2027ರ IPLಗೆ ಮೇಜರ್ ಸರ್ಜರಿ – 2 ವಾರ ಮೊದಲೇ ಟೂರ್ನಿ ಸ್ಟಾರ್ಟ್
94 ಪಂದ್ಯ.. ಸಿಕ್ಕಿತಾ ಗ್ರೀನ್ ಸಿಗ್ನಲ್?

2026ರ ಐಪಿಎಲ್ ಮುಗ್ದು 2 ತಿಂಗಳೂ ಆಗಿಲ್ಲ. ಆಲ್ರೆಡಿ ನೆಕ್ಸ್ಟ್ ಸೀಸನ್ ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದೆ. ಜೊತೆಗೆ ಪಂದ್ಯಗಳ ಆರಂಭದಲ್ಲೂ ಮೇಜರ್ ಸರ್ಜರಿ ಮಾಡಲಾಗುತ್ತೆ. ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ನಲ್ಲಿ ಆರ್ಸಿಬಿ ಸದ್ಯ ಹಾಲಿ ಚಾಂಪಿಯನ್. ಬ್ಯಾಕ್ ಟು ಬ್ಯಾಕ್ ಟ್ರೋಫಿಗಳನ್ನ ಗೆದ್ದು ಹ್ಯಾಟ್ರಿಕ್ ಟ್ರೋಫಿ ಟಾರ್ಗೆಟ್ನಲ್ಲಿದೆ. ಮತ್ತೊಂದೆಡೆ ಕೆಲ ತಂಡಗಳು ಕ್ಯಾಪ್ಟನ್ಸ್ ಬದಲಾವಣೆ, ಆಟಗಾರರ ಟ್ರೇಡಿಂಗ್, ಬಿಡ್ಡಿಂಗ್ ಅಂತಾ ಪ್ಲ್ಯಾನ್ ಮಾಡಿಕೊಳ್ತಿದ್ದಾರೆ. ನೆಕ್ಸ್ಟ್ ಸೀಸನ್ಗೆ ಇನ್ನೂ ಲಾಂಗ್ ಗ್ಯಾಪ್ ಇದ್ದಾಗ್ಲೇ ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯೇ ಮೇಜರ್ ಅಪ್ಡೇಟ್ ನೀಡಿದ್ದಾರೆ.
ಇದನ್ನೂ ಓದಿ : 2027ರ ವಿಶ್ವಕಪ್ ರೇಸ್ ಗೆ ಕಿಶನ್ – ಸೆಂಚುರಿಯಲ್ಲೇ SLOT ಕೇಳಿದ್ರಾ?
2027ಕ್ಕೆ ಎರಡು ವಾರ ಮೊದಲೇ ಐಪಿಎಲ್ ಸ್ಟಾರ್ಟ್!
20ನೇ ಆವೃತ್ತಿಯ ಐಪಿಎಲ್ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಒಂದಷ್ಟು ವಿಚಾರಗಳನ್ನ ಶೇರ್ ಮಾಡಿದ್ದಾರೆ. ಹಾಗೇ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆ ಹೆಚ್ಚಳ ಮಾಡ್ಬೇಕಾ ಅನ್ನೋದ್ರ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದಿನ ಆವೃತ್ತಿಯ ಐಪಿಎಲ್ ಪಂದ್ಯಾವಳಿಗಳು ಮಾರ್ಚ್ 10 ರಿಂದ ಮೇ 15 ರವರೆಗೆ ನಿಗದಿಪಡಿಸುವ ಸಾಧ್ಯತೆ ಇದೆ. ಈ ಬಗ್ಗೆ ಚರ್ಚೆಯಾಗ್ತಿದೆ ಎಂದಿದ್ದಾಋಎ. ಹಾಗೇ ಪಂದ್ಯಗಳ ಸಂಖ್ಯೆಯಲ್ಲಿನ ಹೆಚ್ಚಳದ ಬಗ್ಗೆಯೂ ಮಾತನಾಡಿದ್ದಾರೆ. ಆದ್ರೆ ಪಂದ್ಯಗಳನ್ನ ಹೆಚ್ಚಿಸೋ ಇಂಟ್ರೆಸ್ಟ್ ಇಲ್ಲ ಅಂತಾ PTI ಸುದ್ಧಿ ಸಂಸ್ಥೆಯೊಂದಿಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಕೆಲವೆಡೆ ಮಳೆ.. ಅಧಿಕ ಬಿಸಿಲಿನಿಂದ ಬೇಗನೇ ಟೂರ್ನಿ ಆರಂಭ!
ಅಷ್ಟಕ್ಕೂ ಪ್ರತೀ ವರ್ಷ ಮಾರ್ಚ್ ಎಂಡಲ್ಲಿ ಟೂರ್ನಿ ಸ್ಟಾರ್ಟ್ ಆಗ್ತಿತ್ತು. ಆದ್ರೆ ಮುಂದಿನ ವರ್ಷ ಬೇಗನೇ ಟೂರ್ನಿ ಆರಂಭ ಮಾಡೋಕೆ ಕಾರಣವೂ ಇದೆ. 2026ರ ಐಪಿಎಲ್ ಸೀಸನ್ ಮಾರ್ಚ್ 28 ರಂದು ಪ್ರಾರಂಭವಾಗಿ ಮೇ 31 ರಂದು ಮುಕ್ತಾಯಗೊಂಡಿತು. ಮೇ 15ರ ನಂತರ ಪಂದ್ಯಾವಳಿಯು ತನ್ನ ನಿರ್ಣಾಯಕ ಘಟ್ಟವನ್ನ ತಲುಪಿತ್ತು. ಪ್ಲೇಆಫ್ಸ್ ಟಿಕೆಟ್ಸ್, ಪಾಯಿಂಟ್ಸ್ ಟೇಬಲ್, ನೆಟ್ ರನ್ ರೇಟ್ ಹೀಗೆ ಫೈನಲ್ ಸ್ಟೇಜ್ನಲ್ಲಿತ್ತು. ಈ ಟೈಮಲ್ಲಿ ಸಾಕಷ್ಟು ಸ್ಥಳಗಳಲ್ಲಿ ಹವಾಮಾನ ವೈಪರಿತ್ಯದಿಂದ ಸ್ವಲ್ಪ ಸಮಸ್ಯೆಗಳಾಗಿತ್ತು. ಕೆಲ ಪ್ರದೇಶಗಳಲ್ಲಿ ಮಳೆಯ ವಾತಾವರಣ ಇದ್ದರೆ ಮತ್ತೆ ಕೆಲವು ಪ್ರದೇಶಗಳಲ್ಲಿನ ತೀವ್ರ ಬಿಸಿಲಿತ್ತು. ಬಿಸಿಲ ಬೇಗೆ ಆಟಗಾರರ ಜೊತೆ ಫ್ಯಾನ್ಸ್ಗೂ ಕಿರಿಕಿರಿ ಮಾಡಿತ್ತು. ಈ ಬಗ್ಗೆ ಕಂಪ್ಲೇಟ್ಸ್ ಕೂಡ ಬಂದಿದೆ. ಇದೇ ಕಾರಣ ಐಪಿಎಲ್ ಆಡಳಿತ ಮಂಡಳಿಯೊಂದಿಗೆ ಲೀಗ್ ಅನ್ನು ಸ್ವಲ್ಪ ಮುಂಚಿತವಾಗಿ ಪ್ರಾರಂಭಿಸುವ ಬಗ್ಗೆ ಬಿಸಿಸಿಐ ಚರ್ಚೆ ನಡೆಸುತ್ತಿದೆ. ಮುಂಬರುವ ಸೀಸನ್ ಮಾರ್ಚ್ 10 ರಿಂದ ಮೇ 15 ರವರೆಗೆ ಶೆಡ್ಯೂಲ್ ಮಾಡುವ ಚಾನ್ಸ್ ಇದೆ.
ಪಂದ್ಯಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ!
ಇನ್ನು ಇದೇ ವೇಳೆ ಪಂದ್ಯಗಳನ್ನ ಹೆಚ್ಚಳ ಮಾಡ್ತಾರಾ ಅನ್ನೋ ಬಗ್ಗೆಯೂ ಕ್ಲಾರಿಟಿ ಕೊಟ್ಟಿದ್ದಾರೆ. ಪಂದ್ಯಗಳಲ್ಲಿನ ಸಂಖ್ಯೆಗಳ ಹೆಚ್ಚಳ ಮಾಡಲು ಬೇರೆ ಬೇರೆ ಅಂಶಗಳನ್ನೂ ಪರಿಗಣನೆ ಮಾಡ್ಬೇಕಾಗುತ್ತೆ. ಆಟಗಾರರು ವಿವಿಧ ದೇಶಗಳಿಂದ ಐಪಿಎಲ್ ಆಡಲು ಬರ್ತಾರೆ. ಎರಡು ತಿಂಗಳಿಗೂ ಹೆಚ್ಚಿನ ಶೆಡ್ಯೂಲ್ ಮಾಡ್ಬೇಕಾಗುತ್ತೆ. ಕೆಲವರಿಗೆ ಎಂಡ್ವರೆಗೂ ಆಡೋದು ಕಷ್ಟ ಆಗುತ್ತೆ. ಇತರ ದೇಶಗಳೊಂದಿಗೆ ದ್ವಿಪಕ್ಷೀಯ ಸರಣಿಗಳೂ ಇರುತ್ತವೆ. ಹೀಗಾಗಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 94ಕ್ಕೆ ಹೆಚ್ಚಿಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ಹೇಳೋಕೆ ಆಗಲ್ಲ ಅಂದಿದ್ದಾರೆ. ಒಟ್ನಲ್ಲಿ 2027ರ ಐಪಿಎಲ್ ಇನ್ನೂ ದೂರದಲ್ಲಿದೆ. ಆದ್ರೆ ಆಲ್ರೆಡಿ ಈಗಿನಿಂದಲೇ ಪ್ರಿಪರೇಷನ್ಸ್ ಸ್ಟಾರ್ಟ್ ಆಗ್ತಿದ್ದು 20ನೇ ಆವೃತ್ತಿಯ ಕಿಕ್ ಬೇಗನೇ ಸ್ಟಾರ್ಟ್ ಆಗೋದಂತೂ ಪಕ್ಕಾ.

ನೋಡಿರಿ

