ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ! – ಮೇ. 1 ರಿಂದ ದೇವರ ದರ್ಶನದಲ್ಲಿ ಬದಲಾವಣೆ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ! – ಮೇ. 1 ರಿಂದ ದೇವರ ದರ್ಶನದಲ್ಲಿ ಬದಲಾವಣೆ!

ವಿಶ್ವಪ್ರಸಿದ್ಧ ತಿರುಪತಿ ಏಳುಕೊಂಡಲ ಶ್ರೀವಾರಿ ದೇವಸ್ಥಾನಕ್ಕೆ ಪ್ರತಿದಿನವೂ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಬೇಸಿಗೆ ರಜೆ ಕೂಡ ಆರಂಭವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿಯಿದೆ. ಮೇ 1 ರಿಂದ ದೇವರ ದರ್ಶನದಲ್ಲಿ ಬದಲಾವಣೆಯಾಗಲಿದೆ.

ಇದನ್ನೂ ಓದಿ: ಜಯಂತ್‌ಗೆ ಚಿನ್ನುಮರಿಯಿಂದ ತಿರುಗೇಟು – ಜಾನು ರಿವೇಂಜ್‌ಗೆ ಸೈಕೋ ಪತಿ ಲೆಕ್ಕ ಚುಕ್ತಾ..!

ಮಕ್ಕಳಿಗೆ ಶಾಲೆಗೆ ರಜೆ ಸಿಗುತ್ತಿದ್ದಂತೆ ತಿರುಪತಿಯಲ್ಲಿ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ,  ಟಿಟಿಡಿ ಮಹತ್ವದ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಮೇ 1 ರಿಂದ ದೇವರ ದರ್ಶನದಲ್ಲಿ ಕೊಂಚ ಬದಲಾವಣೆಯಾಗಲಿದೆ. ವಿಐಪಿ ಬ್ರೇಕ್ ದರ್ಶನವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಟಿಟಿಡಿ ಯೋಚಿಸುತ್ತಿದೆ. ವಿಐಪಿ ದರ್ಶನಕ್ಕೆ ಮೀಸಲಿಡುವ ಸಮಯವನ್ನು ಕಡಿಮೆ ಮಾಡಿ, ಆ ಸಮಯವನ್ನು ಸಾಮಾನ್ಯ ಭಕ್ತರಿಗೆ ನೀಡುವ ಯೋಜನೆ ಇದೆ. ಇದರಿಂದ ಸಾವಿರಾರು ಭಕ್ತರಿಗೆ ಹೆಚ್ಚುವರಿ ದರ್ಶನದ ಅವಕಾಶ ಸಿಗಲಿದೆ.

ಈಗ ಜಾರಿಯಲ್ಲಿರುವ ಸ್ಲಾಟೆಡ್ ಸರ್ವದರ್ಶನ (SSD) ಟೋಕನ್‌ಗಳ ವ್ಯವಸ್ಥೆಯನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸುವ ಸಾಧ್ಯತೆ ಇದೆ. ಸದ್ಯ ಈ ಟೋಕನ್‌ಗಳ ಮೂಲಕ ದರ್ಶನ ಪಡೆಯಲು ಸುಮಾರು ಒಂದು ದಿನ ಸಮಯ ಬೇಕಾಗುತ್ತಿದೆ. ಈ ವ್ಯವಸ್ಥೆ ಬದಲು, ಸರಳ ವ್ಯವಸ್ಥೆ ತಂದು ಕಾಯುವ ಸಮಯವನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.

ವಿವಿಧ ಕೆಟಗರಿಗಳಲ್ಲಿ ದರ್ಶನ ನೀಡುವುದರಿಂದ ಆಗುವ ಗೊಂದಲವನ್ನು ಕಡಿಮೆ ಮಾಡಲು, ಒಂದೇ ರೀತಿಯ ದರ್ಶನ ಪದ್ಧತಿಯನ್ನು ಜಾರಿಗೆ ತರಲು ಟಿಟಿಡಿ ಚಿಂತನೆ ನಡೆಸಿದೆ. ಇದರಿಂದ ಕ್ಯೂ ಲೈನ್‌ಗಳು ವೇಗವಾಗಿ ಚಲಿಸುವ ಸಾಧ್ಯತೆ ಇದೆ. ಭಕ್ತರು ಗಂಟೆಗಟ್ಟಲೆ ಕಾಯುವ ಅಗತ್ಯ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಭಾವಿಸಿದ್ದಾರೆ.

ಈ ಹೊಸ ವ್ಯವಸ್ಥೆ ಜಾರಿಗೆ ಬಂದರೆ, ದಿನಕ್ಕೆ ಸುಮಾರು 70–80 ಸಾವಿರ ಜನರಿಗೆ ದರ್ಶನ ಕಲ್ಪಿಸಬಹುದು ಎಂದು ಅಂದಾಜಿಸಲಾಗಿದೆ. ವಿಐಪಿ ದರ್ಶನ ರದ್ದತಿಯಿಂದ ಹೆಚ್ಚುವರಿಯಾಗಿ 10–15 ಸಾವಿರ ಭಕ್ತರಿಗೆ ಅವಕಾಶ ಸಿಗಲಿದೆ. ಹಿಂದಿನ ಅನುಭವಗಳ ಆಧಾರದ ಮೇಲೆ, ಬೇಸಿಗೆಯಲ್ಲಿ ಭಾರಿ ಜನದಟ್ಟಣೆ ಇರುವುದನ್ನು ಅರಿತ ಟಿಟಿಡಿ ಈ ಬದಲಾವಣೆಗಳಿಗೆ ಮುಂದಾಗಿದೆ. ಒಟ್ಟಿನಲ್ಲಿ ಈ ಬದಲಾವಣೆಗಳು ಸಂಪೂರ್ಣವಾಗಿ ಜಾರಿಗೆ ಬಂದರೆ, ತಿರುಮಲದಲ್ಲಿ ಸಾಮಾನ್ಯ ಭಕ್ತರಿಗೆ ದೊಡ್ಡ ರಿಲೀಫ್ ಸಿಗುವ ಸಾಧ್ಯತೆ ಇದೆ.

Shwetha M