ಸುದೀಪ್‌ ಗೆ ಮ್ಯಾಕ್ಸ್‌ ಟೆನ್ಷನ್! -ಕಿಚ್ಚನಿಗೆ ಕಾಡ್ತಿದೆ ಸಾಲು ಸಾಲು ಚಿಂತೆ
ಅಕ್ಟೋಬರ್‌ ನಲ್ಲಿ ಸಿನಿಮಾ ರಿಲೀಸ್‌ ಆಗಲ್ವಾ?

ಸುದೀಪ್‌ ಗೆ ಮ್ಯಾಕ್ಸ್‌ ಟೆನ್ಷನ್! -ಕಿಚ್ಚನಿಗೆ ಕಾಡ್ತಿದೆ ಸಾಲು ಸಾಲು ಚಿಂತೆಅಕ್ಟೋಬರ್‌ ನಲ್ಲಿ ಸಿನಿಮಾ ರಿಲೀಸ್‌ ಆಗಲ್ವಾ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಟೀಸರ್‌, ಸಾಂಗ್‌ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಕಿಚ್ಚನ ಮಾಸ್‌ ಎಂಟ್ರಿಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಇದೀಗ ಕಿಚ್ಚನ ಫ್ಯಾನ್ಸ್‌ ಯಾವಾಗ ಸಿನಿಮಾ ರಿಲೀಸ್‌ ಆಗುತ್ತೆ? ಬಾದ್‌ ಷಾ ಯಾವಾಗ ಸಿನಿಮಾದ ಬಗ್ಗೆ ಅಪ್‌ಡೇಟ್‌ ಕೊಡ್ತಾರೆ ಅಂತಾ ಕಾಯ್ತಾ ಇದ್ದಾರೆ.. ಆದ್ರೆ ಕಿಚ್ಚನಿಗೆ ಸಿನಿಮಾ ರಿಲೀಸ್‌ ಮಾಡೋದ್ರ ಬಗ್ಗೆ ಫುಲ್‌ ಟೆನ್ಷನ್‌ ಆಗ್ತಿದ್ಯಂತೆ.. ಕಿಚ್ಚನಿಗೆ ಕಾಡ್ತಿರೋ ತಲೆನೋವಾದ್ರೂ ಏನು? ಸಿನಿಮಾ ರಿಲೀಸ್‌ ಡೇಟ್‌ ಯಾಕೆ ಇನ್ನೂ ಅನೌನ್ಸ್‌ ಮಾಡಿಲ್ಲ.. ಈ ಬಗ್ಗೆ  ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬ್ಯೂಟಿಫುಲ್ ಗವರ್ನರ್‌ ರಂಗಿನಾಟ! – 58 ಅಧಿಕಾರಿಗಳ ಜೊತೆ ಸಂಬಂಧ!

ಸುದೀಪ್ ನಟನೆಯ ಮ್ಯಾಕ್ಸ್  ಸಿನಿಮಾ ಬಗ್ಗೆ ಫ್ಯಾನ್ಸ್ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.. ಕಿಚ್ಚನ ಬರ್ತ್‌ ಡೇಯಂದು ಮ್ಯಾಕ್ಸ್‌ ಬರುತ್ತೆ ಅಂತಾ ಫ್ಯಾನ್ಸ್‌ ಅಂದು ಕೊಂಡಿದ್ರು.. ಆದ್ರೆ ಅದು ಸುಳ್ಳಾಗಿದೆ.. ಅವತ್ತು ಸಿನಿಮಾದ ಲಿರಿಕಲ್‌ ಸಾಂಗ್‌ ರೀಲಿಸ್‌ ಮಾಡಿದ್ರು..  ದಸರಾಗೆ ರಿಲೀಸ್‌ ಮಾಡ್ತಾರೆ ಅಂತಾ ಅಂದುಕೊಂಡ್ರೆ ಅದು ಸುಳ್ಳಾಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಮ್ಯಾಕ್ಸ್​ ಬರುತ್ತಾ..? ಈ ಬಗ್ಗೆ ಕಿಚ್ಚ ತುಟಿ ಬಿಚ್ಚುತ್ತಿಲ್ಲ. ಆ ಕಡೆ ಉಪ್ಪಿಯದ್ದೂ ಇದೆ ಕಥೆ. ಉಪೇಂದ್ರ ಯುಐ ಸಿನಿಮಾವನ್ನ ಅಕ್ಟೋಬರ್​​​​ಗೆ ರಿಲೀಸ್ ಮಾಡುತ್ತೇನೆ ಅಂತ ಹೇಳಿದ್ದಾರೆ. ಅಕ್ಟೋಬರ್​​ ಬರೋದಕ್ಕೆ ಇನ್ನು ಕೆಲವೇ ದಿನ ಬಾಕಿ ಇದೆ. ಆದ್ರೂ ರಿಲೀಸ್​ ಡೇಟ್​ ಕೊಟ್ಟಿಲ್ಲ. ಇದೀಗ ಸಿನಿ ದಿಗ್ಗರು ಯಾವಾಗ ಸಿನಿಮಾ ರಿಲೀಸ್‌ ಮಾಡ್ತಾರೆ ಅನ್ನೋ ಕುತೂಹಲ ಸಿನಿ ಪ್ರೇಕ್ಷಕರನ್ನ ಕಾಡುತ್ತಿದೆ.

ವಿಕ್ರಾಂತ್ ರೋಣ  ಬಳಿಕ  ಕಿಚ್ಚ ಸುದೀಪ್ ಒಂದು ಬ್ರೇಕ್ ಪಡೆದಿದ್ದರು. ರಾಜಕೀಯ ಪ್ರಚಾರದಲ್ಲೂ ಭಾಗಿಯಾಗಿದ್ರು.. ಹೀಗಾಗಿ, ಅವರ ಸಿನಿಮಾ ತೆರೆಮೇಲೆ ಬರದೆ ಎರಡು ವರ್ಷಗಳೇ ಕಳೆದಿವೆ. ಈಗ ಸುದೀಪ್ ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಮ್ಯಾಕ್ಸ್‌ ಸಿನಿಮಾದ ಟೀಸರ್‌, ಸಾಂಗ್‌ ರಿಲೀಸ್‌ ಮಾಡಿದ್ದಾರೆ.. ಇದ್ರಲ್ಲಿ ಕಿಚ್ಚನ ಖದರ್‌ ನೋಡಿ  ಫ್ಯಾನ್ಸ್ ಕಳೆದು ಹೋಗಿದ್ದಾರೆ. ಸಿನಿಮಾದ ಬಗ್ಗೆ ಕ್ಯೂರಿಯಾಸಿಟಿ ಕೂಡ ಜಾಸ್ತಿಯಾಗಿದೆ.. ಆದ್ರೆ ಸುದೀಪ್ ಮಾತ್ರ ಮ್ಯಾಕ್ಸ್​ ರಿಲೀಸ್  ಡೇಟ್‌ ಬಗ್ಗೆ ತಲೆಗೆ ಹಚ್ಚಿಕೊಂಡು ಓಡಾಡ್ತಿದ್ದಾರೆ. ಯಾಕಂದ್ರೆ ಮ್ಯಾಕ್ಸ್ ಸಿನಿಮಾ ಬಿಡುಗಡೆ ಡೇಟ್​ ಫಿಕ್ಸ್ ಮಾಡೋದೇ ಕಿಚ್ಚನಿಗೊಂದು ದೊಡ್ಡ ಚಿಂತೆಯಾಗಿದೆ.

ಹೌದು, ಸ್ಯಾಂಡಲ್‌ ವುಡ್‌ ನಲ್ಲಿ ಈಗ ಸಿನಿ ಪರ್ವ ಶುರುವಾಗಿದೆ.. ಒಂದಾದ ಮೇಲೊಂದು ಸಿನಿಮಾಗಳು ರಿಲೀಸ್‌ ಗೆ ಸಜ್ಜಾಗಿವೆ.. ಈಗಾಗಲೇ ದ್ರುವ ಸರ್ಜಾ ನಟನೆಯ ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ಕ್ಕೆ ರಿಲೀಸ್ ಆಗುತ್ತಿದೆ. ಇನ್ನು ಶ್ರೀಮುರಳಿ ಅಭಿನಯದ ಬಘೀರ ಸಿನಿಮಾ ಅಕ್ಟೋಬರ್‌ 31 ರಂದು ರಿಲೀಸ್‌ ಆಗಲಿದೆ. ಈ ಮೂವಿ ಬಂದ್ಮೇಲೆ ಕನ್ನಡದ ಯಾವ ಸ್ಟಾರ್ ಸಿನಿಮಾ ರಿಲೀಸ್ ಆಗುತ್ತೆ ಅಂತ ಕಾಯೋ ಹಾಗಾಗಿದೆ. ಯಾಕಂದ್ರೆ ಉಪೇಂದ್ರ ಹಾಗು ಸುದೀಪ್ ಸಿನಿಮಾ ರಿಲೀಸ್​ ಡೇಟ್​ ಹೇಳೋಕೆ ಒದ್ದಾಡ್ತಿದ್ದಾರೆ. ಕಿಚ್ಚನ ಮ್ಯಾಕ್ಸ್ ಸಿನಿಮಾ ವರ್ಕ್​ ಕಂಪ್ಲೀಟ್ ಆಗಿದೆ.  ಆದ್ರೆ ಸಿನಿಮಾ ಯಾವಾಗ ತೆರೆಗೆ ತರಬೇಕು ಅನ್ನೊ ನಿರ್ಧಾರ ಮಾತ್ರ ಕಿಚ್ಚನಿಂದ ಮಾಡಲಾಗ್ತಿಲ್ಲ. ಮ್ಯಾಕ್ಸ್​ ಸಿನಿಮಾ ರಿಲೀಸ್​ ಡೇಟ್​ಅನ್ನ ಕಿಚ್ಚ ಯಾಕೆ ಫಿಕ್ಸ್​ ಮಾಡುತ್ತಿಲ್ಲ ಅನ್ನೋದಕ್ಕೂ ಮತ್ತೊಂದು ಕಾರಣ ಕೂಡ ಇದೆ. ಕಿಚ್ಚ ಬರೀ ಸ್ಯಾಂಡಲ್‌ ವುಡ್‌ ಸಿನಿಮಾಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿಲ್ಲ..  ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆಯೂ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದಾರೆ ಅಂತ ಹೇಳಲಾಗ್ತಿದೆ. ಒಂದ್ ಕಡೆ ಸೂರ್ಯ ನಟನೆಯ ಕಂಗುವಾ ಸಿನಿಮಾ ನವೆಂಬರ್​​ 14ಕ್ಕೆ ತೆರೆ ಮೇಲೆ ಬರಲಿದೆ. ಆ ಕಡೆ ಅಲ್ಲು ಅರ್ಜುನ್ ನಟನೆಯ ಪುಷ್ಪ2 ಸಿನಿಮಾ ಡಿಸೆಂಬರ್​ 6ಕ್ಕೆ ರಿಲೀಸ್ ಆಗುತ್ತಿದೆ. ಈ ಎರಡು ಸಿನಿಮಾಗಳ ಮಧ್ಯೆ ಇರೋ ಗ್ಯಾಪ್ ನೋಡಿಕೊಂಡು ಒಂದು ಡೇಟ್​ಅನ್ನ ಕಿಚ್ಚ ಫಿಕ್ಸ್ ಮಾಡಬೇಕಿದೆ. ಹೀಗಾಗಿ ಕಿಚ್ಚ ಸಿನಿಮಾ ರಿಲೀಸ್‌ ಡೇಟ್‌ ಬಗ್ಗೆ ಸಿಕ್ಕಾಪಟ್ಟೆ ಟೆನ್ಷನ್‌ ಕಾಡ್ತಿದೆ.

 

Kishor KV

Leave a Reply

Your email address will not be published. Required fields are marked *