ಕರ್ನಾಟಕದ ಈ ನಗರಗಳಲ್ಲಿ ಉಸಿರಾಡುವುದೇ ಕಷ್ಟ! – ದಿನೇ ದಿನೆ ಕಳಪೆಯಾಗುತ್ತಿದೆ ವಾಯುಗುಣಮಟ್ಟ!

ಕರ್ನಾಟಕದ ಈ ನಗರಗಳಲ್ಲಿ ಉಸಿರಾಡುವುದೇ ಕಷ್ಟ! – ದಿನೇ ದಿನೆ ಕಳಪೆಯಾಗುತ್ತಿದೆ ವಾಯುಗುಣಮಟ್ಟ!

ರಾಜ್ಯದಲ್ಲಿ ಒಂದ್ಕಡೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ರೆ, ಮತ್ತೊಂದ್ಕಡೆ ವಾಯುಗುಣಮಟ್ಟ ದಿನ ದಿನಕ್ಕೂ ಕಳಪೆಯಾಗುತ್ತಿದೆ. ಇದೀಗ ಕರ್ನಾಟಕದ ಪ್ರಮುಖ ನಗರಗಳಲ್ಲಿ ವಾಯು ಗುಣಮಟ್ಟದ ಮಟ್ಟದಲ್ಲಿ ವ್ಯತ್ಯಯ ಕಂಡುಬರುತ್ತಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗಾಳಿಯ ಗುಣಮಟ್ಟವು ತೃಪ್ತಿದಾಯಕ  ಮತ್ತು ಮಧ್ಯಮ ಮಟ್ಟದಲ್ಲಿದೆ. ಧೂಳು ಮತ್ತು ಹೊಗೆಯಿಂದಾಗಿ ಉಸಿರಾಟದ ತೊಂದರೆ ಎದುರಾಗುವ ಸಾಧ್ಯತೆ ಎಂದು ತಜ್ಞರು ಹೇಳಿದ್ದಾರೆ.

ಇದನ್ನೂ ಓದಿ : ಬನಶಂಕರಿ ಅಮ್ಮನವರ ಪ್ರಸಾದಕ್ಕೂ ತಟ್ಟಿದ ಯುದ್ದ ಬಿಸಿ! – ಬನಶಂಕರಿ ದೇವಾಲಯದಲ್ಲಿ ಅನ್ನ ಪ್ರಸಾದ ಬಂದ್‌!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆಯ ತಾಪಮಾನ ಏರಿಕೆಯಾಗುತ್ತಿದ್ದಂತೆ ವಾಯು ಮಾಲಿನ್ಯದ ಮಟ್ಟವೂ ಆತಂಕಕಾರಿಯಾಗಿ ಹೆಚ್ಚುತ್ತಿದೆ. ವರದಿಯ ಪ್ರಕಾರ, ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 100ರಿಂದ 170ರ ಆಸುಪಾಸಿನಲ್ಲಿದ್ದು, ಹಲವು ಪ್ರದೇಶಗಳಲ್ಲಿ ಗಾಳಿಯು ಕಳಪೆ ಮತ್ತು ಅನಾರೋಗ್ಯಕರ  ಹಂತಕ್ಕೆ ತಲುಪಿದೆ. ರಸ್ತೆ ಕಾಮಗಾರಿಗಳು ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳಿಂದ ಏಳುತ್ತಿರುವ ಧೂಳು ಗಾಳಿಯನ್ನು ಕಲುಷಿತಗೊಳಿಸುತ್ತಿದೆ. ಸೂರ್ಯನ ತೀವ್ರ ಬಿಸಿಲಿನಿಂದಾಗಿ ವಾಹನಗಳ ಹೊಗೆಯು ರಾಸಾಯನಿಕ ಕ್ರಿಯೆಗೆ ಒಳಗಾಗಿ ಓಜೋನ್ ಮಾಲಿನ್ಯವನ್ನು ಸೃಷ್ಟಿಸುತ್ತಿದೆ.

ಜಿಲ್ಲೆಯ ವಾಯುಮಾಲಿನ್ಯ ಮಟ್ಟ

           ನಗರ / ಪ್ರದೇಶ                          AQI ಸೂಚ್ಯಂಕ                 ವರ್ಗೀಕರಣ           ಮುಖ್ಯ ಮಾಲಿನ್ಯಕಾರಕ

  • ಬೆಂಗಳೂರು (ಸರಾಸರಿ)                     172                                 ಅನಾರೋಗ್ಯಕರ              PM2.5 & Ozone
  • ಮಂಗಳೂರು                                      174                                 ಅನಾರೋಗ್ಯಕರ                     PM10
  • ಮೈಸೂರು                                          164                                ಅನಾರೋಗ್ಯಕರ                    PM2.5
  • ಹುಬ್ಬಳ್ಳಿ-ಧಾರವಾಡ                         163                                 ಅನಾರೋಗ್ಯಕರ                    PM10
  • ಕಲಬುರಗಿ                                           160                                ಅನಾರೋಗ್ಯಕರ              ಧೂಳು (Dust)
  • ಉಡುಪಿ                                               162                                 ಅನಾರೋಗ್ಯಕರ                    PM2.5

ಕರಾವಳಿ ತೀರದಲ್ಲಿ ಆರ್ದ್ರತೆ ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ PM2.5 ಕಣಗಳ ಪ್ರಮಾಣ ಹೆಚ್ಚಾಗುತ್ತಿರುವುದು ಆತಂಕ ತಂದಿದೆ. ಉಡುಪಿಯಲ್ಲಿ AQI 150ರ ಗಡಿ ದಾಟಿದ್ದು, ಸೂಕ್ಷ್ಮ ಆರೋಗ್ಯವುಳ್ಳವರಿಗೆ ಕಿರಿಕಿರಿ ಉಂಟುಮಾಡಬಹುದು.ಉತ್ತರ ಕರ್ನಾಟಕದ ಈ ಭಾಗಗಳಲ್ಲಿ ಬಿಸಿ ಗಾಳಿ ಮತ್ತು ಧೂಳಿನ ಬಿರುಗಾಳಿ ಲಕ್ಷಣಗಳಿರುವುದರಿಂದ ಗಾಳಿ ಹೆಚ್ಚು ಕಲುಷಿತಗೊಂಡಿದೆ. ಕಲಬುರಗಿಯಲ್ಲಿ AQI 160 ದಾಟಿದ್ದು, ಇದು ‘ಕಳಪೆ’ ವಿಭಾಗಕ್ಕೆ ಸೇರುತ್ತದೆ.ಹುಬ್ಬಳ್ಳಿ-ಧಾರವಾಡದಲ್ಲಿ ವಾಯು ಗುಣಮಟ್ಟ ಸದ್ಯಕ್ಕೆ ನಿಯಂತ್ರಣದಲ್ಲಿದ್ದರೂ, ರಸ್ತೆ ಕಾಮಗಾರಿಗಳು ನಡೆಯುತ್ತಿರುವ ಪ್ರದೇಶಗಳಲ್ಲಿ ಮಾಲಿನ್ಯ ಅಧಿಕವಾಗಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

Shwetha M

Leave a Reply

Your email address will not be published. Required fields are marked *