ಹೊಟ್ಟೆ ಮತ್ತು ಎದೆಭಾಗ ಬೆಸೆದುಕೊಂಡಿದ್ದ ಮಕ್ಕಳಿಗೆ ಯಶಸ್ವೀ ಶಸ್ತ್ರಚಿಕಿತ್ಸೆ – ರಿದ್ದಿ ಮತ್ತು ಸಿದ್ದಿಗೆ ಸಿಕ್ಕಿತು ಹೊಸ ಜೀವನ

ಹೊಟ್ಟೆ ಮತ್ತು ಎದೆಭಾಗ ಬೆಸೆದುಕೊಂಡಿದ್ದ ಮಕ್ಕಳಿಗೆ ಯಶಸ್ವೀ ಶಸ್ತ್ರಚಿಕಿತ್ಸೆ – ರಿದ್ದಿ ಮತ್ತು ಸಿದ್ದಿಗೆ ಸಿಕ್ಕಿತು ಹೊಸ ಜೀವನ

ಹುಟ್ಟಿ 11 ತಿಂಗಳಾಗಿತ್ತು. ಹೊಟ್ಟೆ ಮತ್ತು ಎದೆಯ ಭಾಗಗಳು ಒಂದೊಕ್ಕೊಂದು ಬೆಸೆದುಕೊಂಡಿದ್ದವು. ಸಯಾಮಿ ಹೆಣ್ಣು ಮಕ್ಕಳನ್ನು ಬೇರ್ಪಡಿಸುವುದೇ ವೈದ್ಯರಿಗೆ ದೊಡ್ಡ ಸವಾಲಾಗಿತ್ತು. ಮುದ್ದಾದ ಮಕ್ಕಳ ಭವಿಷ್ಯವೇನು ಅನ್ನೋ ಚಿಂತೆ ಹೆತ್ತವರದ್ದು. ಕೊನೆಗೂ ರಿದ್ದಿ ಮತ್ತು ಸಿದ್ದಿಗೆ ವೈದ್ಯರು ಹೊಸದೊಂದು ಜೀವನ ಕೊಟ್ಟಿದ್ದಾರೆ.

ಇದನ್ನೂ ಓದಿ: ಊರಿಗೆ ಅಂಟಿರುವ ಮಾರಿ ತಡೆವ ಬೇಲಿ…! – ಮನೆ ಮನೆಗೆ ಬರುವ ಆಟಿ ಕಳೆಂಜ..!

ಹೊಟ್ಟೆ ಮತ್ತು ಎದೆಯ ಭಾಗಗಳು ಬೆಸೆದುಕೊಂಡು ಜನಿಸಿದ್ದ ಅವಳಿ ಹೆಣ್ಣುಮಕ್ಕಳಾದ ರಿದ್ಧಿ ಮತ್ತು ಸಿದ್ಧಿಯ ದೇಹಗಳನ್ನು ದೆಹಲಿಯ ಏಮ್ಸ್ ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ಮೂಲದ ದೀಪಿಕಾ ಗುಪ್ತಾ ಎಂಬುವವರ ಅವಳಿ ಮಕ್ಕಳು ಥೊರಾಕೊ- ಒಂಫಾಲೊಪಾಗಸ್ ಎಂಬ ದೈಹಿಕ ಸಂಯೋಜನೆಯೊಂದಿಗೆ ಕಳೆದ ವರ್ಷ ಜು.7 ರಂದು ಜನಿಸಿದ್ದರು. ಬಳಿಕ ಇವರನ್ನು 5 ತಿಂಗಳ ಕಾಲ ಐಸಿಯುನಲ್ಲಿರಿಸಲಾಗಿತ್ತು. ನಂತರ ಇವರನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ 11 ತಿಂಗಳ ಮಕ್ಕಳಾಗಿದ್ದ ಇವರಿಗೆ ಕಳೆದ ಜೂ.8 ರಂದು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪರಸ್ಪರ ಬೆಸೆದುಕೊಂಡಿದ್ದ ಮಕ್ಕಳ ಹೃದಯದ ಮೇಲ್ಭಾಗದ ಹೊದಿಕೆ, ಪಕ್ಕೆಲುಬುಗಳು ಮತ್ತು ಯಕೃತ್ತುಗಳನ್ನು ಪ್ರತಿ ಮಗುವಿಗೂ ಸಮಾನ ಅಂಗಾಂಶ ದೊರೆಯುವಂತೆ ಬೇರ್ಪಡಿಸಲಾಗಿದೆ. ಇಬ್ಬರ ಹೃದಯಗಳು ತೀರಾ ಹತ್ತಿರದಲ್ಲಿದ್ದವು. ಇದೀಗ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಕ್ಕಳು ಲವಲವಿಕೆಯಿಂದ ಇದ್ದಾರೆ. ಹೆತ್ತವರು ಕೂಡಾ ವೈದ್ಯರ ಶ್ರಮಕ್ಕೆ ಧನ್ಯವಾದ ಹೇಳಿದ್ದು, ಈಗ ನಿರಾಳರಾಗಿದ್ದಾರೆ.

suddiyaana