ಭಾನುವಾರ ಹುಟ್ಟಿದವರು ಅದೃಷ್ಟ ಪಡೆಯೋಕೆ ಈ ಕೆಲಸವನ್ನು ತಪ್ಪದೇ ಮಾಡಿ

ಭಾನುವಾರದಂದು ಯಾವ ವ್ಯಕ್ತಿ ಜನಿಸುತ್ತಾನೋ ಆ ವ್ಯಕ್ತಿ ಸೂರ್ಯ ದೇವನ ಅನುಗ್ರಹಕ್ಕೆ ಪಾತ್ರನಾಗಿರುತ್ತಾನೆ. ಸೂರ್ಯನ ಪ್ರಭಾವದಿಂದಾಗಿ, ಅಂತಹ ಜನರು ಸೂರ್ಯನಂತೆ ಧೈರ್ಯ ಮತ್ತು ಶೌರ್ಯದಿಂದ ತುಂಬಿರುತ್ತಾರೆ. ಆದ್ದರಿಂದ, ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಾರೆ. ನೀವು ಅದೃಷ್ಟದ ಬೆಂಬಲವನ್ನು ಪಡೆದುಕೊಳ್ಳಲು ಭಾನುವಾರ ಯಾವ ಕೆಲಸವನ್ನು ಮಾಡಬೇಕು ಅನ್ನೋದ್ದನ್ನ ನೋಡೋಣ.
ಇದನ್ನೂ ಓದಿ: ಜೀವನದಲ್ಲಿ ಸಂತೋಷ-ಐಶ್ವರ್ಯ ಬೇಕಾ? – ಶನಿ ದೇವನ ಪ್ರೀತಿಪಾತ್ರವಾದ ಈ ಪ್ರಾಣಿಯ ಸೇವೆ ಮಾಡಿ
- ಭಾನುವಾರ ಸೂರ್ಯೋದಯಕ್ಕೆ ಮುನ್ನ ಎಚ್ಚರಗೊಂಡು ತಪ್ಪದೇ ಸೂರ್ಯ ದೇವರ ದರ್ಶನ ಮಾಡಿ
- ಈ ದಿನ ಸೂರ್ಯ ದೇವರನ್ನು ಪೂಜಿಸುವುದರೊಂದಿಗೆ ಸೂರ್ಯ ಮಂತ್ರಗಳನ್ನೂ ಪಠಿಸಿ.
- ಈ ದಿನ ಸೂರ್ತ ತ್ರಾಟಕ ಅಂದರೆ ಕಣ್ಣನ್ನು ಮಿಟುಕಿಸದೆ ಉದಯಿಸುತ್ತಿರುವ ಸೂರ್ಯನನ್ನು ನೋಡುವುದು.
- ಭಾನುವಾರದಂದು ಕೆಂಪು, ಚಿನ್ನದ ಬಣ್ಣ ಮತ್ತು ಕಿತ್ತಳೆ ಬಣ್ಣದ ಬಟ್ಟೆಯನ್ನೇ ಧಿರಿಸಿ.
- ಈ ದಿನ ಯಾರ ಮೇಲೂ ಕೋಪಿಸಿಕೊಳ್ಳದಿರಿ.
- ಸಂಪತ್ತು ಮತ್ತು ಸಮೃದ್ಧಿಗಾಗಿ, ಭಾನುವಾರ ಸಂಜೆ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ತುಪ್ಪದ ದೀಪಗಳನ್ನು ಹಚ್ಚಿ.
- ಪ್ರಗತಿ ಸಾಧಿಸಲು, ಈ ದಿನ ಬೆಲ್ಲ ಮತ್ತು ಹಾಲು ಬೆರೆಸಿದ ಅನ್ನವನ್ನು ಸೇವಿಸಿ.
- ಜಾತಕದಲ್ಲಿ ಸೂರ್ಯನ ಸ್ಥಾನವನ್ನು ಬಲಪಡಿಸಲು ಮತ್ತು ಸಮಸ್ಯೆಗಳಿಂದ ಮುಕ್ತಿ ಪಡೆಯಲು, ನೀರಿನಲ್ಲಿ ಬೆಲ್ಲ ಮತ್ತು ಅಕ್ಷತೆಯನ್ನು ಬೆರೆಸಿ ಹರಿಯುವ ನೀರಿನಲ್ಲಿ ಹಾಕಬೇಕು.
- ಸುಳ್ಳು ಹೇಳದಿರಿ
- ಈ ದಿನ ಸುಳ್ಳು ಹೇಳುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಮತ್ತು ಖ್ಯಾತಿಗೆ ಭಂಗವಾಗುವುದು.
- ಕಾಲಕಾಲಕ್ಕೆ ಬೆಲ್ಲ, ಕೆಂಪು ಬಟ್ಟೆ, ಗೋಧಿ ಮತ್ತು ಕೆಂಪು ಹೂವುಗಳನ್ನು ದಾನ ಮಾಡಿ.
- ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.

ನೋಡಿರಿ

