ಜೀವವನ್ನೇ ತೆಗೆದ ಸೊಳ್ಳೆ ಬತ್ತಿ – ವಿಷಕಾರಿ ಹೊಗೆಯಿಂದ ಒಂದೇ ಕುಟುಂಬದ 6 ಮಂದಿ ಸಾವು

ಜೀವವನ್ನೇ ತೆಗೆದ ಸೊಳ್ಳೆ ಬತ್ತಿ – ವಿಷಕಾರಿ ಹೊಗೆಯಿಂದ ಒಂದೇ ಕುಟುಂಬದ 6 ಮಂದಿ ಸಾವು

ನವದೆಹಲಿ: ಬೇಸಿಗೆ ಬಿಸಿಲಿನ ತಾಪದ ಜೊತೆಗೆ ಈಗ ಮುಂಗಾರು ಪೂರ್ವ ಮಳೆಯ ಅಬ್ಬರವೂ ಶುರುವಾಗಿದೆ. ಇದರಿಂದಾಗಿ ಸೊಳ್ಳೆ ಕಾಟ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಹೀಗಾಗಿ ಅನೇಕರು ಸೊಳ್ಳೆ ಕಾಟದಿಂದ ಬಚಾವ್ ಆಗಲು ಮಾರುಕಟ್ಟೆಯಲ್ಲಿ ಸಿಗೋ ಸೊಳ್ಳೆ ಬತ್ತಿಯನ್ನು ತಂದು ಹಚ್ಚುತ್ತಾರೆ. ಇದೀಗ ರಾತ್ರಿ ವೇಳೆ ಸೊಳ್ಳೆ ಬತ್ತಿ ಹಚ್ಚಿ ಮಲಗುವವರು ಕೊಂಚ ಯೋಚಿಸಬೇಕಾಗಿದೆ. ಸೊಳ್ಳೆ ಬತ್ತಿಯಿಂದ ನಿಮ್ಮ ಜೀವಕ್ಕೆ ಆಪತ್ತು ಎದುರಾಗೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ದೇವಸ್ಥಾನದ ಮೆಟ್ಟಿಲುಬಾವಿ ಕುಸಿತ  – ಸಾವಿನ ಸಂಖ್ಯೆ 35 ಕ್ಕೆ ಏರಿಕೆ

ದೆಹಲಿಯ ಶಾಸ್ತ್ರೀ ಪಾರ್ಕ್ ಪ್ರದೇಶದಲ್ಲಿ ಸೊಳ್ಳೆ ಕಾಯಿಲ್ ನ ಹೊಗೆಯಿಂದ  ಉಸಿರುಗಟ್ಟಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಪ್ರಾಥಮಿಕ ತನಿಖೆಯಲ್ಲಿ ರಾತ್ರಿ ವೇಳೆ ಸೊಳ್ಳೆ ಕಾಯಿಲ್ ಹಚ್ಚಿಟ್ಟಿದ್ದು ಅದರ ಬೂದಿ ಕೋಣೆಯಲ್ಲಿ ಪತ್ತೆಯಾಗಿದೆ. ಸೊಳ್ಳೆ ಕಾಯಿಲ್ ನ ವಿಷಕಾರಿ ಹೊಗೆಯಿಂದ ಇವರೆಲ್ಲಾ ಪ್ರಜ್ಞಾಹೀನರಾಗಿದ್ದು, ನಂತರ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಅಂತಾ ಪೊಲೀಸರು ತಿಳಿಸಿದ್ದಾರೆ.

ಅವಘಡ ಸಂಭವಿಸುವ ವೇಳೆ ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದರು. ನಾಲ್ವರು ಪುರುಷರು, ಮಹಿಳೆ ಹಾಗೂ ಮಗು ಸೇರಿ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. 15 ವರ್ಷದ ಬಾಲಕಿ ಹಾಗೂ 45 ವರ್ಷದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

suddiyaana