ಜಸ್ಪ್ರೀತ್ ಬುಮ್ರಾಗೆ ಯಶಸ್ವಿ ಶಸ್ತ್ರಚಿಕಿತ್ಸೆ- ಈ ಬಾರಿ ಐಪಿಎಲ್‌ಗೆ ಇರಲ್ಲ ಟೀಮ್ ಇಂಡಿಯಾ ವೇಗಿ

ಟೀಮ್ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಶಸ್ತ್ರಚಿಕಿತ್ಸೆ ನಡೆದಿದ್ದು, ಯಶಸ್ವೀಯಾಗಿದೆ. ನ್ಯೂಜಿಲೆಂಡ್‌ನ ಫೋರ್ಟೆ ಆರ್ಥೋಪೆಡಿಕ್ಸ್ ಆಸ್ಪತ್ರೆಯಲ್ಲಿ ಡಾ. ರೋವನ್ ಶೋಟೆನ್ ಅವರು ಬುಮ್ರಾಗೆ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಜಸ್ಪ್ರೀತ್ ಬುಮ್ರಾ ಸಂಪೂರ್ಣವಾಗಿ ಫಿಟ್ ಆಗಲು ಗರಿಷ್ಠ 24 ವಾರಗಳು ಅಂದರೆ 6 ತಿಂಗಳು ಬೇಕಾಗುತ್ತದೆ. ಆದರೆ ಜಸ್ಪ್ರೀತ್ ಬುಮ್ರಾ ಈ ಸಮಯಕ್ಕಿಂತ ಮುಂಚೆಯೇ ಚೇತರಿಸಿಕೊಳ್ಳಬಹುದು ಎಂತಲೂ ಹೇಳಲಾಗುತ್ತಿದೆ. ಒಂದು ವೇಳೆ 6 ತಿಂಗಳ ನಂತರ ಬುಮ್ರಾ ಸಂಪೂರ್ಣ ಫಿಟ್ ಆದರೆ, ಆಗ ಅವರು ಏಕದಿನ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಗಳು ಹೆಚ್ಚಿವೆ.
ಇದನ್ನೂ ಓದಿ: ಮಹಿಳಾ ದಿನಾಚರಣೆ ದಿನವೇ ಹೆಣ್ಣು ಮಗುವಿನ ತಂದೆಯಾದ ಟೀಮ್ ಇಂಡಿಯಾ ಬೌಲರ್
2023ರ ವಿಶ್ವಕಪ್ ಭಾರತದಲ್ಲಿಯೇ ನಡೆಯುತ್ತಿದ್ದು, ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ. ಹೀಗಾಗಿ ಟೀಂ ಇಂಡಿಯಾದ ಮ್ಯಾಚ್ ವಿನ್ನರ್‌ಗಳಲ್ಲಿ ಬುಮ್ರಾ ಕೂಡ ಒಬ್ಬರಾಗಿದ್ದು, ಆಗ ಫಿಟ್ ಆಗಿ ಬರಲಿ ಅಂತಾ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಶಸ್ತ್ರಚಿಕಿತ್ಸೆಯಿಂದಾಗಿ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ. ಇದರೊಂದಿಗೆ ಸೆಪ್ಟಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಗಾಯದ ಸಮಸ್ಯೆಗೆ ತುತ್ತಾಗಿರುವ ಬುಮ್ರಾಗೆ ಕಳೆದ ಏಷ್ಯಾಕಪ್, ಟಿ20 ವಿಶ್ವಕಪ್ ಕೂಡ ಆಡಲಾಗಲಿಲ್ಲ.
ವಿಶ್ವದ ದಿಗ್ಗಜ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಬುಮ್ರಾ ಸುಮಾರು 5 ತಿಂಗಳಿಂದ ಮೈದಾನದಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20ಯಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಇದಾದ ಬಳಿಕ ಬೆನ್ನು ನೋವಿನಿಂದಾಗಿ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮೊದಲು ಬುಮ್ರಾ ಅವರನ್ನು ಫಿಟ್ ಮಾಡಲು ಬಿಸಿಸಿಐ ಪ್ರಯತ್ನಿಸುತ್ತಿದೆ.