ಬೆಂಗಳೂರಿನಲ್ಲಿ ತರಕಾರಿ ದರಕ್ಕೆ ತಲೆ ಗಿರಗಿರ – ಡಬಲ್ ರೇಟ್.. ಗ್ರಾಹಕರು ಶಾಕ್..!

ಬೆಂಗಳೂರಿನಲ್ಲಿ ತರಕಾರಿ ದರಕ್ಕೆ ತಲೆ ಗಿರಗಿರ – ಡಬಲ್ ರೇಟ್.. ಗ್ರಾಹಕರು ಶಾಕ್..!

ಬೆಂಗಳೂರಿನಲ್ಲಿ ಬರೀ ಬಿಸಿಲಿಗೆ ಮಾತ್ರ ತಲೆ ಗಿರಗಿರ ಅನ್ನುವುದಲ್ಲ. ತರಕಾರಿ ದರ ಕೇಳಿದರೆ ಸಾಕು ಗ್ರಾಹಕರ ತಲೆ ಗಿರ ಗಿರ ಅನ್ನುತ್ತಿದೆ.  ಬೆಂಗಳೂರಿನಲ್ಲಿ ಕಳೆದ 15 ದಿನಗಳಲ್ಲಿ ತರಕಾರಿ ಬೆಲೆಗಳು ದುಪ್ಪಟ್ಟಾಗಿದೆ.

ಇದನ್ನೂ ಓದಿ:ನಿಂಬೆ ಹಣ್ಣು ಅಡುಗೆಗೆ ಮಾತ್ರವಲ್ಲ, ಆರೋಗ್ಯ ವೃದ್ಧಿಗೂ ಸೂಪರ್!‌ – ಒಂದು ಹಣ್ಣಿನಿಂದ ಎಷ್ಟೊಂದು ಲಾಭ!

ಬಿಸಿಲು ಮತ್ತು ಅಕಾಲಿಕ ಮಳೆಯಿಂದಾಗಿ ತರಕಾರಿ ದರ ಗಗನಕ್ಕೇರಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮೊದಲೇ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ಶಾಕ್ ಆಗಿದ್ದರು. ಇದರ ಬೆನ್ನಲ್ಲೇ ಈಗ ತರಕಾರಿ ದರ ಕೂಡ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ. ಕಳೆದ ಕೇವಲ 15 ದಿನಗಳ ಅಂತರದಲ್ಲಿ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಎರಡು ಪಟ್ಟು ಹೆಚ್ಚಾಗಿದೆ.

ಎರಡು ವಾರಗಳ ಹಿಂದೆ ಕೆಜಿಗೆ 60 ರೂಪಾಯಿ ಇದ್ದ ಬೀನ್ಸ್ ಬೆಲೆ ಈಗ 160 ರೂಪಾಯಿಗೆ ತಲುಪಿದೆ. ರಾಜ್ಯದಲ್ಲಿ ತೀವ್ರವಾಗಿ ಸುಡುತ್ತಿರುವ ಬಿಸಿಲಿನ ತಾಪಮಾನ ಮತ್ತು ಅಕಾಲಿಕವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತರಕಾರಿ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರೊಂದಿಗೆ ಸಾಲು ಸಾಲು ಶುಭ ಸಮಾರಂಭಗಳು ಮತ್ತು ಫಂಕ್ಷನ್‌ಗಳು ಇರುವುದರಿಂದ ತರಕಾರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ರಾಜ್ಯದ ಪ್ರಮುಖ ತರಕಾರಿ ಬೆಳೆಯುವ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಲ್ಲಿ ಈ ಬಾರಿ ತೀವ್ರವಾದ ಬಿಸಿಲು ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆಗಳಿಗೆ ಭಾರಿ ಹಾನಿಯಾಗಿದೆ. ಅತಿಯಾದ ಶಾಖದಿಂದಾಗಿ ಹೂವುಗಳು ಉದುರಿ ಇಳುವರಿ ಕಡಿಮೆಯಾಗಿದ್ದರೆ, ಇತ್ತೀಚೆಗೆ ಸುರಿದ ಗುಡುಗು ಸಹಿತ ಮಳೆಯಿಂದ ತರಕಾರಿ ಬೆಳೆ ನಾಶವಾಗಿದೆ. ಇದರಿಂದ ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ ಶೇ 30 ರಿಂದ 40ರಷ್ಟು ಕುಸಿದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ.

Sulekha