ಸಕ್ಕರೆ ಪ್ರಿಯರಿಗೆ ಸಿಹಿ ಸುದ್ದಿ – ಸತತ ನಾಲ್ಕನೇ ದಿನವೂ ಇಳಿದ ಸಕ್ಕರೆ ಬೆಲೆ

ಸಕ್ಕರೆ ಪ್ರಿಯರಿಗೆ ಸಿಹಿ ಸುದ್ದಿ – ಸತತ ನಾಲ್ಕನೇ ದಿನವೂ ಇಳಿದ ಸಕ್ಕರೆ ಬೆಲೆ

ಸಕ್ಕರೆ ಬೆಲೆ ಕೇಳಿ ಶಾಕ್ ಆಗಿದ್ದ ಗ್ರಾಹಕರಿಗೆ ಈಗ ರಿಲೀಫ್ ಸಿಕ್ಕಿದೆ. ಸತತ ನಾಲ್ಕು ದಿನಗಳಿಂದ ಇಳಿಕೆಯಾಗುತ್ತಿದ್ದ ಸಕ್ಕರೆ ಬೆಲೆ ಇವತ್ತು ಮತ್ತಷ್ಟು ಇಳಿಕೆ ಕಂಡಿದೆ.

ಇದನ್ನೂ ಓದಿ:ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಇನ್ಮುಂದೆ ಓಲಾ, ಉಬರ್‌ಗಳಲ್ಲೂ BMTC ಟಿಕೆಟ್ ಬುಕಿಂಗ್ ಹಾಗೂ ಲೈವ್ ಟ್ರ್ಯಾಕಿಂಗ್ ಲಭ್ಯ!

ದೇಶಾದ್ಯಂತ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಮತ್ತೆ ಇಳಿಕೆ ಕಂಡಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾಹಿತಿಯ ಪ್ರಕಾರ ಸಕ್ಕರೆಯ ಸರಾಸರಿ ಚಿಲ್ಲರೆ ಬೆಲೆ ಸೋಮವಾರ ಪ್ರತಿ ಕಿಲೋಗ್ರಾಂಗೆ 59.57 ರೂಪಾಯಿಗಳಷ್ಟಿತ್ತು. ಹಿಂದಿನ ದಿನ ಇದು 58.99 ರೂಪಾಯಿಗಳಷ್ಟಿತ್ತು. ಶುಕ್ರವಾರದಿಂದ ಸಕ್ಕರೆ ಬೆಲೆಗಳು ಪ್ರತಿ ಕಿಲೋಗ್ರಾಂಗೆ 60 ರೂಪಾಯಿಗಿಂತ ಕಡಿಮೆಯಾಗಿ ಕಳೆದ ಮೂರು ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇದೀಗ ಕನಿಷ್ಠ 40 ರೂಪಾಯಿಗೆ ಇಳಿಕೆಯಾಗಿದೆ.

ಸೋಮವಾರ ಗರಿಷ್ಠ ಚಿಲ್ಲರೆ ಬೆಲೆ ಕೆಜಿಗೆ 85 ರೂಪಾಯಿಗಳಷ್ಟಿತ್ತು. ಕನಿಷ್ಠ ಬೆಲೆ ಕೆಜಿಗೆ 40 ರೂಪಾಯಿಗಳಷ್ಟಿತ್ತು. ದಕ್ಷಿಣ ರಾಜ್ಯಗಳಲ್ಲಿ ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಚಿಲ್ಲರೆ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಸ್ವಲ್ಪ ಕುಸಿತ ದಾಖಲಾಗಿದೆ. ಆಂಧ್ರಪ್ರದೇಶದಲ್ಲಿ ಸರಾಸರಿ ಚಿಲ್ಲರೆ ಬೆಲೆ ಸೋಮವಾರ ಕೆಜಿಗೆ 55.56 ರೂಪಾಯಿಗೆ ಏರಿತು. ಆಗಸ್ಟ್ 21ರಂದು ಇದು ಕೆಜಿಗೆ 49.58 ರೂಪಾಯಿಗಳಷ್ಟಿತ್ತು. ಕೇರಳದಲ್ಲಿ ಅದೇ ಅವಧಿಯಲ್ಲಿ 56.75 ರೂಪಾಯಿಯಿಂದ 57.8 ರೂಪಾಯಿಗೆ ಏರಿತು.

ಸಕ್ಕರೆಯ ದಾಸ್ತಾನಿನ ಕೊರತೆ, ಕಬ್ಬಿನ ಇಳುವರಿ ಕಡಿಮೆ ಬಂದಿರುವುದು ಹಾಗೂ ಬರಗಾಲದ ಪರಿಸ್ಥಿತಿಯಿಂದಾಗಿ ಸಕ್ಕರೆ ಬೆಲೆ ಅಗಾಧ ಪ್ರಮಾಣದಲ್ಲಿ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ಕಳೆದ 15 ದಿನಗಳ ಹಿಂದೆ 40 ರಿಂದ 50 ರೂಪಾಯಿ ಆಸು – ಪಾಸು ಇದ್ದ ಸಕ್ಕರೆ ದರ ಈಗ ದಿಢೀರನೆ 65 – 75 ರೂಪಾಯಿಗೆ ಏರಿಕೆಯಾಗಿತ್ತು. ಇದೀಗ ಮತ್ತೆ ಸಕ್ಕರೆ ದರದಲ್ಲಿ ಇಳಿಕೆ ಕಂಡಿದ್ದು ಗ್ರಾಹಕರು ರಿಲೀಫ್ ಆಗಿದ್ದಾರೆ.

Sulekha

Leave a Reply

Your email address will not be published. Required fields are marked *