ಅಕ್ರಮ ಬೆಟ್ಟಿಂಗ್ ಕೇಸ್ – ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪಗೆ ED ಸಮನ್ಸ್

ಟೀಮ್ ಇಂಡಿಯಾದ ಮಾಜಿ ಸೂಪರ್ ಸ್ಟಾರ್ ಆಟಗಾರ ಯುವರಾಜ್ ಸಿಂಗ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಯುವರಾಜ್ ಸಿಂಗ್ ಅವರಿಗೆ ವಿಚಾರಣೆಗೆ ಸೆಪ್ಟಂಬರ್ 23 ರಂದು ಹಾಜರಾಗುವಂತೆ ಇಡಿ ತಿಳಿಸಿದೆ. ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಟೀಮ್ ಇಂಡಿಯಾದ ಮಾಜಿ ಆಟಗಾರರಿಗೆ ಸಮನ್ಸ್ ಜಾರಿ ಮಾಡಿದೆ.
ಇದನ್ನೂ ಓದಿ : ಸಿಎಂ ಸಿದ್ದರಾಮಯ್ಯರನ್ನ ಭೇಟಿ ಆದ SIT ಮುಖ್ಯಸ್ಥ ಪ್ರಣವ್ ಮೊಹಾಂತಿ – ಅಂತಿಮ ಘಟ್ಟಕ್ಕೆ ಬಂತಾ ಬುರುಡೆ ಕೇಸ್?
ಇದೇ ಪ್ರಕಟಣಕ್ಕೆ ಸಂಬಂಧಿಸಿದಂತೆ ಈ ಮೊದಲು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ಹಾಗೂ ಸ್ಟಾರ್ ಮಾಜಿ ಆಲ್‌ರೌಂಡರ್ ಸುರೇಶ್ ರೈನ್ ಅವರಿಗೂ ಇಡಿ ವಿಚಾರಣೆಗೆ ಕರೆದಿತ್ತು. ಅಪ್ಲೀಕೇಷನ್ ಸಂಬಂಧಿಸಿದಂತೆ ಹಣದ ವಹಿವಾಟಿನ ಪಡೆಯಲು ಈ ಮೊದಲು ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಆಟಗಾರರ ಹೆಸರುಗಳನ್ನು ಹಾಗೂ ಫೋಟೋಳ್ನು ದರ್ಬಳಿಕೆ ಮಾಡಿಕೊಳ್ಳಲಾಗಿದೆಯಾ ಎಂಬ ಬಗ್ಗೆಯೂ ಇಡಿ ಚಿತ್ತ ನೆಟ್ಟಿದೆ.

ಸದ್ಯ ಇಡಿ ನಡೆಸುತ್ತಿರುವ ತನಿಖೆ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದೆ. ಈ ಅಪ್ಲಿಕೇಶನ್ ಮೂಲಕ ಜನ ಸಾಮಾನ್ಯರಿಗೆ ಕೋಟ್ಯಾಂತರ ರೂಪಾಯಿ ಮೋಸ ಮಾಡಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಲಾಗಿದೆ ಎಂದು ತನಿಖೆ ನಡೆಯುತ್ತಿದೆ. 1xBet ಬೆಟ್ಟಿಂಗ್ ಉದ್ಯಮದಲ್ಲಿ 18 ವರ್ಷದ ಅನುಭವ ಹೊಂದಿದೆ. ಈ ಕಂಪನಿ ಹೇಳಕೊಳ್ಳುವಂತೆ ಈ ಪ್ಲಾಟ್ ಫಾರ್ಮ್‌ನಲ್ಲಿ ಬಳಕೆದಾರರು ಸಾವಿರಾರು ಕ್ರೀಡೆಗಳ ಮೇಲೆ ಬೆಟ್ಟಿಂಗ್ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ. ಇನ್ನು ಈ ಕಂಪಿಯ ವೆಬ್‌ಸೈಟ್ ಹಾಗೂ ಅಪ್ಲಕೇಶನ್ 70 ಭಾಷೆಗಳಲ್ಲಿ ಲಭ್ಯವಿದೆ.

ನೋಡಿರಿ

