ಈಚೆಗೆ ನಾಲ್ಕು ಟೆಸ್ಟ್ ಪಂದ್ಯಗಳು ಕೇವಲ ಎರಡು ದಿನಕ್ಕೆ ಮುಗಿದಿವೆ.

Shantha Kumari

One thought on “2 ದಿನ.. 30 ವಿಕೆಟ್.. ಪಂದ್ಯ ಫಿನಿಶ್ – ಸೋಲಿನ ಭಯಕ್ಕೆ ಪಿಚ್ ಬದಲಿಸಿದ್ರಾ?
ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಕಳ್ಳಾಟ

Leave a Reply

Your email address will not be published. Required fields are marked *