ಬೇಬಿ ನಾನು ಮತ್ತೆ ಮತ್ತೆ ನಿನ್ನ ನೆನಪುಗಳಲ್ಲಿ ಸಿಲುಕಿದ್ದೇನೆ – ಬಾಲಿವುಡ್ ನಟಿಗೆ ಸುಕೇಶ್ ಚಂದ್ರಶೇಖರ್ ಲವ್ ಲೆಟರ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಆರೋಪದಲ್ಲಿ
ಸುಕೇಶ್ ಚಂದ್ರಶೇಖರ್ ಜೈಲಿನಲ್ಲಿದ್ದಾನೆ. ಆದರೆ, ಜೈಲಿನಲ್ಲಿದ್ದರೂ ಸದಾ ಪ್ರೇಯಸಿಯದ್ದೇ ಧ್ಯಾನ. ಏನಾದರೊಂದು ನೆಪ ಮಾಡಿ ಪ್ರೇಯಸಿಗೆ ಪತ್ರ ಬರೆಯುತ್ತಲೇ ಇರುತ್ತಾನೆ. ಈ ಬಾರಿಯಂತೂ ಲವ್ ಲೆಟರ್ ಬರೆಯಲು ಯಾರಿಗಾದರೂ ಕಲಿಯಬೇಕು ಅನಿಸಿದರೆ ಇವನ ಲೆಟರ್ ನಿಜಕ್ಕೂ ಸ್ಪೂರ್ತಿಯಾದರೂ ತಪ್ಪಿಲ್ಲ. ಹಾಗೆ ಬರೆದಿದ್ದಾನೆ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್.
ಇದನ್ನೂ ಓದಿ: 73 ವರ್ಷದಲ್ಲೂ ಸೂಪರ್‌ಸ್ಟಾರ್ ರಜನಿಕಾಂತ್ ಸಖತ್ ಸ್ಟಂಟ್ – ‘ವೆಟ್ಟೈಯನ್’ ಸಿನಿಮಾದಲ್ಲಿ ಸಾಹಸ ದೃಶ್ಯ ಕಂಡು ಅಭಿಮಾನಿಗಳು ಪುಳಕ
ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನಿಂದಲೇ ಪ್ರೇಯಸಿ, ಬಾಲಿವುಡ್ ನಟಿ ಜಾಕ್ವೇಲಿನ್ ಫರ್ನಾಂಡಿಸ್‌ಗೆ ಮತ್ತೆ ಪತ್ರ ಬರೆದಿದ್ದಾನೆ. ಜೈಲಿನಲ್ಲಿ ಇರುವ ನೋವಿಗಿಂತ ಆತನಿಗೆ ಪ್ರೇಯಸಿಯನ್ನು ಬಿಟ್ಟಿರುವ ನೋವು ಜಾಸ್ತಿ ಕಾಡುತ್ತಿದೆ. ಹೀಗಾಗಿ ಮತ್ತೊಮ್ಮೆ ಸುಕೇಶ್ ಚಂದ್ರಶೇಖರ್, ಲವರ್ ಜಾಕ್ವೆಲಿನ್ ಗೆ ಲವ್ ಲೆಟರ್ ಬರೆದಿದ್ದಾನೆ. ಈತ ನಟಿ ಜಾಕ್ವೆಲಿನ್ ಜೊತೆ ರಿಲೇಶನ್ ಶಿಪ್‌ನಲ್ಲಿ ಇದ್ದನು.
ಕ್ರಿಸ್ಮಸ್ ಸಂದರ್ಭದಲ್ಲಿ ನಟಿಗೆ ಪ್ರೀತಿಯ ಕರೆಯೋಲೆ ಕಳುಹಿಸಿದ್ದಾನೆ. ಇದರಲ್ಲಿ ಅವರು ‘ಲವ್’, ‘ಬೇಬಿ’ ಎಂದೆಲ್ಲ ಬರೆದುಕೊಂಡಿದ್ದಾರೆ. ಸದ್ಯ ಈ ಲೆಟರ್ ವೈರಲ್ ಆಗುತ್ತಿದೆ. ‘ಬೇಬಿ ನನಗೆ ನಿನ್ನ ಬಗ್ಗೆ ಖುಷಿ ಇದೆ. ನೀನು ಚಿತ್ರರಂಗಕ್ಕೆ ನೀಡಿದ ಕೊಡುಗೆ ಆಧರಿಸಿ DIAFA ಅವಾರ್ಡ್ ನೀಡಲಾಗಿದೆ. ಇದಕ್ಕೆ ನಿನಗೆ ಅಭಿನಂದನೆ. ನನಗೆ ಎಷ್ಟು ಖುಷಿ ಆಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ನೀನು ನಿಜವಾಗಲೂ ಗ್ರೇಟ್ ಪರ್ಫಾರ್ಮರ್. ನೀನು ಬಿಳಿ ಗೌನ್ನಲ್ಲಿ ಅದ್ಭುತವಾಗಿ ಕಾಣಿಸುತ್ತೀಯ’ ಎಂದು ಸುಕೇಶ್ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ‘ರೆಡ್ ಅರೇಬಿಕ್ ಡ್ರೆಸ್ ಹಾಗೂ ಪಿಂಕ್ ಬಣ್ಣದ ಸೀರೆಯಲ್ಲಿ ನೀನು ಸಖತ್ ಆಗಿ ಕಾಣಿಸುತ್ತೀಯ. ನೀನು ನನ್ನ ಹಾರ್ಟ್ ಕದ್ದಿದ್ದೀಯಾ. ಬೇಬಿ ನಾನು ಮತ್ತೆ ಮತ್ತೆ ನಿನ್ನ ನೆನಪುಗಳಲ್ಲಿ ಸಿಲುಕಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾನೆಈ ಜಗತ್ತಿನಲ್ಲಿರುವ ಏಕೈಕ ಜೀವಂತ ಏಂಜಲ್ ನೀನು. ಸೋ ಬ್ಯೂಟಿಫುಲ್ ಸೋ ಸ್ಟನ್ನಿಂಗ್. ಜಸ್ಟ್ ಲುಕಿಂಗ್ ಲೈಕ್ ಎ ವಾವ್’ ಎಂದು ಆತ ಬರೆದಿದ್ದಾನೆ