ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ 100 ರೂಪಾಯಿ ಏರಿಕೆ! – ಇನ್ನುಮುಂದೆ 603 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌!

ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ 100 ರೂಪಾಯಿ ಏರಿಕೆ! – ಇನ್ನುಮುಂದೆ 603 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್‌!

ನವದೆಹಲಿ: ಕೇಂದ್ರ ಸರ್ಕಾರ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಗುಡ್‌ ನ್ಯೂಸ್‌ ನೀಡಿದೆ. ಉಜ್ವಲಾ ಯೋಜನೆಯ ಎಲ್‌ಪಿಜಿ ಸಿಲಿಂಡರ್‌ ಸಬ್ಸಿಡಿ ರೂ.200 ರಿಂದ 300ಕ್ಕೆ ಹೆಚ್ಚಳ ಮಾಡಲಾಗಿದೆ.

ಕೆಲ ತಿಂಗಳ ಹಿಂದಷ್ಟೇ ಉಜ್ವಲ್ ಯೋಜನೆಯ ಎಲ್ ಪಿಜಿ ಸಿಲಿಂಡರ್ ಸಬ್ಸಿಡಿ ದರವನ್ನು 200ರೂ.ಗೆ ಕೇಂದ್ರ ಸರ್ಕಾರ ಹೆಚ್ಚಳ ಮಾಡಿ ಸಿಹಿಸುದ್ದಿ ನೀಡಿತ್ತು. ಇದೀಗ ಮತ್ತೆ 100 ರೂಪಾಯಿ ಸಬ್ಸಿಡಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ (ಅಕ್ಟೋಬರ್‌ 04) ಅನುಮೋದನೆ ನೀಡಿದೆ. ಇದರೊಂದಿಗೆ ಉಜ್ವಲಾ ಫಲಾನುಭವಿಗಳ ಗ್ಯಾಸ್‌ ಸಿಲಿಂಡರ್‌ ಗೆ ಒಟ್ಟು 500 ರೂಪಾಯಿ ಇಳಿಕೆಯಾದಂತಾಗಿದೆ.

ಇದನ್ನೂ ಓದಿ: ಮೇಲ್ಸೇತುವೆಯಿಂದ ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿಗರ ಬಸ್‌ – 21 ಮಂದಿ ಸಾವು

ಇನ್ಮುಂದೆ ಉಜ್ವಲಾ ಫಲಾನುಭವಿಗಳು ಎಲ್‌ ಪಿಜಿ ಸಿಲಿಂಡರ್‌ ಅನ್ನು 603 ರೂಪಾಯಿಗೆ ಖರೀದಿಸಬಹುದಾಗಿದೆ. 2024ರ ಲೋಕಸಭಾ ಚುನಾವಣೆ ಹಾಗೂ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗೂ ಮುನ್ನ ಸಬ್ಸಿಡಿ ಏರಿಸುವ ಮೂಲಕ ಕಡಿಮೆ ಆದಾಯ ಇರುವ ಲಕ್ಷಾಂತರ ಕುಟುಂಬಗಳಿಗೆ ನೆರವು ನೀಡಿದಂತಾಗಿದೆ ಎಂದು ವರದಿ ತಿಳಿಸಿದೆ.

Shwetha M