ನಿದ್ದೆಗೂ ಹಾರ್ಟ್‌ ಅಟ್ಯಾಕ್‌ಗೂ ನಂಟು ಇದ್ಯಾ? – ತಜ್ಞರ ವರದಿಯಿಂದ ಬಯಲಾಯ್ತು ಸ್ಪೋಟಕ ಸತ್ಯ!

ನಿದ್ದೆಗೂ ಹಾರ್ಟ್‌ ಅಟ್ಯಾಕ್‌ಗೂ ನಂಟು ಇದ್ಯಾ? – ತಜ್ಞರ ವರದಿಯಿಂದ ಬಯಲಾಯ್ತು ಸ್ಪೋಟಕ ಸತ್ಯ!

ಹಾರ್ಟ್​ ಅಟ್ಯಾಕ್ ಅನ್ನೋದು ಮನುಕುಲಕ್ಕೆ ಎದುರಾಗಿರುವ ಅತ್ಯಂತ ದೊಡ್ಡ ಸಮಸ್ಯೆ. ಯಾರು, ಯಾವ ವಯಸ್ಸಲ್ಲಿ ಹಾರ್ಟ್​​​ ಅಟ್ಯಾಕ್​ಗೆ ಒಳಗಾಗುತ್ತಾರೋ ಹೇಳುವುದಕ್ಕೆ ಆಗುವುದಿಲ್ಲ. ಹೃದಯ ಸ್ತಂಭನದಿಂದ ಕೊನೆಯುಸಿರೆಳೆಯುತ್ತಾರೋ ಗೊತ್ತಿಲ್ಲ. ಈ ಹಿಂದೆಲ್ಲಾ ವಯಸ್ಸಾದವರು ಹೆಚ್ಚಾಗಿ ಹಾರ್ಟ್​ ಅಟ್ಯಾಕ್​​ನಿಂದ ಸಾವನ್ನಪ್ಪುತ್ತಿದ್ದರು.

ಇದನ್ನೂ ಓದಿ: ಹೃದಯಾಘಾತವಾಗಿ ಗರ್ಭಿಣಿ ಸಾವು – ಮಗಳ ಆಸೆಯಂತೆ ಆನೆಯನ್ನು ದತ್ತು ಪಡೆದ ತಂದೆ!

ಆದರೆ ಇದೀಗ ಎಳೆಯ ಮಕ್ಕಳು, ಯುವಕರಿಂದ ಹಿಡಿದು ಎಲ್ಲಾ ವಯಸ್ಸಿನವರೂ ಹಾರ್ಟ್​​ಅಟ್ಯಾಕ್​​ಗೆ ಒಳಗಾಗುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಹಾರ್ಟ್​​ ಅಟ್ಯಾಕ್​ ಹೆಚ್ಚಾಗಲು ಬದಲಾಗಿರುವ ನಮ್ಮ ಜೀವನ ಶೈಲಿ ಕೂಡ ಪ್ರಮುಖ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈಗ ಯುರೋಪ್​​​ನ ಆರೋಗ್ಯ ತಜ್ಞರು ನಡೆಸಿರುವ ಅಧ್ಯಯನದಿಂದ ಮತ್ತೊಂದು ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ನೀವು ಮಲಗುವ ಸಮಯ ಕೂಡ ನಿಮ್ಮ ಆರೋಗ್ಯದ, ಹೃದಯದ ಮೇಲೆ ಪರಿಣಾಮ ಬೀರಬಹುದು. ಇಡೀ ವಾರ ಒಂದೇ ಸಮಯದಲ್ಲಿ ನಿದ್ರೆ ಮಾಡುವಂತೆ ಆರೋಗ್ಯ ತಜ್ಞರು ಸಲಹೆ ಕೊಟ್ಟಿದ್ದಾರೆ. ಅಂದ್ರೆ ನೀವು ರಾತ್ರಿ 10 ಗಂಟೆ ಮಲಗುತ್ತೀರಾ ಅಂದ್ರೆ ಇಡೀ ವಾರ 10 ಗಂಟೆಗೇ ಮಲಗಬೇಕು. ಆದ್ರೆ ಬಹುತೇಕ ಮಂದಿ ವೀಕೆಂಡ್​​ನಲ್ಲಿ ತಡವಾಗಿ ಮಲಗುತ್ತಾರೆ. ಇನ್ನೂ ಕೆಲವು ನಿತ್ಯವೂ ಒಂದೊಂದು ಟೈಮ್​​ನಲ್ಲಿ ನಿದ್ರೆಗೆ ಜಾರ್ತಾರೆ. ನಿದ್ರಾ ಸಮಯದಲ್ಲಿ ಏರುಪೇರಾಗುವುದು ಆರೋಗ್ಯ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಸೃಷ್ಟಿಸುತ್ತದೆ.. ಅದು ಹೃದಯದ ಸಮಸ್ಯೆಗೂ ಕಾರಣವಾಗಬಹುದು ಅಂತಾ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಹೀಗಾಗಿ ನಿಮ್ಮ ನಿದ್ರಾ ಸಮಯದಲ್ಲೂ ಆದಷ್ಟು ಶಿಸ್ತು ಕಾಪಾಡಿಕೊಳ್ಳಿ.

suddiyaana