ತಗ್ಗದ ಅಬ್ಬರ.. 120 ಕೋಟಿಯತ್ತ ಸು ಫ್ರಮ್ ಸೋ! –  ಸ್ಯಾಟಲೈಟ್‌, ಡಿಜಿಟಲ್‌ ಹಕ್ಕು ಮಾರಾಟದಲ್ಲೂ ದಾಖಲೆ!

ತಗ್ಗದ ಅಬ್ಬರ.. 120 ಕೋಟಿಯತ್ತ ಸು ಫ್ರಮ್ ಸೋ! –  ಸ್ಯಾಟಲೈಟ್‌, ಡಿಜಿಟಲ್‌ ಹಕ್ಕು ಮಾರಾಟದಲ್ಲೂ ದಾಖಲೆ!

ರಾಜ್‌ ಬಿ ಶೆಟ್ಟಿ ನಿರ್ಮಾಣದ ಸು ಫ್ರಮ್‌ ಸೋ ಸಿನಿಮಾ ಯಶಸ್ಸು ಕಂಡಿದೆ.  ಕೂಲಿ, ವಾರ್‌ 2 ನಂಥಾ ಸ್ಟಾರ್‌ ಸಿನಿಮಾಗಳು ರಿಲೀಸ್‌ ಆಗಿದ್ರೂ ಕೂಡ ಕನ್ನಡದ ಈ ಸಿನಿಮಾ ಅಬ್ಬರ ಮಾತ್ರ ನಿಂತಿಲ್ಲ.. ಥಿಯೇಟರ್‌ನಲ್ಲಿ ಯಶಸ್ಸಿನ ಓಟ ಮುಂದುವರಿಸಿದೆ. ಸದ್ಯ 120 ಕೋಟಿ ಕಲೆಕ್ಷನ್‌ನತ್ತ ಹೆಜ್ಜೆ ಹಾಕಿದೆ ಸು ಫ್ರಮ್‌ ಸೋ ಸಿನಿಮಾ. ಇದೀಗ ಈ ಚಿತ್ರದ ಸ್ಯಾಟ್‌ ಲೈಟ್‌ ಹಾಗೂ ಡಿಜಿಟಲ್‌ ಹಕ್ಕು ಮಾರಾಟದಲ್ಲೂ ಹೊಸ ದಾಖಲೆ ಬರೆದಿದೆ.

ಇದನ್ನೂ ಓದಿ: ಮುಂಬೈನಲ್ಲಿ ಮಳೆಯಲ್ಲಿ ಸಿಲುಕಿಕೊಂಡ ಮೊನೊ ರೈಲು – ಗ್ರೇಟ್ ಎಸ್ಕೇಪ್ ಆದ 782 ಪ್ರಯಾಣಿಕರು

ಜೆಪಿ ತುಮಿನಾಡು ನಿರ್ದೇಶನದ, ಶನೀಲ್ ಗೌತಮ್, ರಾಜ್‌ ಬಿ ಶೆಟ್ಟಿ ನಟನೆಯ ಸು ಫ್ರಮ್‌ ಸೋ ಸಿನಿಮಾ 25 ದಿನಗಳ ಪ್ರದರ್ಶನ ಕಂಡಿದೆ. ಸದ್ಯ ಸು ಫ್ರಮ್‌ ಸೋ ಸಿನಿಮಾ ಬರೋಬ್ಬರಿ 120 ಕೋಟಿ ಕಲೆಕ್ಷನ್‌ನತ್ತ ಹೆಜ್ಜೆ ಹಾಕಿದೆ. ಈ ಮಧ್ಯೆ ನಿರ್ಮಾಪಕ ಎನ್‌.ಎಸ್‌. ರಾಜ್‌ಕುಮಾರ್ ಚಿತ್ರದ ತಮಿಳು ರಿಮೇಕ್‌ ಹಕ್ಕುಗಳನ್ನು ಖರೀದಿಸಿದ್ದಾರೆ. ಚಿತ್ರಮಂದಿರಗಳಲ್ಲಿ ದಾಖಲೆಯ ಪ್ರದರ್ಶನ ಕಂಡ ಸು ಫ್ರಂ ಸೋ ಸಿನಿಮಾ ಇದೀಗ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಮಾರಾಟದಲ್ಲಿಯೂ ದಾಖಲೆ ಬರೆದಿದೆ.

ಸು ಫ್ರಂ ಸೋ  ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್‌ ಪ್ರಸಾರ ಹಕ್ಕನ್ನು ಕಲರ್ಸ್‌ ಮತ್ತು ಹಾಟ್‌ಸ್ಟಾರ್‌ ಸಂಸ್ಥೆಗಳು ಬರೋಬ್ಬರಿ 5. 5 ಕೋಟಿ ರೂಪಾಯಿ ಮತ್ತು ಜಿಎಸ್‌ಟಿ ಕೊಟ್ಟು ಖರೀದಿ ಮಾಡಿವೆ ಎಂದು ಮೂಲಗಳು ತಿಳಿಸಿವೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಹಕ್ಕುಗಳನ್ನೂ ಖರೀದಿ ಮಾಡಲಾಗಿದೆ. ಕಲರ್ಸ್‌ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರವಾಗಲಿದ್ದು, ಕೆಲವೇ ದಿನಗಳಲ್ಲಿ ಹಾಟ್‌ಸ್ಟಾರ್‌ ಓಟಿಟಿಯಲ್ಲಿ ಈ ಸಿನಿಮಾ ನೋಡಬಹುದು ಎನ್ನಲಾಗಿದೆ.

‘ಸು ಫ್ರಂ ಸೋ’ ಚಿತ್ರತಂಡ ರಿಲೀಸ್‌ಗೂ ಮೊದಲೇ ಮತ್ತೊಂದು ಟಿವಿ ವಾಹಿನಿಯವರಿಗೆ ಈ ಸಿನಿಮಾ ತೋರಿಸಿದ್ದು, ಅವರು ಸಿನಿಮಾ ರಿಲೀಸ್‌ ಆದ ಮೇಲೆ ನೋಡೋಣ ಎಂದಿದ್ದರಿಂದ ಈಗ ಮತ್ತೊಂದು ವಾಹಿನಿಯವರಿಗೆ ಸಿನಿಮಾ ಪ್ರಸಾರ ಹಕ್ಕುಗಳು ಮಾರಾಟವಾಗಿದೆ. ಬಹಳಷ್ಟು ಸಮಯದಿಂದ ಸಿನಿಮಾಗಳಿಗೆ ಸೂಕ್ತವಾದ ಸ್ಯಾಟಲೈಟ್‌ ಮತ್ತು ಡಿಜಿಟಲ್‌ ಹಕ್ಕು ಮಾರಾಟ ಹಣವೂ ದೊರೆಯುತ್ತಿರಲಿಲ್ಲ. ಕೆಲವೇ ಸಿನಿಮಾಗಳಿಗೆ ಆ ಭಾಗ್ಯ ದೊರೆಯುತ್ತಿತ್ತು. ಆದರೆ ‘ಸು ಫ್ರಂ ಸೋ’ ದೊಡ್ಡ ಮಟ್ಟದಲ್ಲಿ ಗೆದ್ದಿದ್ದರಿಂದ ಅಲ್ಲಿಯೂ ಗೆಲುವು ಸಾಧಿಸಿದೆ.

Shwetha M