ದೇಹದಿಂದ ಸಂಪೂರ್ಣ ಬೇರ್ಪಟ್ಟ ಮುಂಗೈ – ಮರು ಜೋಡಣೆಯಲ್ಲಿ ಯಶಸ್ವಿಯಾದ ವೈದ್ಯರು

ದೇಹದಿಂದ ಸಂಪೂರ್ಣ ಬೇರ್ಪಟ್ಟ ಮುಂಗೈ – ಮರು ಜೋಡಣೆಯಲ್ಲಿ ಯಶಸ್ವಿಯಾದ ವೈದ್ಯರು

ಭುವನೇಶ್ವರ್: ಮಹಿಳೆಯೊಬ್ಬರ ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟ ಎಡ ಮುಂಗೈಯನ್ನು ಭುವನೇಶ್ವರದ ಏಮ್ಸ್‌ನ ವೈದ್ಯರ ತಂಡ ಯಶಸ್ವಿಯಾಗಿ ಮರು ಜೋಡಣೆ ಮಾಡಿದ್ದಾರೆ ಎಂದು ವೈದ್ಯಕೀಯ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಗೆಳತಿಗೆ ಪ್ರಭಾವಿ ರಾಜಕಾರಣಿಯಿಂದ 44 ಬಾರಿ ಕರೆ? – ಬಾಲಿವುಡ್‌ ನಟನ ಸಾವಿಗೆ ರಾಜಕೀಯದ ನಂಟು?

ಡಿಸೆಂಬರ್ 9 ರಂದು ಪುರಿ ಜಿಲ್ಲೆಯ 25 ವರ್ಷದ ಬರ್ಶಾ ದಾಸ್ ಮನೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ, ಆಕೆಯ ದುಪಟ್ಟಾ ಎಡಗೈಯೊಂದಿಗೆ ಅಕ್ಕಿ ಕತ್ತರಿಸುವ ಯಂತ್ರಕ್ಕೆ ಸಿಲುಕಿಕೊಂಡಿತು. ಕೂಡಲೇ ಆಕೆಯನ್ನು  ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ತೋಳಿನಿಂದ ತುಂಡರಿಸಿದ ಭಾಗವನ್ನು ಐಸ್ ಬಾತ್‌ನಲ್ಲಿ ಇರಿಸಲಾಯಿತು ಮತ್ತು ಅದೇ ದಿನ ರಾತ್ರಿ 9 ಗಂಟೆಗೆ ಆಕೆಯನ್ನು ಏಮ್ಸ್‌ ಭುವನೇಶ್ವರದ ತುರ್ತು ವಿಭಾಗಕ್ಕೆ ಕರೆದೊಯ್ಯಲಾಯಿತು.

ಅದೇ ರಾತ್ರಿ ಸುಮಾರು 11:30 ಹೊತ್ತಿಗೆ ಡಾ ಸಂಜಯ್ ಕುಮಾರ್ ಗಿರಿ (ಸುಟ್ಟ ಗಾಯಗಳು ಮತ್ತು ಪ್ಲಾಸ್ಟಿಕ್ ಸರ್ಜರಿ ಮುಖ್ಯಸ್ಥ) ನೇತೃತ್ವದ ತಂಡವು ಆಕೆಗೆ ಮರು-ಇಂಪ್ಲಾಂಟೇಶನ್ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ಸುಮಾರು ಎಂಟು ಗಂಟೆಗಳಿಗೂ ಹೆಚ್ಚು ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬೇರ್ಪಡಿಸಿದ ಎಡ ಮುಂಗೈಯನ್ನು ದೇಹಕ್ಕೆ ಮತ್ತೆ ಜೋಡಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.

suddiyaana