ಸು ಫ್ರಮ್‌ ಸೋ OTTಯಲ್ಲಿ ರಿಲೀಸ್‌ ಆಗಲ್ಲ!? – ಸುಳ್ಳು ಸುದ್ದಿ.. ಜಿಯೋ ಹಾಟ್‌ ಸ್ಟಾರ್‌ ಹೇಳಿದ್ದೇನು?

ಸು ಫ್ರಮ್‌ ಸೋ OTTಯಲ್ಲಿ ರಿಲೀಸ್‌ ಆಗಲ್ಲ!? – ಸುಳ್ಳು ಸುದ್ದಿ.. ಜಿಯೋ ಹಾಟ್‌ ಸ್ಟಾರ್‌ ಹೇಳಿದ್ದೇನು?

ಹೊಸಬರೇ ಸೇರಿಕೊಂಡು ಮಾಡಿದ್ದ ಸು ಫ್ರಮ್‌ ಸೋ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿದೆ. ಬಾಕ್‌ಸ್‌ಆಫೀಸ್‌ನಲ್ಲಿ ಕೋಟಿ ಕೋಟಿ ಗಳಿಕೆ ಮಾಡಿದೆ. ಇತರ ಭಾಷೆಗಳಲ್ಲೂ ಈ ಸಿನಿಮಾ ತೆರೆ ಕಂಡಿದ್ದು,  ಜುಲೈ ನಲ್ಲಿ ಈ ಸಿನಿಮಾ ತೆರೆಕಂಡರು ಕೂಡ ಸೆಪ್ಟೆಂಬರ್‌ವರೆಗೂ ಕೂಡ ಹೌಸ್ ಫುಲ್ ಕಲೆಕ್ಷನ್ ಮಾಡುತ್ತಾ ಬಂದಿದೆ‌. ಇತ್ತೀಚೆಗೆ ಈ ಸಿನಿಮಾ ಒಟಿಟಿಗೆ ಲಗ್ಗೆ ಇಡುತ್ತೆ ಅಂತಾ ಹೇಳಲಾಗ್ತಿತ್ತು.. ಆದ್ರೀಗ ಸು ಫ್ರಮ್‌ ಸೋ ಒಟಿಟಿಯಲ್ಲಿ ರಿಲೀಸ್‌ ಆಗಲ್ವಾ? ಸುಳ್ಳು ಸುದ್ದಿ ಹಬ್ಬಿಸಲಾಯ್ತಾ ಅನ್ನೋ ಅನುಮಾನ ಮೂಡಿದೆ.

ಇದನ್ನೂ ಓದಿ: ಮಹಾರಾಜ ಬಾಯ್ಸ್ ಮೇಲೆ RCB ಕಣ್ಣು – ಬೆಸ್ಟ್ ಬೌಲರ್ಸ್ & ಬ್ಯಾಟರ್ಸ್ ಯಾರೆಲ್ಲಾ?

ಹೌದು.. ಸು ಫ್ರಮ್‌ ಸೋ ಸಿನಿಮಾ ಅಬ್ಬರ ಇನ್ನೂ ನಿಂತಿಲ್ಲ.. ಇತರ ಭಾಷೆಗಳಲ್ಲೂ ಹೌಸ್‌ ಫುಲ್‌ ಪ್ರದರ್ಶನ ಕಾಣ್ತಿದೆ. ಈಗಾಗಲೇ 100 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ ಈ ಸಿನಿಮಾ. ಸಿನಿಮಾ ಗೆಲ್ತಿದ್ದಂತೆ  ಸು ಫ್ರಮ್‌ ಸೋ ಸಿನಿಮಾ ಅತೀ ಶೀಘ್ರದಲ್ಲಿ ಒಟಿಟಿಗೆ ಬರುತ್ತದೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಈ ಮೂಲಕ ಸೆಪ್ಟೆಂಬರ್ 5ರಂದು ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಸಿನಿಮಾ ಶೀಘ್ರವೇ ತೆರೆಕಾಣುತ್ತದೆ ಎಂದು ಹೇಳಲಾಗ್ತಿತ್ತು. ಆದ್ರೆ ಈ ಬಗ್ಗೆ ಇದುವರೆಗೂ ಜಿಯೋ ಹಾಟ್ ಸ್ಟಾರ್ ನಲ್ಲಿ ಯಾವುದೆ ಅಧಿಕೃತ ಮಾಹಿತಿ ಬಂದಿಲ್ಲ. ಯಾವುದೇ ಪ್ರೋಮೋ ಕೂಡ ರಿಲೀಸ್‌ ಅಗಿಲ್ಲ.  ಹಾಗಾದರೆ ಈ ಸಿನಿಮಾ ಯಾವಾಗ ಒಟಿಟಿಗೆ ಅನ್ನೋ ಪ್ರಶ್ನೆ ಸಿನಿಪ್ರಿಯರನ್ನ ಕಾಡ್ತಿದೆ.

ಸು ಫ್ರಮ್ ಸೋ ಸಿನಿಮಾಕ್ಕೆ ಜಾಹೀರಾತು ಇತರ ಪ್ರಚಾರ ಬಹಳ ಕಮ್ಮಿ ಇತ್ತು. ಆದರೆ ಫ್ರಿಮಿಯಂ ಶೋ ಮೂಲಕ ಜನರ ಬಾಯ್ ಮಾತಿನಿಂದಲೇ ಈ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಪಡೆ ಯಿತು. ಒಟಿಟಿಗೆ ಶೀಘ್ರವೇ ಬರುತ್ತೆ ಎಂದು ಸಹ ಹೇಳಲಾಗಿತ್ತು. ವೈರಲ್ ಆದ ಸುದ್ದಿಯ ಪ್ರಕಾರ ಸೆಪ್ಟೆಂಬರ್ 5ರ ಬೆಳಗ್ಗೆ ಈ ಸಿನಿಮಾ ಜಿಯೋ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಆಗಲಿಲ್ಲ. ಜೊತೆಗೆ ಹಾಟ್ ಸ್ಟಾರ್ ಕೂಡ ಈ ಬಗ್ಗೆ ಯಾವುದೇ ಪ್ರಮೋಶನ್ ಸಹ ನೀಡಿಲ್ಲದ ಕಾರಣ ಈ ಸಿನಿಮಾ ಇನ್ನು ಕೂಡ ಒಟಿಟಿಗೆ ಬರಲಿಲ್ಲ ಎಂದೇ ಹೇಳಬಹುದು. ಯಾವುದಾದರೂ ಸಿನಿಮಾ ದೊಡ್ಡಮಟ್ಟಿಗೆ ನಿರೀಕ್ಷೆ ಹುಟ್ಟು ಹಾಕಿದರೆ ಅದರ ಒಟಿಟಿ ಹಾಗೂ ಟಿವಿ ಪ್ರಸಾರಕ್ಕೆ ಹಕ್ಕು ಸ್ವಾಮ್ಯ ಕೂಡ ದೊಡ್ಡ ಮಟ್ಟಕ್ಕೆ ಮಾರಾಟ ಆಗಲಿದೆ. ಅಂತೆಯೇ ಈ ಸಿನಿಮಾ ಈಗಾಗಲೇ ಜಿಯೋ ಹಾಟ್ ಸ್ಟಾರ್ ಪಡೆದದ್ದೇ ಹೌದಾದರೆ ಅದು ದೊಡ್ಡ ಮಟ್ಟಿಗೆ ಸುದ್ದಿಯಾಗ ಬೇಕಿತ್ತು. ಆದರೆ ಈ ಸುದ್ದಿ ಗಾಸಿಪ್ ಆಗಿ ಮಾತ್ರ ಉಳಿದಿದೆ.

ಸೆಪ್ಟೆಂಬರ್​ನಲ್ಲಿ ಯಾವೆಲ್ಲ ಸಿನಿಮಾ, ವೆಬ್ ಸೀರಿಸ್ ಹಾಗೂ ಶೋಗಳು ಬಿಡುಗಡೆ ಆಗುತ್ತಿವೆ ಎಂಬ ಬಗ್ಗೆ ಹಾಟ್​ಸ್ಟಾರ್ ಈಗಾಗಲೇ ಮಾಹಿತಿ ನೀಡಿದೆ. ಆದರೆ, ಇದರಲ್ಲಿ ‘ಸು ಫ್ರಮ್ ಸೋ’ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸದ್ಯಕ್ಕೆ ಜಿಯೋ ಹಾಟ್ ಸ್ಟಾರ್ ನಲ್ಲಿ ಸು ಫ್ರಮ್ ಸೋ ಸಿನಿಮಾ ಬಿಡುಗಡೆಯಾಗೋದು ಡೌಟ್‌ ಅಂತಾ ಹೇಳಲಾಗ್ತಿದೆ.

Shwetha M