H3N2 ವೈರಸ್​ ಗೆ ಮಕ್ಕಳು, ವೃದ್ಧರು, ಗರ್ಭಿಣಿಯರೇ ಟಾರ್ಗೆಟ್ – ಸಚಿವ ಸುಧಾಕರ್ ಕೊಟ್ಟ ಸಲಹೆಗಳೇನು..?

H3N2 ವೈರಸ್​ ಗೆ ಮಕ್ಕಳು, ವೃದ್ಧರು, ಗರ್ಭಿಣಿಯರೇ ಟಾರ್ಗೆಟ್ – ಸಚಿವ ಸುಧಾಕರ್ ಕೊಟ್ಟ ಸಲಹೆಗಳೇನು..?

ಕೊರೊನಾದಿಂದ ಕಂಗೆಟ್ಟಿದ್ದ ಜನ ಈಗಷ್ಟೇ ನಿಟ್ಟುಸಿರು ಬಿಡುತ್ತಾ ತಮ್ಮ ಬದುಕು ಕಟ್ಟಿಕೊಳ್ತಿದ್ದಾರೆ. ಇನ್ನೇನು ಹೆಮ್ಮಾರಿ ತೊಲಗಿತೆಂದು ನೆಮ್ಮದಿ ಪಡುವ ಮುನ್ನವೇ ಮತ್ತೊಂದು ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದೆ. ಹೀಗಾಗಿ ರಾಜ್ಯ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಇವತ್ತು ಸುದ್ದಿಗೋಷ್ಠಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದಲ್ಲಿ 26 ಜನರಲ್ಲಿ ಹೆಚ್​3ಎನ್2 ಸೋಂಕು ಪತ್ತೆಯಾಗಿದೆ. ಈ ಸೋಂಕಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಅಪಾಯವಿದೆ ಹಾಗೂ 60 ವರ್ಷ ಮೆಲ್ಪಟ್ಟವರಿಗೆ ಬಹುಬೇಗ ಈ ವೈರಸ್ ಹರಡುತ್ತೆ.  ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂದು ಸುಧಾಕರ್ ತಿಳಿಸಿದ್ದಾರೆ.

ಇದನ್ನೂ ಓದಿ :ಕೊರೊನಾ ಹೋಯ್ತು.. ಮತ್ತೊಂದು ಮಹಾಮಾರಿ ಬಂತಾ? 

H​3N2 ವೈರಸ್ ಆತಂಕ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಸೋಂಕು ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಯ್ತು. ಸಭೆ ಬಳಿಕ ಮಾತನಾಡಿದ ಸುಧಾಕರ್, ‘ರಾಜ್ಯದಲ್ಲಿ ಒಟ್ಟು 60 ಅಡೆನಾಯ್ಡ್ ವೈರಸ್ ಪತ್ತೆಯಾಗಿದೆ. ಕಳೆದ 6 ತಿಂಗಳಿನಿಂದ ಆರೋಗ್ಯ ಸಿಬ್ಬಂದಿ ಮಾಸ್ಕ್ ಧರಿಸುತ್ತಿಲ್ಲ. ಇವತ್ತಿನಿಂದಲೇ ರಾಜ್ಯದ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್ ಹಾಕಿಕೊಳ್ಳಬೇಕು. ಬೆಂಗಳೂರಿನಲ್ಲಿ ಹೆಚ್​3ಎನ್2 ಎರಡು ​ಪ್ರಕರಣಗಳು ಪತ್ತೆಯಾಗಿವೆ. ಜನವರಿಯಿಂದ ಮಾರ್ಚ್​ವರೆಗೆ 20 H1N1 ಪ್ರಕರಣಗಳು ಪತ್ತೆಯಾಗಿವೆ. ಅಡಿನಾಯ್ಡ್ ವೈರಸ್ ಹೆಚ್ಚುತ್ತಿದ್ದು, ಜನ ಭಯಪಡಬೇಕಾದ ಅವಶ್ಯಕತೆ ಇಲ್ಲ. ಎಲ್ಲಾ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಜ್ಯದಲ್ಲಿ ಔಷಧಿಯ ಕೊರತೆ ಇಲ್ಲ. ಆದ್ರೆ ಬೇಸಿಗೆಯಲ್ಲಿ ತಾಪಮಾನ ಹೆಚ್ಚಿರೋದ್ರಿಂದ  ಮುನ್ನೆಚ್ಚರಿಕೆ ವಹಿಸಬೇಕು’ ಎಂದು ತಿಳಿಸಿದ್ದಾರೆ.

ಬೇಸಿಗೆ ಹಿನ್ನೆಲೆ ಬಿಸಿಗಾಳಿ ಇರೋದ್ರಿಂದ ಅನಗತ್ಯವಾಗಿ ಓಡಾಡುವುದನ್ನ ಜನ ನಿಲ್ಲಿಸಬೇಕು. ಇಲ್ಲದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದರು. ಹೆಚ್​3ಎನ್2 ಕೂಡಾ ಕೊವಿಡ್ ಟೆಸ್ಟ್ ರೀತಿಯಲ್ಲಿಯೇ ಮಾಡಲಾಗುವುದು. ಸ್ವ್ಯಾಬ್​ ಟೆಸ್ಟ್ ಮೂಲಕ ಹೆಚ್​3ಎನ್2 ವೈರಸ್ ಪತ್ತೆ ಹಚ್ಚಬಹುದು. ಹೆಚ್3ಎನ್2 ಸೋಂಕು ಪತ್ತೆಯಾದರೂ ಗುಣಮುಖರಾಗಬಹುದು ಎಂದು ತಿಳಿಸಿದರು. ಹಾಗೇ ಮಕ್ಕಳು, ವೃದ್ಧರು ಹಾಗೂ ಗರ್ಭಿಣಿಯರು ಈ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ.

suddiyaana