ದುಬೈನಲ್ಲಿ ಸು ಫ್ರಮ್ ಸೋ ಟೀಂ ಜಾಲಿ – ಅಜಯ್ ದೇವ್‌ಗನ್‌ಗೆ ತಮಿನಾಡ್ ಡೈರೆಕ್ಷನ್?
ದುಲ್ಖರ್ ಋಣ ತೀರಿಸಿದ ರಾಜ್ B ಶೆಟ್ಟಿ

ದುಬೈನಲ್ಲಿ ಸು ಫ್ರಮ್ ಸೋ ಟೀಂ ಜಾಲಿ –  ಅಜಯ್ ದೇವ್‌ಗನ್‌ಗೆ ತಮಿನಾಡ್ ಡೈರೆಕ್ಷನ್?ದುಲ್ಖರ್ ಋಣ ತೀರಿಸಿದ ರಾಜ್ B ಶೆಟ್ಟಿ

ಜೆಪಿ ತುಮಿನಾಡ್ ನಟಿಸಿ, ನಿರ್ದೇಶನ ಮಾಡಿರುವ ‘ಸು ಫ್ರಮ್ ಸೋ’ ಸಿನಿಮಾವು ಜುಲೈ 25ರಂದು ತೆರೆಕಂಡಿತ್ತು. ಈವರೆಗೂ ಕೂಡ ಚಿತ್ರ ಉತ್ತಮ ಗಳಿಕೆಯನ್ನೇ ಮಾಡುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಕಲೆಕ್ಷನ್‌ನಲ್ಲಿ ಒಂಚೂರು ಇಳಿಕೆ ಆಗಿದೆ ಎಂಬುದು ಬಿಟ್ಟರೇ, ಥಿಯೇಟರ್‌ಗೆ ಜನರನ್ನು ಕರೆಸುವಲ್ಲಿ ಫುಲ್ ಸಕ್ಸಸ್ ಆಗಿದೆ. ಈಗ ಸಿನಿಮಾ ಟೀಂ ದುಬೈ ಮತ್ತು ಅಬುಧಾಬಿಯಲ್ಲಿ ಕನ್ನಡಿಗರನ್ನು ಭೇಟಿ ಮಾಡಲು ಹೋಗಿದ್ದಾರೆ. ಇನ್ನು  ದುಬೈಗೆ ಸು ಫ್ರಮ್ ಸೋ ಸಿನಿಮಾ ನಿರ್ದೇಶಕ ಜೆಪಿ ತುಮಿನಾಡ್, ರಾಜ್ ಬಿ ಶೆಟ್ಟಿ, ರವಿ ಅಣ್ಣನ ಪಾತ್ರ ಮಾಡಿರುವ ಗೌತಮ್ ಶನೀಲ್, ರಿಕ್ಷಾ ಚಂದ್ರಣ್ಣ ಪಾತ್ರಧಾರಿ ಪ್ರಕಾಶ್ ತುಮಿನಾಡ್‌, ಸತೀಶ ಪಾತ್ರ ಮಾಡಿರುವ ದೀಪಕ್ ರೈ ಪಣಜೆ ಹೋಗಿದ್ದಾರೆ.

ದುಲ್ಖರ್ ಸಲ್ಮಾನ್​ ಋಣ ತೀರಿಸಿದ ರಾಜ್ ಬಿ ಶೆಟ್ಟಿ

ಒಂದು ಸಿನಿಮಾ ಪರಭಾಷೆಯಲ್ಲಿ ಹೋಗಿ ಯಶಸ್ಸು ಕಾಣಬೇಕು ಎಂದರೆ ಅಲ್ಲಿ ಒಳ್ಳೆಯ ಹಂಚಿಕೆದಾರರು ಬೇಕೆ ಬೇಕು. ಅದೇ ರೀತಿ ಸು ಫ್ರಮ್ ಸೋ  ಚಿತ್ರವನ್ನು ದುಲ್ಖರ್ ಅವರು ಮಲಯಾಳಂನಲ್ಲಿ ಹಂಚಿಕೆ ಮಾಡಿದ್ದರು. ಇದರಿಂದ ಸಿನಿಮಾಗೆ ಅಲ್ಲಿ ಮೈಲೇಜ್ ಸಿಕ್ಕಿತು. ದುಲ್ಖರ್ ಅವರ ಮಲಯಾಳಂ ಸಿನಿಮಾವನ್ನು ಈಗ ರಾಜ್ ಅವರು ಕನ್ನಡದಲ್ಲಿ ಹಂಚಿಕೆ ಮಾಡುತ್ತಿದ್ದಾರೆ.   ‘ಲೋಕಃ’ ಹೆಸರಿನ ಸಿನಿಮಾ ಆಗಸ್ಟ್ 28ರಂದು ರಿಲೀಸ್ ಆಗುತ್ತಿದೆ. ಇದು ಮೂಲತಃ ಮಲಯಾಳಂ ಸಿನಿಮಾ. ಇದನ್ನು ನಿರ್ಮಾಣ ಮಾಡಿದ್ದು ದುಲ್ಖರ್ ಸಲ್ಮಾನ್ ಅವರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಾಜ್​ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ಸ್ ಹಂಚಿಕೆ ಮಾಡುತ್ತಿದೆ. ಈ ಬಗ್ಗೆ ದುಲ್ಖರ್ ಸಲ್ಮಾನ್ ಪ್ರೊಡಕ್ಷನ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಎರಡು ಚಿತ್ರರಂಗದ ನಡುವೆ ಒಳ್ಳೆಯ ನಂಟು ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಆಗಿದೆ.

JP ತುಮಿನಾಡ್‌ಗೆ ಭರ್ಜರಿ ಆಫರ್

ಸು ಫ್ರಮ್ ಸೋ’ ಡೈರೆಕ್ಟರ್ ಜೆಪಿ ತುಮಿನಾಡ್ ಅವರಿಗೆ ಬಾಲಿವುಡ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಹೌದು, ಕನ್ನಡದ ಹೆಸರಾಂತ ನಿರ್ಮಾಪಕರಾದ ಕೆವಿಎನ್‌ ಪ್ರೊಡಕ್ಷನ್ಸ್ ಜೊತೆಗೆ ಜೆಪಿ ತುಮಿನಾಡ್ ಕೈಜೋಡಿಸಿದ್ದು, ಈ ಸಿನಿಮಾದಲ್ಲಿ ಹೀರೋ ಆಗಿ ಬಾಲಿವುಡ್‌ ನಟ ಅಜಯ್ ದೇವ್‌ಗನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಬಾಲಿವುಡ್‌ನ ಪಿಂಕ್‌ವಿಲ್ಲಾ ವರದಿ ಮಾಡಿರುವ ಪ್ರಕಾರ, ಜೆಪಿ ತುಮಿನಾಡ್ ಜೊತೆಗೆ ಕೆವಿಎನ್‌ ಪ್ರೊಡಕ್ಷನ್ಸ್ ಈ ಬಾರಿಯೂ ಹಾರರ್ ಕಾಮಿಡಿ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರಂತೆ. ಅಜಯ್ ದೇವ್‌ಗನ್ ಅವರು ಇಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, “ಅಜಯ್ ದೇವ್‌ಗನ್ ಒಳ್ಳೊಳ್ಳೆಯ ಕಥೆಗಳನ್ನು ಕೇಳುವುದಕ್ಕೆ ಯಾವಾಗಲೂ ಮುಕ್ತವಾಗಿರುತ್ತಾರೆ. ಅದೇ ರೀತಿ ಜೆಪಿ ತುಮಿನಾಡ್ ಅವರು ಹೇಳಿದ ಒಂದು ಕಥೆ ಅಜಯ್‌ಗೆ ಹಿಡಿಸಿದೆ. ಸದ್ಯ ಕಥೆಯ ಒನ್‌ಲೈನ್‌ ಮಾತ್ರ ಕೇಳಿರುವ ಅಜಯ್ ದೇವ್‌ಗನ್ ಪೂರ್ಣ ಸ್ಕ್ರಿಪ್ಟ್ ಜೊತೆಗೆ ಬರುವಂತೆ ಸೂಚಿಸಿದ್ದು, ಈ ರೀತಯ ಜಾನರ್ ಅವರಿಗೆ ಹೊಸದು ಎನ್ನಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯು ಈ ಚಿತ್ರವನ್ನು 2026 ಮೊದಲ ಭಾಗದಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆಯಂತೆ. ಈಗಾಗಲೇ ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಜೊತೆಗೆ ಹೈವಾನ್ ಎಂಬ ಸಿನಿಮಾವನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ಇದರ ಜೊತೆಗೆ ಈಗ ಅಜಯ್ ದೇವ್‌ಗನ್ ಜೊತೆಗೆ ಕೈಜೋಡಿಸಿದೆ ಎನ್ನಲಾಗಿದೆ. ಅಂದಹಾಗೆ, ಈಚೆಗಷ್ಟೇ ಜೆಪಿ ತುಮಿನಾಡ್ ಮತ್ತು ಅಜಯ್ ದೇವ್‌ಗನ್ ಒಟ್ಟಿಗೆ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು.

Kishor KV