ದಾಂಪತ್ಯಕ್ಕೆ 45 ವರ್ಷ – ತಮ್ಮದೇ ಆಭರಣಗಳಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ಮಾಡಿಸಿಕೊಟ್ಟ ಸುಧಾಮೂರ್ತಿ ದಂಪತಿ

ದಾಂಪತ್ಯಕ್ಕೆ 45 ವರ್ಷ – ತಮ್ಮದೇ ಆಭರಣಗಳಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ಮಾಡಿಸಿಕೊಟ್ಟ ಸುಧಾಮೂರ್ತಿ ದಂಪತಿ

ಸರಳ ಜೀವನ, ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಬರುತ್ತಿರುವ ಇನ್ಫೋಸಿಸ್ ಸಂಸ್ಥೆ ಸಾವಿರಾರು ಜನರಿಗೆ ಬದುಕು ನೀಡಿದೆ. ಹಲವು ಸಾಮಾಜಿಕ ಕಾರ್ಯಗಳನ್ನ ಮಾಡುತ್ತಾ ಇತರರಿಗೆ ಮಾದರಿ ಕೂಡ ಆಗಿದ್ದಾರೆ. ಇದೀಗ ಇನ್ಫೋಸಿಸ್ ಸಂಸ್ಥೆ ಮುಖ್ಯಸ್ಥರಾದ ನಾರಾಯಣಮೂರ್ತಿ (Narayanamurthy) ಹಾಗೂ ಸುಧಾಮೂರ್ತಿ (Sudhamurthy) ದಂಪತಿ ತಿರುಪತಿಗಿರಿವಾಸನಾದ ಶಂಖಚಕ್ರಧಾರಿ ತಿಮ್ಮಪ್ಪನಿಗೆ (Tirupati) ಬಂಗಾರದ ಶಂಖವನ್ನು ಕಾಣಿಕೆ ನೀಡಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ : 100 ವರ್ಷಗಳ ನಂತರ ಈ ನದಿಯಲ್ಲಿ ಈಜಲು ಸಿಕ್ಕಿತು ಅನುಮತಿ – ಸೀನ್ ನದಿಯಲ್ಲಿ ಇನ್ನು ಸ್ವಿಮ್ಮಿಂಗ್ ಮಜಾ..!

ಇನ್ಫೋಸಿಸ್ ಫೌಂಡೇಶನ್ ಮೂಲಕ ಸುಧಾಮೂರ್ತಿ ಅವರು ಸಾಕಷ್ಟು ಸಾಮಾಜಿಕ ಹಾಗೂ ಧಾರ್ಮಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊದಲಿನಿಂದಲೂ ಸರಳ ಜೀವನ ನಡೆಸುತ್ತಾ ಅನೇಕರಿಗೆ ಮಾದರಿಯಾಗಿದ್ದಾರೆ. ಅವರ ದಾಂಪತ್ಯ ಜೀವನಕ್ಕೆ ಈಗ ನಲವತ್ತೈದು ವರ್ಷ. ಈ 45 ವರ್ಷಗಳಲ್ಲಿ ತಮ್ಮ ಬಳಿಯಿದ್ದ ಕೆಲವೇ ಕೆಲವು ಆಭರಣಗಳಿಂದ ಈ ಬಂಗಾರದ ಶಂಖವನ್ನು ಮಾಡಿಸಿ ತಿಮ್ಮಪ್ಪನಿಗೆ ನೀಡಿದ್ದಾರೆ.

ಸಾವಿರಾರು ಕೋಟಿಗಳ ಒಡೆಯರಾದರೂ ಸುಧಾಮೂರ್ತಿ ದಂಪತಿ ಇಂದಿಗೂ ಕೂಡ ತಮ್ಮ ಸರಳ ಜೀವನ ಶೈಲಿಯಿಂದಲೇ ಎಲ್ಲರ ಗಮನ ಸೆಳೆದಿದ್ದಾರೆ. ಎಂತಹ ಸಭೆ, ಸಮಾರಂಭಗಳಿಗೂ ಸರಳ ವಸ್ತ್ರಗಳಲ್ಲೇ ಕಾಣಿಸಿಕೊಳ್ಳುವ ಸುಧಾಮೂರ್ತಿ ನೇರನಡೆನುಡಿಗಳಿಂದ ಎಲ್ಲರಿಗೂ ಇಷ್ಟ ಆಗುತ್ತಾರೆ. ಇದೀಗ ತಮ್ಮ 45 ವರ್ಷಗಳ ದಾಂಪತ್ಯವನ್ನ ಮತ್ತಷ್ಟು ವಿಶೇಷವಾಗಿಸಿಕೊಳ್ಳಲು ತಮ್ಮದೇ ಆಭರಣಗಳಿಂದ ತಿರುಪತಿ ತಿಮ್ಮಪ್ಪನಿಗೆ ಬಂಗಾರದ ಶಂಖ ಮಾಡಿಸಿಕೊಡುವ ಮೂಲಕ ದೇವರ ದರ್ಶನ ಪಡೆದಿದ್ದಾರೆ.

suddiyaana