ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್! – ಪಾತಾಳಕ್ಕಿಳಿದ ಮೊಟ್ಟೆ ದರ!

ಕರ್ನಾಟಕದ ಕೋಳಿ ಸಾಕಾಣಿಕಾರರಿಗೆ ದೊಡ್ಡ ಮಟ್ಟದ ಟೆನ್ಶನ್ ಎದುರಾಗಿದೆ. ಇರಾನ್- ಇಸ್ರೇಲ್ ವಾರ್ ಎಫೆಕ್ಟ್‌ನಿಂದಾಗಿ ಕೆಲ ವಾರಗಳಿಂದ ರಾಜ್ಯದ ಹಲವೆಡೆ ಮೊಟ್ಟೆ ದರ ತೀವ್ರ ಕುಸಿದಿದೆ. ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ನೀಡಿದ ಮಾಹಿತಿಯ ಪ್ರಕಾರ, ಪ್ರತಿ ಮೊಟ್ಟೆಯ ಬೆಲೆ ಸುಮಾರು ₹7.06ರಿಂದ ₹4.60ರವರೆಗೆ ಇಳಿದಿದೆ. ಕೇವಲ 15 ದಿನಗಳ ಅವಧಿಯಲ್ಲಿ ಈ ಮಟ್ಟದ ಕುಸಿತ ಕಂಡುಬಂದಿರುವುದು ಕೋಳಿ ಸಾಕಾಣಿಕಾರರಿಗೆ ಆತಂಕವನ್ನುಂಟು ಮಾಡಿದೆ.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲೇ ನಡೆಯಲಿದೆ 2026ರ IPL ಫೈನಲ್! – ಬೆಂಗಳೂರಿನಲ್ಲಿ RCB ಎಷ್ಟು ಪಂದ್ಯಗಳನ್ನು ಆಡಲಿದೆ?
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ, ಮೊಟ್ಟೆ ಮಾರುಕಟ್ಟೆಗೆ ನೇರ ಹೊಡೆತ ಬಿದ್ದಿದೆ. ರಫ್ತು ಪ್ರಮಾಣ ಕೂಡ ಇಳಿದಿದೆ. ಜೊತೆಗೆ ಗ್ಯಾಸ್ ಸಿಲಿಂಡರ್ ಅಭಾವದಿಂದಾಗಿ ಸಾಕಷ್ಟು ಹೊಟೇಲ್‌ಗಳು ಮುಚ್ಚಿವೆ. ಇದರಿಂದ ಮೊಟ್ಟೆ ಬೇಡಿಕೆ ಕುಸಿತ ಕಂಡಿದ್ದು, ಬೆಲೆಯೂ ಸುಮಾರು 50% ರಷ್ಟು ಇಳಿಕೆ ಕಂಡಿದೆ. ಇದ್ರಿಂದಾಗಿ ವ್ಯಾಪಾರಸ್ಥರು ಆತಂಕದಲ್ಲಿ ಮುಳುಗಿದ್ದಾರೆ.
ಮೊಟ್ಟೆ ಮಾರುಕಟ್ಟೆಯಲ್ಲಿ ಇಂತಹ ಭಾರೀ ಕುಸಿತ ಮುಂದುವರಿದರೆ ಕೋಳಿ ಸಾಕಾಣಿಕೆ ಕ್ಷೇತ್ರಕ್ಕೂ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ವ್ಯಾಪಾರಿಗಳಿಗೆ ನೆರವು ನೀಡಬೇಕು ಎಂಬ ಬೇಡಿಕೆ ಕೂಡ ಕೇಳಿಬರುತ್ತಿದೆ.

ನೋಡಿರಿ

