ಹಾರಾಟ ನಡೆಸುವಾಗಲೇ ವಾಯುಪಡೆಯ ಯುದ್ಧವಿಮಾನಗಳು ಡಿಕ್ಕಿ – ಪೈಲಟ್​ಗಳು ಬಚಾವಾಗಿದ್ದೇ ರೋಚಕ!

ಹಾರಾಟ ನಡೆಸುವಾಗಲೇ ವಾಯುಪಡೆಯ ಯುದ್ಧವಿಮಾನಗಳು ಡಿಕ್ಕಿ – ಪೈಲಟ್​ಗಳು ಬಚಾವಾಗಿದ್ದೇ ರೋಚಕ!

ಭಾರತೀಯ ವಾಯುಪಡೆಯ ಯುದ್ಧವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ವಿಮಾನಗಳು ಪತನವಾಗಿದ್ದು ಅದೃಷ್ಟವಶಾತ್ ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೇನೆಯ ವಾಯು ವಿಮಾನಗಳಾದ ಸುಖೋಯ್-30 (Sukhoi-30) ಮತ್ತು ಮಿರಾಜ್ 2000 (Mirage 2000) ಮಧ್ಯೆ ಡಿಕ್ಕಿ ಸಂಭವಿಸಿದೆ. ಮಧ್ಯಪ್ರದೇಶದ ಮೊರೆನಾ ಬಳಿ ವಿಮಾನಗಳು ಪತನಗೊಂಡಿವೆ.

ಇದನ್ನೂ ಓದಿ : ಆ್ಯಂಬುಲೆನ್ಸ್ ಗಳಿಗೆ “108” ಸಮಸ್ಯೆ – ಸೇವೆ ಸ್ಥಗಿತ ಮಾಡುತ್ತಾ ಆರೋಗ್ಯ ಇಲಾಖೆ?

ಮಧ್ಯಪ್ರದೇಶ ಮತ್ತು ರಾಜಸ್ಥಾನ ಗಡಿಯ ಮೊರೆನಾ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ. ತಾಲೀಮು ನಡೆಸುವ ವೇಳೆ ಘಟನೆ ಸಂಭವಿಸಿರೋದಾಗಿ ಮೊರೆನಾ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ವಿಮಾನ ಹಾರಾಟ ಆರಂಭಿಸಿದ 10 ನಿಮಿಷಗಳಲ್ಲಿ ಡಿಕ್ಕಿ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೂವರು ಪೈಲಟ್​ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೊರೆನಾ ಜಿಲ್ಲಾಧಿಕಾರಿ ಅಂಕಿತ್ ಆಸ್ಥಾನ ಹೇಳಿದರು.

ಶನಿವಾರ ಮುಂಜಾನೆ 5.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಗ್ವಾಲಿಯರ್ ವಾಯುನೆಲೆಯಲ್ಲಿ ನಡೆಯುತ್ತಿರುವ ತರಬೇತಿ ಅಂಗವಾಗಿ ಎರಡೂ ವಿಮಾನಗಳು ಹೊರಟಿದ್ದವು. ವಿಮಾನಗಳ ಡಿಕ್ಕಿ ವೇಳೆ ಸುಖೋಯ್-30 ವಿಮಾನದಲ್ಲಿ ಇಬ್ಬರು ಪೈಲಟ್​ಗಳು ಹಾಗೂ ಮಿರಾಜ್ 2000 ವಿಮಾನದಲ್ಲಿ ಓರ್ವ ಪೈಲಟ್ ಇದ್ರು. ಪ್ರಾಥಮಿಕ ವರದಿಯ ಪ್ರಕಾರ ಪೈಲಟ್​ಗಳು ಎಜೆಕ್ಟ್ ಸಹಾಯದಿಂದ ಪಾರಾಗಿದ್ದಾರೆ. ಬಳಿಕ ರಕ್ಷಣಾ ಪಡೆಯ ಅಧಿಕಾರಿಗಳಿ ಪೈಲಟ್​ಗಳನ್ನ ರಕ್ಷಣೆ ಮಾಡಿದ್ದಾರೆ. ಪೈಲಟ್​ಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

suddiyaana