ಬಿಲ್ಲ ರಂಗ ಭಾಷಾ ಬಗ್ಗೆ ಕಿಚ್ಚನಿಂದ ಗುಡ್ ನ್ಯೂಸ್ – ಶೂಟಿಂಗ್‌ಗೆ ಡೇಟ್ ಫಿಕ್ಸ್!

ಬಾದ್ ಷಾ ನಟ ಕಿಚ್ಚ ಸುದೀಪ್ ಮ್ಯಾಕ್ಸ್ ಸಿನಿಮಾದ ಮೂಲಕ ತೆರೆ ಮೇಲೆ ಅಬ್ಬರಿಸಿದ್ರು.. ಗಲ್ಲಾಪೆಟ್ಟಿಗೆಯಲ್ಲೂ ಸಿನಿಮಾ ಕಮಾಲ್ ಮಾಡಿತ್ತು. ಇದೀಗ ಕಿಚ್ಚ ಸುದೀಪ್ ಮತ್ತೊಂದು ಸಿನಿಮಾ ಮೂಲಕ ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಬಿಲ್ಲ ರಂಗ ಭಾಷಾ ಶೂಟಿಂಗ್ ಬಗ್ಗೆ ಸುದೀಪ್ ಅಪ್‌ಡೇಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: RRಗೆ ಕನ್ನಡಿಗನ ಮಾಸ್ಟರ್ ಸ್ಟ್ರೋಕ್ ಮಿಡ್ಲ್ ಓವರ್ನಲ್ಲೇ ಪ್ರಸಿದ್ಧ್ ಚಮತ್ಕಾರ!
ಇತ್ತೀಚೆಗೆ ಸುದೀಪ್ ಕಟ್ಟು ಮಸ್ತಾದ ವರ್ಕೌಟ್ ಫೋಟೋವನ್ನು ಹಂಚಿಕೊಂಡು ಏ.16ಕ್ಕೆ ಅಪ್‌ಡೇಟ್ ಸಿಗಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದರು. ಇದೀಗ ಒಂದು ವಾರದ ಮುಂಚಿತವಾಗಿಯೇ ನಟ ಮಾಹಿತಿ ಹಂಚಿಕೊಂಡಿದ್ದಾರೆ. ಬಿಲ್ಲ ರಂಗ ಭಾಷಾ ಸಿನಿಮಾದ ಶೂಟಿಂಗ್ ಆರಂಭ ಆಗೋದು ಯಾವಾಗ ಎಂಬುದರ ಬಗ್ಗೆ ಖುದ್ದು ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಏ.16ರಿಂದ ಶೂಟಿಂಗ್ ಶುರು ಎಂದಿದ್ದಾರೆ. ಆದರೀಗ ಏ.16ರಂದು ಶೂಟಿಂಗ್‌ನಲ್ಲಿ ಭಾಗಿಯಾಗಲಿರೋ ಸುದೀಪ್ ಲುಕ್ ಹೇಗಿರಲಿದೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ.
ಅಂದಹಾಗೆ, ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕಾಗಿ ಡೈರೆಕ್ಟರ್ ಅನೂಪ್ ಭಂಡಾರಿ ಜೊತೆ ಸುದೀಪ್ ಕೈಜೋಡಿಸಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರದ ಬಳಿಕ ಮತ್ತೆ ಈ ಕಾಂಬಿನೇಷನ್ ಒಂದಾಗಿದೆ.