ಟಾಕ್ಸಿಕ್ ಚಿತ್ರದ ಟೀಸರ್ ಮೆಚ್ಚಿಕೊಂಡ ಕಿಚ್ಚ – ಬರ್ತ್ಡೇ ವಿಶ್ ಜೊತೆ ಕಿಚ್ಚ ಹೇಳಿದ್ದೇನು ಗೊತ್ತಾ?

ಇಂದು (ಜನವರಿ 8) ಯಶ್ ಜನ್ಮದಿನ. ಈ ವಿಶೇಷ ದಿನದಂದು ‘ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗಿದೆ.ಈ ಟೀಸರ್ ಬಗ್ಗೆ ಮಾಹಿತಿ ನೀಡಲು ಯಶ್ ಟ್ವೀಟ್ ಮಾಡಿದ್ದರು. ರಾಯ ಅನ್ನೋದು ಯಶ್ ಮಾಡುತ್ತಿರುವ ಪಾತ್ರದ ಹೆಸರು. ಪಾತ್ರವನ್ನು ಪರಿಚಯಿಸುವ ರೀತಿಯಲ್ಲಿ ಈ ಟೀಸರ್ ಇದೆ. ಈ ಟೀಸರ್ ಬಗ್ಗೆ ಯಶ್ ಮಾಡಿದ ಟ್ವೀಟ್ನ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದಾರೆ. ಯಶ್ಗೆ ಶುಭಾಶಯಗಳು. ಅಲೆಗಳ ವಿರುದ್ಧ ಸಾಗಲು ಯಾವಾಗಲೂ ಸಮಯ ಬೇಕಾಗುತ್ತದೆ.ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಬಳಿ ಕೊಂಡೊಯ್ಯಲಿ. ನೀವು ನಿಮ್ಮ ಗುರಿಯನ್ನು ನಿರ್ಧರಿಸಿದ್ದೀರಿ’ ಎಂದು ಸುದೀಪ್ ಹೇಳಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗುತ್ತಿದೆ. ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

ಟಾಕ್ಸಿಕ್’ ಟೀಸರ್ ತುಂಬಾನೇ ಬೋಲ್ಡ್ ಆಗಿದೆ. ಇದನ್ನು ಅನೇಕರು ಟೀಕಿಸಿದ್ದಾರೆ. ಈ ಟೀಕೆಗಳು ಕೇಳಿ ಬಂದಿದ್ದರಿಂದಲೇ ‘ಅಲೆಗಳ ವಿರುದ್ಧ ಹೋಗಲು ಸಾಕಷ್ಟು ಸಮಯ ಬೇಕು’ ಎಂದು ಯಶ್ ಟ್ವೀಟ್ ಮಾಡಿರಬಹುದು ಎಂದು ಹೇಳಲಾಗುತ್ತಾ ಇದೆ. ಯಶ್ ಅವರಿಗೆ ಸುದೀಪ್ ವಿಶ್ ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ‘ಇದನ್ನು ನಾವು ನಿರೀಕ್ಷಿಸಿರಲಿಲ್ಲ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು, ‘ಇದು ನಮ್ಮ ಕಿಚ್ಚ ಸುದೀಪ್. ಯಶ್ ಹಾಗೂ ಸುದೀಪ್ ಮಧ್ಯೆ ಇರುವ ಬಾಂಡ್ನ ಅಭಿಮಾನಿಗಳೇ ಹಾಳು ಮಾಡಿದರು’ ಎಂದು ಕೆಲವರು ಹೇಳಿದ್ದಾರೆ.

ನೋಡಿರಿ

