ಕ್ರಾಂತಿಕಾರನ ಕೊಲ್ಲಬಹುದು ಕ್ರಾಂತಿಯನಲ್ಲ..! – ಬಿಲ್ಲ ರಂಗ ಭಾಷಾ ಸಿನಿಮಾದ  ಪೋಸ್ಟರ್‌ ರಿಲೀಸ್!‌

ಕ್ರಾಂತಿಕಾರನ ಕೊಲ್ಲಬಹುದು ಕ್ರಾಂತಿಯನಲ್ಲ..! – ಬಿಲ್ಲ ರಂಗ ಭಾಷಾ ಸಿನಿಮಾದ  ಪೋಸ್ಟರ್‌ ರಿಲೀಸ್!‌

ಕಿಚ್ಚ ಸುದೀಪ್‌ ಗೆ ಇಂದು 52ನೇ ವರ್ಷದ ಹುಟ್ಟುಹಬ್ಬ. ಬಾದ್‌ಷಾ ಕಿಚ್ಚ ಸುದೀಪ್‌ ಬರ್ತ್‌ಡೇ ಪ್ರಯುಕ್ತ ಅವರ ನಟನೆಯ ‘ಬಿಲ್ಲ ರಂಗ ಭಾಷಾ: ದಿ ಫಸ್ಟ್ ಬ್ಲಡ್’ ಸಿನಿಮಾದ ಸುದೀಪ್ ಅವರ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದ್ರಲ್ಲಿ ಕಿಚ್ಚ ಸುದೀಪ್‌  ವಾರಿಯರ್‌ ಆಗಿ ಮಿಂಚಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಮಳೆಯ ನರ್ತನ, ಯಮುನಾ ಆರ್ಭಟ – ಪ್ರವಾಹ ಭೀತಿಯಲ್ಲಿ ರಾಷ್ಟ್ರ ರಾಜಧಾನಿ ಜನತೆ

ಹೌದು ಕಿಚ್ಚ ಸುದೀಪ್‌ ಅವರ ಬಹುನಿರೀಕ್ಷಿತ ಸಿನಿಮಾ ಬಿಲ್ಲ ರಂಗ ಭಾಷಾ. ಈ  ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗ ಭಾರಿ ಸದ್ದು ಮಾಡಿತ್ತು. ಆದರೆ ಅದಾದ ಬಳಿಕ ಸಿನಿಮಾದ ಶೂಟಿಂಗ್ ಬಗ್ಗೆ ಯಾವುದೇ ಅಪ್​ಡೇಟ್ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ಅನೂಪ್ ಭಂಡಾರಿ ಫ್ಯಾನ್ಸ್‌ ಗೆ ಬಿಗ್‌ ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಇದೀಗ ಸಿನಿಮಾದ ಪೋಸ್ಟರ್ನ ರಿಲೀಸ್‌ ಮಾಡಲಾಗಿದೆ.

ಹೌದು, ಬಿಲ್ಲ ರಂಗ ಭಾಷಾ ಸಿನಿಮಾದ ಪೋಸ್ಟರ್‌ ನಲ್ಲಿ ಕಿಚ್ಚ ಸುದೀಪ್‌ ವಾರಿಯರ್ ರೀತಿ ಕಾಣುತ್ತಿದ್ದಾರೆ. ಕೈಯಲ್ಲಿ ರಾಕೆಟ್ ಲಾಂಚರ್ ಹಿಡಿದಿದ್ದಾರೆ. ಬೆನ್ನಿಗೆ ಕತ್ತಿ ಸಿಕ್ಕಿಸಿಕೊಂಡಿದ್ದಾರೆ. ಹಣೆಗೆ ಧರಿಸಿರುವ ಕನ್ನಡಕ ಈ ಸಿನಿಮಾ 40-50ರ ದಶಕದ ಕತೆ ಇರಬಹುದೆಂಬ ಅನುಮಾನ ಮೂಡಿಸುತ್ತಿದೆ. ಸುದೀಪ್ ಅವರ ಜೊತೆಗೆ ಪೋಸ್ಟರ್​​ನಲ್ಲಿರುವ ಬಾವುಟವೊಂದು ಸಹ ಗಮನ ಸೆಳೆಯುತ್ತಿದೆ.

ಪೋಸ್ಟರ್​ ನಲ್ಲಿ ‘ಕ್ರಾಂತಿಕಾರನ ಕೊಲ್ಲಬಹುದು ಕ್ರಾಂತಿಯನಲ್ಲ’ ಎಂಬ ಸಾಲು ಬರೆಯಲಾಗಿದೆ. ಪೋಸ್ಟರ್​​ನಲ್ಲಿ ಹಳೆಯ ಕಾಲದ ಯುದ್ಧ ವಿಮಾನವೊಂದರ ಚಿತ್ರವಿದೆ. ಅಮೆರಿಕದ ಸ್ಟ್ಯಾಚು ಆಫ್ ಲಿಬರ್ಟಿಯ ಚಿತ್ರವೂ ಪೋಸ್ಟರ್​​ನಲ್ಲಿದೆ. ಪೋಸ್ಟರ್​​ನಲ್ಲಿರುವ ಚಿತ್ರಗಳು, ಅದರ ಮೇಲಿರುವ ಸಾಲುಗಳು, ಸುದೀಪ್ ಅವರ ವೇಷ ನೋಡಿದರೆ ಇದು ಸರ್ಕಾರದ ಅಥವಾ ಯಾವುದೋ ದೊಡ್ಡ ವ್ಯವಸ್ಥೆಯ ವಿರುದ್ಧ ಹೋರಾಡುವ ಕ್ರಾಂತಿಕಾರಿಯೊಬ್ಬನ ಕತೆ ಇರಬಹುದೆಂಬ ಅನುಮಾನ ಮೂಡುತ್ತದೆ.

‘ಅನೂಪ್ ಭಂಡಾರಿ’ ಜೊತೆಗೆ ಸುದೀಪ್ ಅವರಿಗೆ ಇದು ಎರಡನೇ ಸಿನಿಮಾ. ಈ ಮೊದಲು ‘ವಿಕ್ರಾಂತ್ ರೋಣ’ ಸಿನಿಮಾಕ್ಕಾಗಿ ಈ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು. ಸಿನಿಮಾ ಹಿಟ್ ಎನಿಸಿಕೊಂಡಿತ್ತು. ಇದೀಗ ‘ಬಿಲ್ಲ ರಂಗ ಭಾಷಾ’ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಬಹುತೇಕ ಭಾಗ, ಸೆಟ್​ಗಳಲ್ಲಿಯೇ ಚಿತ್ರೀಕರಣ ಆಗುತ್ತಿದೆ. ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಅನೂಪ್ ಭಂಡಾರಿ, ‘ತಲೆಬಾಗಿಸಲು ಒಪ್ಪದ ಆ ಒಬ್ಬನ ಕಂಡರೆ ಸಾಮ್ರಾಜ್ಯಗಳಿಗೆ ಭಯ’ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಸುದೀಪ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಸಹ ತಿಳಿಸಿದ್ದಾರೆ.

Shwetha M