ಕಬಿನಿ ಡ್ಯಾಂನಲ್ಲಿ ಗಣನೀಯ ಮಟ್ಟದಲ್ಲಿ ನೀರು ಇಳಿಕೆ – ಬೆಂಗಳೂರು, ಮೈಸೂರಿಗೆ ಕುಡಿಯುವ ನೀರಿನ ಕೊರತೆ ಆತಂಕ

ಕಬಿನಿ ಡ್ಯಾಂನಲ್ಲಿ ಗಣನೀಯ ಮಟ್ಟದಲ್ಲಿ ನೀರು ಇಳಿಕೆ – ಬೆಂಗಳೂರು, ಮೈಸೂರಿಗೆ ಕುಡಿಯುವ ನೀರಿನ ಕೊರತೆ ಆತಂಕ

ಜೂನ್ ತಿಂಗಳು ಅರ್ಧ ಮುಗಿಯುತ್ತಾ ಬಂದ್ರೂ ಮುಂಗಾರು ಮಳೆ ಮಾತ್ರ ಇನ್ನೂ ಕಣ್ಣಾಮುಚ್ಚಾಲೆ ಆಡುತ್ತಿದೆ. ಪ್ರತೀ ವರ್ಷ ಈ ವೇಳೆಗಾಗಲೇ ಅಬ್ಬರಿಸುತ್ತಿದ್ದ ವರುಣ ಈ ಬಾರಿ ಮಾತ್ರ ಕರುಣೆ ತೋರುತ್ತಿದೆ. ಇದೇ ಕಾರಣಕ್ಕೆ ಹಲವೆಡೆ ನೀರಿನ ಅಭಾವ ಶುರುವಾಗಿದೆ. ಇದೀಗ ಪ್ರತಿಷ್ಠಿತ ಕಬಿನಿ ಜಲಾಶಯದ (Kabini Dam) ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಇದನ್ನೂ ಓದಿ : ಮುಂಗಾರು ಮಳೆ ಬೀಳದೆ ಬರಿದಾಯ್ತು ಶರಾವತಿ ಹಿನ್ನೀರು – ಸಿಗಂದೂರು ಲಾಂಚ್ ನಲ್ಲಿ ವಾಹನಗಳಿಗೆ ನಿರ್ಬಂಧ

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಕಬಿನಿ ಜಲಾಶಯದ (Kabini Dam) ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಜಲಾಶಯದಲ್ಲಿ ಒಟ್ಟು 19.50 TMC ನೀರು ಸಂಗ್ರಹವಾಗುತ್ತದೆ. ಆದ್ರೆ ಸದ್ಯಕ್ಕೆ ಜಲಾಶಯದಲ್ಲಿ 4 TMC ಮಾತ್ರ ನೀರಿನ ಸಂಗ್ರಹ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ತೆಗೆದರೆ ಬಳಕೆಗೆ ಸಿಗುವುದು ಕೇವಲ 2 TMC ನೀರು ಮಾತ್ರ. ಇದೇ ಕಬಿನಿ ಜಲಾಶಯದಿಂದ ಮೈಸೂರು, ಬೆಂಗಳೂರಿನ (Mysuru, Bengaluru) ಕೆಲ ಭಾಗ, ನಂಜನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದು ಈ ಭಾಗಗಳಲ್ಲಿ ಕುಡಿಯುವ ನೀರಿಗೆ (Drinking Water) ಹಾಹಾಕಾರ ಉಂಟಾಗುವ ಆತಂಕವಿದೆ.

ಕಬಿನಿ ಮತ್ತು ಕಪಿಲಾ ಎಂದೂ ಕರೆಯಲ್ಪಡುವ ಕಬಿನಿ ನದಿಯು ದಕ್ಷಿಣ ಭಾರತದ ನದಿಗಳಲ್ಲೊಂದು. ಕೇರಳ ರಾಜ್ಯದ ವಯನಾಡ್ ಜಿಲ್ಲೆಯಲ್ಲಿ, ಪನಮರಮ್ ಮತ್ತು ಮಾನಂತವಾಡಿ ನದಿಗಳ ಸಂಗಮದಿಂದ ಹುಟ್ಟಿ ಪೂರ್ವಾಭಿಮುಖವಾಗಿ ಹರಿದು ಕರ್ನಾಟಕದ ತಿರುಮಕೂಡಲು ನರಸೀಪುರದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಮುಂದೆ ತಮಿಳುನಾಡಿನ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಇದು ಸರ್ಗೂರು ಪಟ್ಟಣದ ಹತ್ತಿರ ಬೃಹತ್ ಕಬಿನಿ ಅಣೆಕಟ್ಟಿನಲ್ಲಿ ಅದರ ನೀರು ಸಂಗ್ರಹಿಸಲಾಗುತ್ತದೆ. ಬೇಸಿಗೆಯಲ್ಲಿ ಈ ನದಿಯ ಹಿನ್ನೀರಿನಲ್ಲಿ ವಿಶೇಷವಾದ ವನ್ಯಜೀವಿ ಬಹಳ ಹೇರಳವಾಗಿರುತ್ತವೆ. ಕಬಿನಿ ಅಣೆಕಟ್ಟು ಮೈಸೂರು ಜಿಲ್ಲೆಯ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸರ್ಗೂರು ಪಟ್ಟಣದಿಂದ 17 ಕಿ.ಮೀ. ಮತ್ತು 6 ಕಿ.ಮೀ.  ದೂರದ ಗ್ರಾಮಗಳಾದ ಬಿಚ್ಚನಹಳ್ಳಿಯ ಮತ್ತು ಬಿದರಹಳ್ಳಿಯ ನಡುವೆ ಸ್ಥಾಪಿತವಾಗಿದೆ.

 

suddiyaana