ಸುಮತಲಾ ತ್ಯಾಗಕ್ಕೆ ಬಿಜೆಪಿ ಗಿಫ್ಟ್‌! – ಮೇಲ್ಮನೆ ಟಿಕೆಟ್‌ ಹಿಂದಿನ ತಂತ್ರವೇನು?
ಘಟಾನುಘಟಿಗಳನ್ನೇ ಹಿಂದಿಕ್ಕಿದ್ದು ಹೇಗೆ?

ಸುಮತಲಾ ತ್ಯಾಗಕ್ಕೆ ಬಿಜೆಪಿ ಗಿಫ್ಟ್‌! – ಮೇಲ್ಮನೆ ಟಿಕೆಟ್‌ ಹಿಂದಿನ ತಂತ್ರವೇನು?ಘಟಾನುಘಟಿಗಳನ್ನೇ ಹಿಂದಿಕ್ಕಿದ್ದು ಹೇಗೆ?

ಬಿಜೆಪಿ ಹೈಕಮಾಂಡ್ ಕೊನೆಗೂ ಕೊಟ್ಟ ಮಾತು ಉಳಿಸುಕೊಳ್ಳುವಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಬಿಜೆಪಿ ಜೆಡಿಎಸ್ ಮೈತ್ರಿಯ ಕಾರಣಕ್ಕಾಗಿ ಸಂಸದ ಸ್ಥಾನವನ್ನೇ ತ್ಯಾಗ ಮಾಡಿದ್ದ ಸುಮಲತಾ ಅಂಬರೀಶ್‌ಗೆ ಪರಿಷತ್ ಪಟ್ಟ ಕಟ್ಟಲು ಮುಂದಾಗಿದೆ.. ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಮೂರು ಸ್ಥಾನಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಈಗಾಗಲೇ ಮೂವರಿಗೆ ಟಿಕೆಟ್ ಫೈನಲ್ ಆಗಿದೆ. ಸಂಸದೆ ಸುಮಲತಾ ಅಂಬರೀಶ್, ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ. ನಾಗರಾಜು ಅವರಿಗೆ ಪರಿಷತ್ ಟಿಕೆಟ್ ಘೋಷಣೆ ಮಾಡಲಾಗಿದೆ.. ಜೂನ್ 13ರಂದು ವಿಧಾನಸಬೆಯಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದ್ದು, ಇದರಲ್ಲಿ ಸುಮಲತಾ ಅಂಬರೀಶ್ ಹೆಸರು ಪ್ರಮುಖವಾಗಿದೆ.

ಇದನ್ನೂ ಓದಿ: ನನಗೂ ಪ್ರಕರಣಕ್ಕೂ ಸಂಬಂಧವಿಲ್ಲ.. ಏನಿದ್ರೂ ಲಾಯರ್ ಬಳಿ ಮಾತನಾಡಿ! – ಎಸ್‌ಐಟಿ ಪ್ರಶ್ನೆಗಳಿಗೆ ಪ್ರಜ್ವಲ್ ಉತ್ತರ ನೀಡದೇ ಅಸಹಕಾರ

ಸುಮಲತಾ ಗೆ ಪರಿಷತ್ ಪಟ್ಟ ಫಿಕ್ಸ್

ಮಂಡ್ಯ ಸಂಸದೆಯಾಗಿರುವ ಸುಮಲತಾ ಅಂಬರೀಶ್ ಲೋಕಸಭಾ ಚುನಾವಣೆಯ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ರು. ಸುಮಕ್ಕ ಎಲೆಕ್ಷನ್ ಅಖಾಡಕ್ಕೆ ಇಳಿತಾರಾ, ಇಲ್ವಾ ಅನ್ನೋ ಕುತೂಹಲ ಕಡೇ ಗಳಿಗೆಯವರಿಗೂ ಇತ್ತು. ಕೊನೆಗೂ ಸುಮಲತಾ ಬಿಜೆಪಿ ಹೈಕಮಾಂಡ್ ಮಾತಿಗೆ ತಲೆಬಾಗಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಒಲ್ಲದ ಮನಸಿನಿಂದ ಅಸಮಾಧಾನದಿಂದಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದರು. ಈ ಮೂಲಕ ಮಂಡ್ಯದಲ್ಲಿ ಸಂಸತ್ ಸದಸ್ಯ ಸ್ಥಾನವನ್ನು ತ್ಯಾಗ ಮಾಡಿದ್ದರು. ಸುಮಕ್ಕನ ಇದೇ ತ್ಯಾಗಕ್ಕೆ ಬಿಜೆಪಿ ಹೈಕಮಾಂಡ್ ದೊಡ್ಡ ಉಡುಗೊರೆಯನ್ನೇ ನೀಡಿದೆ. ಸುಮಕ್ಕನಿಗೆ ಪರಿಷತ್ ಪಟ್ಟ ನೀಡಲು ಮುಂದಾಗಿದೆ.

ಈ ಸಲ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ, ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿತ್ತು. ಮಂಡ್ಯವನ್ನು ಎಚ್.ಡಿ ಕುಮಾರಸ್ವಾಮಿ ತಮ್ಮ ಅದೃಷ್ಟ ಪರೀಕ್ಷೆಗೆ ಆಯ್ದುಕೊಂಡಿದ್ದರು. ಇದರಿಂದ ಸುಮಲತಾ ಅಸಮಾಧಾನಕ್ಕೆ ಒಳಗಾಗಿದ್ದರು. ಈ ಬಗ್ಗೆ ಅಮಿತ್ ಶಾ ಜೊತೆಗೂ ಮಾತನಾಡಿದ್ದರು. ಮುಂದೆ ಸೂಕ್ತ ಸ್ಥಾನಮಾನವನ್ನು ನೀಡುವುದಾಗಿ ಅಮಿತ್ ಶಾ, ಸುಮಲತಾ ಅವರಿಗೆ ಭರವಸೆ ನೀಡಿದ್ದರು. ಹೀಗಾಗಿ ಮಂಡ್ಯ ಸಂಸದೆ ನಂತರದ ದಿನಗಳಲ್ಲಿ ಸೈಲೆಂಟ್ ಆಗಿದ್ದರು. ಇನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಹಾಗೂ ದಕ್ಷಿಣ ಕನ್ನಡದ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್, ಬೆಂಗಳೂರು ಉತ್ತರ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೂ ಟಿಕೆಟ್ ಕೈತಪ್ಪಿತ್ತು. ಇವರಿಗೂ ವಿಧಾನ ಪರಿಷತ್ ಟಿಕೆಟ್ ದೊರೆಯಬಹುದು ಎನ್ನಲಾಗಿತ್ತು. ಆದರೆ ಹೈಕಮಾಂಡ್ ಇವರನ್ನು ಪರಿಗಣಿಸಿಲ್ಲ.

Shwetha M