T-20I ಸರಣಿಯೂ INDಗೆ ಟೆನ್ಷನ್ – NZ ಬೇಟೆಗಿಲ್ಲ ತಿಲಕ್ & ಸುಂದರ್
ಭಾರತಕ್ಕೆ ಗಾಯದ ಮೇಲೆ ಬರೆ ಬೀಳುತ್ತಾ?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸೋತಿರೋ ಭಾರತ ನಾಳೆಯಿಂದ ಅದೇ ನ್ಯೂಜಿಲೆಂಡ್ ವಿರುದ್ಧ ಟಿ-20ಐ ಸರಣಿಯಲ್ಲಿ ಕಣಕ್ಕಿಳಿಯಲಿದೆ. ಆ ನಂತ್ರ ಡೈರೆಕ್ಟ್ ವಿಶ್ವಕಪ್ನಲ್ಲಿ ಭಾರತದ ಫೈಟ್ ಶುರುವಾಗುತ್ತೆ. ಹೀಗಿರುವಾಗ್ಲೇ ವಿಶ್ವಕಪ್ಗೆ ಸೆಲೆಕ್ಟ್ ಆಗಿದ್ದ ಭಾರತದ ಇಬ್ಬರು ಆಟಗಾರರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಜನವರಿ 18ರಂದು ಏಕದಿನ ಸರಣಿಯ ಕೊನೇ ಪಂದ್ಯ ಮುಗಿದಿದ್ದು ಜನವರಿ 21ರಿಂದ 5 ಪಂದ್ಯಗಳ ಟಿ-20ಐ ಸರಣಿ ಸ್ಟಾರ್ಟ್ ಆಗುತ್ತೆ. ಆದ್ರೀಗ ತಂಡದ ಇಬ್ಬರು ಪ್ರಮುಖ ಆಟಗಾರರು ಸರಣಿ ಜೊತೆ ಟಿ-20 ವಿಶ್ವಕಪ್ ಟೂರ್ನಿಯಿಂದಲೂ ರೂಲ್ಡ್ ಔಟ್ ಆಗಿದ್ದಾರೆ. ಭಾರತಕ್ಕೆ ಇದೇ ದೊಡ್ಡ ಸೆಟ್ ಬಾಕ್ ಆಗುತ್ತಾ ಅನ್ನೋ ಆತಂಕ ಮೂಡಿಸಿದೆ.
ತಿಲಕ್ ಆಯ್ತು ಈಗ ವಾಷಿಂಗ್ಟನ್ ಸುಂದರ್ ಔಟ್!
ಭಾರತದ ಬ್ಯಾಟಿಂಗ್ ನ ಪ್ರಮುಖ ಆಟಗಾರನಾಗಿರುವ ತಿಲಕ್ ವರ್ಮಾ ಈಗಾಗ್ಲೇ ಇಂಜುರಿ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ 3 ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ಇದರ ಬೆನ್ನಲ್ಲೇ ವಾಷಿಂಗ್ಟನ್ ಸುಂದರ್ ಕೂಡ ಟಿ-20 ಪಂದ್ಯಗಳನ್ನ ಮಿಸ್ ಮಾಡಿಕೊಳ್ತಿದ್ದಾರೆ. ತಿಲಕ್ ವರ್ಮಾ ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಟಿ-20 ವಿಶ್ವಕಪ್ನಲ್ಲಿ ಭಾರತದ ಜರ್ನಿ ಸ್ಟಾರ್ಟ್ ಆಗುವ 1 ವಾರದ ಮುಂಚೆಯಷ್ಟೇ ನ್ಯೂಜಿಲೆಂಡ್ ವಿರುದ್ಧದ ಟಿ20ಐ ಸರಣಿ ಮುಗಿಯುತ್ತೆ. ಆ ಹೊತ್ತಿಗೆ ಈ ಇಬ್ಬರು ಆಟಗಾರರು ಫಿಟ್ ಆಗೋದು ಡೌಟ್ ಇದೆ. ಇಬ್ಬರೂ ಐಸಿಸಿ ಈವೆಂಟ್‌ನಿಂದ ಹೊರಗುಳಿಯಬಹುದು. ಇವ್ರ ಬದಲಿಗೆ ತಿಲಕ್ ಬದಲಿಗೆ ಶ್ರೇಯಸ್ ಅಯ್ಯರ್ ಮತ್ತು ಸುಂದರ್ ಬದಲಿಗೆ ರವಿ ಬಿಷ್ಣೋಯ್ ಅವರನ್ನು ರಿಪ್ಲೇಸ್ಮೆಂಟ್ ಮಾಡಲಾಗ್ತಿದೆ. ಆದ್ರೆ ತಿಲಕ್ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು, ವಾಷಿಂಗ್ಟನ್ ಆಲ್‌ರೌಂಡರ್. ಇಬ್ಬರೂ ಮೆನ್ ಇನ್ ಬ್ಲೂ ತಂಡದ ಯಶಸ್ವೀ ಪ್ಲೇಯರ್ಸ್. ಆದ್ರೀಗ ಇಂಜುರಿ ಕಾರಣಕ್ಕೆ ವಿಶ್ವಕಪ್ನೂ ತಪ್ಪಿಸಿಕೊಳ್ಳೋ ಆತಂಕ ಇದೆ. ಟಿ-20 ವಿಶ್ವಕಪ್ನಲ್ಲಿ ಭಾರತದ ಅಭಿಯಾನವು ಫೆಬ್ರವರಿ 7 ರಂದು ಅಮೆರಿಕ ವಿರುದ್ಧ ಆರಂಭವಾಗುತ್ತದೆ. ಫೆಬ್ರವರಿ 15 ರಂದು ಪಾಕಿಸ್ತಾನ ವಿರುದ್ಧ ಭಾರತ ಅಖಾಡಕ್ಕಿಳಿಯಲಿದೆ. ಫೈನಲ್ ಪಂದ್ಯ ಮಾರ್ಚ್ 8 ರಂದು ನಡೆಯಲಿದೆ. 20 ತಂಡಗಳಲ್ಲಿ ಎಂಟು ತಂಡಗಳು ಸೂಪರ್ ಏಯ್ಟ್‌ನಲ್ಲಿ ಭಾಗವಹಿಸಲಿವೆ. ಅಲ್ಲಿಂದ ನಾಲ್ಕು ತಂಡಗಳು ಸೆಮಿಸ್‌ಗೆ ತಲುಪಲಿದ್ದು, ಎರಡು ತಂಡಗಳು ಫೈನಲ್‌ನಲ್ಲಿ ಆಡಲಿವೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಫೈನಲ್ ಪಂದ್ಯ ನಡೆಯಲಿದೆ.
2 ವರ್ಷಗಳ ಬಳಿಕ ಟಿ-20ಐ ತಂಡಕ್ಕೆ ಶ್ರೇಯಸ್!
ಇನ್ನು ಶ್ರೇಯಸ್ ಅಯ್ಯರ್ 2 ವರ್ಷಗಳ ಬಳಿಕ ಭಾರತದ ಟಿ-20ಐ ತಂಡಕ್ಕೆ ಕಂ ಬ್ಯಾಕ್ ಮಾಡ್ತಿದ್ದಾರೆ. 2023ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಕೊನೇ ಬಾರಿಗೆ ಆಡಿದ್ರು. ಇದಾದ್ಮೇಲೆ ಡೊಮೆಸ್ಟಿಕ್ನಲ್ಲಿ ಅಬ್ಬರಿಸಿದ್ದ ಶ್ರೇಯಸ್ 2024 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು IPL ಪ್ರಶಸ್ತಿಗೆ ಮುನ್ನಡೆಸಿದರು ಮತ್ತು 2025 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಫೈನಲ್‌ಗೆ ಲೀಡ್ ಮಾಡಿದ್ರು. ತಮ್ಮ ವೃತ್ತಿಜೀವನದಲ್ಲಿ, ಅಯ್ಯರ್ 51 ಟಿ20 ಪಂದ್ಯಗಳಲ್ಲಿ ಆಡಿದ್ದು 136.12 ರ ಸ್ಟ್ರೈಕ್ ರೇಟ್‌ನೊಂದಿಗೆ 1,104 ರನ್ ಗಳಿಸಿದ್ದಾರೆ.
ಟಿ-20 ವಿಶ್ವಕಪ್ ನಲ್ಲಿ ಇತಿಹಾಸ ನಿರ್ಮಿಸುತ್ತಾ ಭಾರತ?
ಚುಟುಕು ಮಾದರಿಯಲ್ಲಿ ಭಾರತ ಹಾಲಿ ಚಾಂಪಿಯನ್ ಜೊತೆಗೆ ಮತ್ತೆ ಟ್ರೋಫಿ ಗೆಲ್ಲುವ ಫೇವರೆಟ್ ಟೀಂ ಕೂಡ ಆಗಿದೆ. 2024 ರ ಆವೃತ್ತಿಯನ್ನು ಗೆದ್ದ ನಂತರ ಅವರು 36 ಟಿ 20 ಪಂದ್ಯಗಳಲ್ಲಿ 29 ಪಂದ್ಯಗಳನ್ನು ಗೆದ್ದಿದ್ದಾರೆ. ಹಾಗೇ ಒಂದೇ ಒಂದು ಸರಣಿ ಸೋತಿಲ್ಲ. ಌಂಡ್ 2007ರಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಭಾರತ ಚಾಂಪಿಯನ್ ಆಗಿತ್ತು. ಸೋ ಈಗ 2026 ರಲ್ಲಿ ಮತ್ತೆ ಭಾರತ ಗೆದ್ದರೆ ಮೂರು ಟಿ 20 ವಿಶ್ವಕಪ್ ಪ್ರಶಸ್ತಿಗಳನ್ನ ಗೆದ್ದ ಮೊದಲ ತಂಡ ಎನಿಸಿಕೊಳ್ಳಲಿದೆ. ಹಾಗೇ ಸತತ ಎರಡು ಟಿ 20 ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಂತಾಗುತ್ತೆ. ಜೊತೆಗೆ ಇಷ್ಟು ವರ್ಷಗಳ ಆವೃತ್ತಿಯಲ್ಲಿ ಯಾವುದೇ ಹೋಸ್ಟಿಂಗ್ ತಂಡ ಕಪ್ ಗೆದ್ದಿಲ್ಲ. ಈ ಸಲ ಭಾರತ ಗೆದ್ರೆ ಈ ಸಾಧನೆಯನ್ನೂ ಮಾಡಿದಂತಾಗುತ್ತೆ. ಹೀಗೆ ಟ್ರೋಫಿ ಗೆಲ್ಲೋಕೆ ಸಾಲು ಸಾಲು ಅಡ್ವಾಂಟೇಜಸ್ ಇದ್ರೂ ಭಾರತಕ್ಕೆ ಈಗ ಪ್ಳೇಯರ್ಗಳ ಇಂಜುರಿಯೇ ದೊಡ್ಡ ತಲೆಬಿಸಿಯಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ಮುಗಿಯೋ ಹೊತ್ತಿಗೆ ಒಂದು ಕ್ಲೈಮ್ಯಾಕ್ಸ್ ಪಿಕ್ಚರ್ ಅಂತೂ ಸಿಗಲಿದೆ.

ನೋಡಿರಿ

