ಸೋಮವಾರವೇ ಶುಭವೆಂದು ನಾಮಿನೇಷನ್ ಭರಾಟೆ – ಬೆಂಬಲಿಗರ ಜೊತೆ ಘಟಾನುಘಟಿಗಳ ಶಕ್ತಿಪ್ರದರ್ಶನ!

ಸೋಮವಾರವೇ ಶುಭವೆಂದು ನಾಮಿನೇಷನ್ ಭರಾಟೆ – ಬೆಂಬಲಿಗರ ಜೊತೆ ಘಟಾನುಘಟಿಗಳ ಶಕ್ತಿಪ್ರದರ್ಶನ!

ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ಇವತ್ತಿನಿಂದ ಮತ್ತಷ್ಟು ರಂಗೇರಿದೆ. ಮತಯುದ್ಧದಲ್ಲಿ ಸೆಣಸಾಡಲು ಕದನ ಕಲಿಗಳು ಅಧಿಕೃತವಾಗಿ ಕಹಳೆ ಮೊಳಗಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಘಟಾನುಘಟಿಗಳು ತಮ್ಮ ಬೆಂಬಲಿಗರ ಜೊತೆ ನಾಮಪತ್ರ ಸಲ್ಲಿಕೆ ವೇಳೆಯೇ ಶಕ್ತಿಪ್ರದರ್ಶನ ಮಾಡಿದ್ದಾರೆ.

ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಿ.ಕೆ ಶಿವಕುಮಾರ್ ಕನಕಪುರ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಟೆಂಪಲ್ ರನ್ ಹಾಗೂ ಬೃಹತ್ ರೋಡ್ ಶೋ ಮೂಲಕ ಪತ್ನಿ ಜೊತೆ ತೆರಳಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಕೆ.ಸುಧಾಕರ್ ಕೂಡ ತಮ್ಮ ಮನೆ ದೇವರು ಹಾಗೂ ತಾಯಿ ಫೋಟೋಗೆ ಪೂಜೆ ಮಾಡಿ ಅಖಾಡಕ್ಕಿಳಿದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೊಡೆ ತಟ್ಟಿರುವ ವಿ.ಸೋಮಣ್ಣ ಇವತ್ತು ಸಿಎಂ ಬಸವರಾಜ್ ಬೊಮ್ಮಾಯಿ ಜೊತೆಗೂಡಿ ನಂಜನಗೂಡಿನಲ್ಲಿ ನಾಮಿನೇಷನ್ ಸಲ್ಲಿಸಿದ್ರು. ಇದಕ್ಕೂ ಮುನ್ನ ಸಂಸದ ಪ್ರತಾಪ್ ಸಿಂಹ ಜೊತೆ ಚಾಮುಂಡಿ ಬೆಟ್ಟದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು.

ಇದನ್ನೂ ಓದಿ : ಅಮಿತ್ ಶಾ ಕಾರ್ಯಕ್ರಮದಲ್ಲಿ ಬಿಸಿಲಿನ ತಾಪಕ್ಕೆ 11 ಮಂದಿ ಸಾವು – 120 ಕ್ಕೂ ಹೆಚ್ಚು ಜನ ಅಸ್ವಸ್ಥ

ಇತ್ತ ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್, ಹೊಳೆ ನರಸೀಪುರದ ಜೆಡಿಎಸ್ ಅಭ್ಯರ್ಥಿಯಾಗಿ ಹೆಚ್. ಡಿ. ರೇವಣ್ಣ, ಚನ್ನಪಟ್ಟಣದಿಂದ ಹೆಚ್.ಡಿ ಕುಮಾರಸ್ವಾಮಿ, ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಂತೋಷ್ ಲಾಡ್, ಬೆಂಗಳೂರಿನ ಗಾಂಧಿನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್, ರಾಮನಗರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ, ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ, ಮಲ್ಲೇಶ್ವರಂ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ಅಶ್ವತ್ಥನಾರಾಯಣ ನಾಮಿನೇಷನ್ ಸಲ್ಲಿಸಿದ್ರು. ಆದ್ರೆ ಗದಗ, ಬೆಳ್ತಂಗಡಿ ಹಾಗೂ ಮಾಲೂರಿನಲ್ಲಿ ನಾಮಿನೇಷನ್ ವೇಳೆ ಗಲಾಟೆ ನಡೆದಿದೆ.. ಕಲ್ಲು ತೂರಾಟ ಕೂಡ ಮಾಡಲಾಗಿದೆ. ಇನ್ನು ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕದನ ಕಲಿಗಳ ಆಸ್ತಿ ವಿವರ ಬಹಿರಂಗವಾಗಿದೆ. ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಒಟ್ಟು ಆಸ್ತಿ ಮೌಲ್ಯ 1,510 ಕೋಟಿ ಇದೆ.. ಕೇವಲ ನಾಲ್ಕು ವರ್ಷದಲ್ಲೇ 495 ಕೋಟಿ ರೂಪಾಯಿ ಹೆಚ್ಚಳವಾಗಿದೆ.

suddiyaana